Advertisement

Allu Arjun: 10 ಕೋಟಿ ರೂ.ವಿನ ಜಾಹೀರಾತು ಆಫರ್‌ನ್ನು ರಿಜೆಕ್ಟ್‌ ಮಾಡಿದ ಅಲ್ಲು ಅರ್ಜುನ್

11:14 AM Dec 20, 2023 | Team Udayavani |

ಹೈದರಾಬಾದ್: ಸ್ಟೈಲಿಸ್ಟ್‌ ಸ್ಟಾರ್‌ ಅಲ್ಲು ಅರ್ಜುನ್‌  ಅಭಿಮಾನಿಗಳು ʼಪುಷ್ಪ-2ʼ ಸಿನಿಮಾಕ್ಕಾಗಿ ಕಾಯುತ್ತಿದ್ದಾರೆ. ಅಲ್ಲು ಅರ್ಜುನ್‌ ಅವರಿಗೆ ದೊಡ್ಡ ಫ್ಯಾನ್‌ ಬೇಸ್‌ ಇದೆ. ಅಭಿಮಾನಿಗಳ ಮನಸ್ಸು ಗೆಲ್ಲುವ ಕೆಲಸವೊಂದನ್ನು ನಟ ಮತ್ತೆ ಮಾಡಿದ್ದಾರೆ.

Advertisement

ಜಾಹೀರಾತುಗಳ ಆಯ್ಕೆ ವಿಚಾರದಲ್ಲಿ ‘ಬನ್ನಿ’ ಮೊದಲಿನಿಂದಲೂ ಎಚ್ಚರಿಕೆಯಿಂದಲೇ ಹೆಜ್ಜೆಯಿಡುತ್ತಾರೆ. ಜನರಿಗೆ ತೊಂದರೆ ಅಥವಾ ದಿಕ್ಕು ತಪ್ಪಿಸುವ ಜಾಹೀರಾತಿನಲ್ಲಿ ಅಲ್ಲು ಅರ್ಜುನ್‌ ಕಾಣಿಸಿಕೊಳ್ಳುವುದಿಲ್ಲ. ತಂಬಾಕು, ಮದ್ಯಪಾನ ಕಂಪೆನಿಗಳ ಜಾಹೀರಾತಿನಲ್ಲಿ ಅಲ್ಲು ಮೊದಲಿನಿಂದಲೂ ಕಾಣಿಸಿಕೊಳ್ಳುವುದಿಲ್ಲ.

ಇದೀಗ 10 ಕೋಟಿ ರೂಪಾಯಿ ಜಾಹೀರಾತನ್ನು ಅಲ್ಲು ಅರ್ಜುನ್‌ ತಿರಸ್ಕರಿಸಿದ್ದಾರೆ ಎನ್ನುವ ಬಗ್ಗೆ ವರದಿಯಾಗಿದೆ.

ಇದನ್ನೂ ಓದಿ: Video: ಅತ್ತೆ ಜೊತೆ ಆಳಿಯನ ಲವ್ವಿಡವ್ವಿ; ರೊಮ್ಯಾನ್ಸ್ ವೇಳೆ ಗ್ರಾಮಸ್ಥರ ಕೈಗೆ ಸಿಕ್ಕ ಜೋಡಿ

ಮದ್ಯ ಮತ್ತು ಪಾನ್ ಬ್ರ್ಯಾಂಡ್ ಆಫರ್ ಅನ್ನು ತಿರಸ್ಕರಿಸಿದ್ದಾರೆ. ಈ ಕಂಪೆನಿ ʼಪುಷ್ಪಾ-2ʼ  ಸಿನಿಮಾದಲ್ಲಿ ಅಲ್ಲು ಅರ್ಜುನ್‌ ಪ್ರತಿಬಾರಿ ತಂಬಾಕು ಜಗಿಯುವಾಗ ಅಥವಾ ಮದ್ಯವನ್ನು ಸೇವಿಸುವಾಗ ತಮ್ಮ ಕಂಪೆನಿಯ ಲೋಗೋವನ್ನು ಸ್ಕ್ರೀನ್‌ ಮೇಲೆ ತೋರಿಸಬೇಕು. ಇದಕ್ಕೆ 10 ಕೋಟಿ ನೀಡುತ್ತೇವೆ ಎಂದು ಚಿತ್ರತಂಡಕ್ಕೆ ಆಫರ್‌ ನೀಡಿತ್ತು. ಆದರೆ ಇದನ್ನು ನಟ ಅಲ್ಲು ಅರ್ಜುನ್‌ ರಿಜೆಕ್ಟ್‌ ಮಾಡಿದ್ದಾರೆ.

Advertisement

ತಾನು ಇಂತಹ ಜಾಹೀರಾತು ಬ್ರ್ಯಾಂಡ್‌ ಗಳನ್ನು ಪ್ರಚಾರ ಮಾಡುವುದಕ್ಕೆ ಇಷ್ಟಪಡಲ್ಲ ಎಂದು ಅಲ್ಲು ಅರ್ಜುನ್‌ ಹೇಳಿದ್ದಾರೆ.

ಈ ರೀತಿಯ ಬ್ರ್ಯಾಂಡ್‌ ಗಳ ಜಾಹೀರಾತನ್ನು ಅಲ್ಲು ಅರ್ಜುನ್‌ ತಿರಸ್ಕರಿಸುವುದು ಇದೇ ಮೊದಲಲ್ಲ. ಈ ಹಿಂದೆ ʼಪುಷ್ಪʼ ಸಿನಿಮಾದ ಬಳಿಕ ಅವರಿಗೆ ಕೋಟಿ ನೀಡುವ ಪಾನ್‌ ಮಸಾಲ ಕಂಪೆನಿಯ ಜಾಹೀರಾತು ಆಫರ್‌ ಬಂದಿತ್ತು. ಆದರೆ ಅದನ್ನು ಅವರು ತಿರಸ್ಕರಿಸಿದ್ದರು.

ಅಲ್ಲು ಅರ್ಜುನ್‌ ಸದ್ಯ ʼಪುಷ್ಪಾ-2ʼ ಚಿತ್ರೀಕರಣದಲ್ಲಿ ನಿರತರಾಗಿದ್ದಾರೆ. ಸುಕುಮಾರ್‌ ನಿರ್ದೇಶನದ ಈ ಸಿನಿಮಾದಲ್ಲಿ ಫಾಹದ್ ಫಾಸಿಲ್, ರಶ್ಮಿಕಾ ಮಂದಣ್ಣ, ಸುನೀಲ್, ಪ್ರಕಾಶ್ ರಾಜ್ , ಡಾಲಿ ಧನಂಜಯ ಜಗಪತಿ ಬಾಬು ಮುಂತಾದವರು ಕಾಣಿಸಿಕೊಳ್ಳಲಿದ್ದಾರೆ.

2024 ರ ಆಗಸ್ಟ್‌ 15 ರಂದು ಸಿನಿಮಾ ತೆರೆ ಕಾಣಲಿದೆ.

 

Advertisement

Udayavani is now on Telegram. Click here to join our channel and stay updated with the latest news.

Next