Advertisement

Dhananjaya: ಪುಷ್ಪ-2 ನಲ್ಲಿ ಜಾಲಿ ರೆಡ್ಡಿಯಾಗಿ ಡಾಲಿ ಇರೋದು ಕನ್ಫರ್ಮ್; ಚಿತ್ರ ತಂಡ ಟ್ವೀಟ್

03:28 PM Aug 23, 2023 | Team Udayavani |

ಹೈದರಾಬಾದ್: ನಟರಾಕ್ಷಸ  ಡಾಲಿ ಧನಂಜಯ ಅವರದಿಂದು ಹುಟ್ಟುಹಬ್ಬ. ಅವರ ಹುಟ್ಟು ಹಬ್ಬಕ್ಕೆ ಹೊಸ ಸಿನಿಮಾದ ಪೋಸ್ಟರ್‌, ಟೀಸರ್‌ ಗಳು ರಿಲೀಸ್ ಆಗಿವೆ.

Advertisement

ʼಟಗರುʼ ಮೂಲಕ ಖಳ ನಾಯಕನ ಪಾತ್ರದಲ್ಲಿ ʼಡಾಲಿʼಯಾಗಿ ಮಿಂಚಿದ ಧನಂಜಯ ಅವರಿಗೆ ಪರಭಾಷೆಯಲ್ಲೂ ಅಭಿಮಾನಿಗಳಿದ್ದಾರೆ. ಅವರ ಖಡಕ್‌ ಲುಕ್‌ & ಮಾಸ್‌ ಅವತಾರಕ್ಕೆ ಅನ್ಯಭಾಷೆಯ ಸಿನಿ ಪ್ರೇಕ್ಷಕರು ಫಿದಾ ಆಗಿದ್ದಾರೆ.

ಸ್ಟೈಲಿಸ್ಟ್‌ ಸ್ಟಾರ್‌ ಅಲ್ಲು ಅರ್ಜುನ್ ಅವರ ʼಪುಷ್ಪʼ ಸಿನಿಮಾದಲ್ಲಿನ ಡಾಲಿ ಅವರ ಜಾಲಿ ರೆಡ್ಡಿ(ಜಲ್ಲಿ ರೆಡ್ಡಿ) ಪಾತ್ರ ಪ್ರೇಕ್ಷಕರ ಗಮನ ಸೆಳೆದಿತ್ತು. ಚಂದನವನದ ಸ್ಮಗ್ಲರ್‌ ಕೊಂಡಾ ರೆಡ್ಡಿ ಅವರ ತಮ್ಮನಾಗಿ ಖಡಕ್‌ ಲುಕ್‌ ನಲ್ಲಿ ಕಾಣಿಸಿಕೊಂಡಿರುವ ಡಾಲಿ ಧನಂಜಯ ಅವರ ನಟನೆಗೆ ಶಹಬ್ಭಾಸ್‌ ಗಿರಿ ಸಿಕ್ಕಿತ್ತು.

ʼಪುಷ್ಪʼ ಸಿನಿಮಾದಲ್ಲಿ ಜಾಲಿ ರೆಡ್ಡಿಗೆ ಒಂದು ಗತಿ ಕಾಣಿಸಿ ಆತನನ್ನು ಪಾರ್ಶ್ವವಾಯುಗೊಳ್ಳುವಂತೆ ಮಾಡಿದ್ದನ್ನು ತೋರಿಸಲಾಗಿತ್ತು.  ಈ ಕಾರಣದಿಂದ ಡಾಲಿ ಧನಂಜಯ್‌ ʼಪುಷ್ಪ-2ʼ ನಲ್ಲಿ ಇರಲಿದ್ದಾರ ಇಲ್ವೋ ಎನ್ನುವುದರ ಬಗ್ಗೆ ಅನೇಕರಿಗೆ ಪ್ರಶ್ನೆಗಳಿದ್ದವು.

ಆದರೆ ಈ ಬಗ್ಗೆ ಡಾಲಿ ಅವರ ಹುಟ್ಟುಹಬ್ಬಕ್ಕೆ ಚಿತ್ರತಂಡ ಈ ಪ್ರಶ್ನೆಗೆ ಪೋಸ್ಟರ್‌ ವೊಂದನ್ನು ಹಾಕಿ ಉತ್ತರಿಸಿದೆ.

Advertisement

“ಎಲ್ಲಾ ಸಮಸ್ಯೆಗಳನ್ನು ಸೆಟಲ್‌ ಮಾಡಲು ಜಾಲಿ ರೆಡ್ಡಿ ಈ ಬಾರಿ ಮತ್ತೆ ಬರುತ್ತಿದ್ದಾರೆ” ಎಂದು ಹುಟ್ಟುಹಬ್ಬದ ಶುಭಾಶಯವನ್ನು ಕೋರಿ ವಿಚಾರವನ್ನು ಅಧಿಕೃತವಾಗಿ ಹೇಳಿದೆ.

ಎಸ್ಪಿ ಭನ್ವರ್ ಸಿಂಗ್ ಶೇಖಾವತ್, ರಶ್ಮಿಕಾ ಮಂದಣ್ಣ, ಜಗದೀಶ್ ಪ್ರತಾಪ್ ಬಂಡಾರಿಯಾಗಿ ಫಾಹದ್ ಫಾಸಿಲ್ ʼಪುಷ್ಪ-2ʼ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.

 ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಘೋಷಣೆ: ಇನ್ನು ಡಾಲಿ ಧನಂಜಯ ಹುಟ್ಟುಹಬ್ಬಕ್ಕೆ ಹೊಸ ಸಿನಿಮಾಗಳನ್ನು ಘೋಷಿಸಿದ್ದಾರೆ. ʼಬಡವ ರಾಸ್ಕಲ್‌ʼ ನಿರ್ದೇಶಕ ಶಂಕರ್‌ ಗುರು ಜೊತೆ ಡಾಲಿ ಮತ್ತೆ ಕೈಜೋಡಿಸಲಿದ್ದು,  “ಅಣ್ಣಾ ಫ್ರಮ್‌ ಮೆಕ್ಸಿಕೋʼ ಸಿನಿಮಾದ ಮೋಷನ್‌ ಪಿಕ್ಚರ್‌ ರಿಲೀಸ್‌ ಆಗಿದೆ.  ಈ ಸಿನಿಮಾ ನವೆಂಬರ್‌ ನಲ್ಲಿ ಸೆಟ್ಟೇರಲಿದೆ.

ರೋಹಿತ್‌ ಪದಕಿ ಅವರ ʼ ‘ಉತ್ತರಕಾಂಡ’ ಚಿತ್ರದ ʼಗಬ್ರು ಸತ್ಯ ʼ ಪಾತ್ರವನ್ನು ಟೀಸರ್‌ ಮೂಲಕ ಹುಟ್ಟುಹಬ್ಬದ ಪ್ರಯುಕ್ತ ರಿವೀಲ್‌ ಮಾಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next