ರಾಣಿಬೆನ್ನೂರ: ಗಾಯತ್ರಿ ಮಂತ್ರ ನಿತ್ಯ ಜಪಿಸುವುದರಿಂದ ದೇಹದ ನಾಡಿ ಶುದ್ಧಿಯಾಗುತ್ತದೆ. ಸ್ವಯಂ ದೇವರ ಸ್ವರೂಪವೇ ಆಗಿದ್ದ ಹುಬ್ಬಳ್ಳಿಯ ಶ್ರೀ ಸಿದ್ಧಾರೂಢರು ಈ ಮಂತ್ರವನ್ನು ತ್ರಿಕಾಲ ಜಪಿಸುತ್ತಿದ್ದರು ಎಂದು ಗುರು ನಾಗರಾಜಾನಂದ ಮಹಾಸ್ವಾಮಿಗಳು ಹೇಳಿದರು.
Advertisement
ತಾಲೂಕಿನ ಸುಕ್ಷೇತ್ರ ಖಂಡೇರಾಯನಹಳ್ಳಿಯ ಶ್ರೀ ಸಿದ್ಧಾರೂಢ ಮಠದಲ್ಲಿ ಲೋಕ ಕಲ್ಯಾಣಾರ್ಥವಾಗಿ ಏರ್ಪಡಿಸಲಾಗಿದ್ದ ದೇವಿ ಪುರಾಣ ಪ್ರವಚನ, ಮಂಗಲ ಮತ್ತು ಗಾಯತ್ರಿ ಹೋಮ-ಹವನ, ಪೂಜಾ ಕೈಂಕರ್ಯ ನೆರವೇರಿಸಿ, ಹೋಮಕ್ಕೆ ಪೂರ್ಣಾಹುತಿ ಸಲ್ಲಿಸಿ ಆಶೀರ್ವಚನ ನೀಡಿದರು. ಆಯುರ್ವೇದ ಶಾಸ್ತ್ರದ ಪ್ರಕಾರ ನಮ್ಮ ದೇಹದಲ್ಲಿ 72 ಸಾವಿರ ಪ್ರಧಾನ ನಾಡಿಗಳಿವೆ. ಬಲಭಾಗದಲ್ಲಿ 36 ಸಾವಿರ, ಎಡಭಾಗದಲ್ಲಿ 36 ಸಾವಿರ ನಾಡಿಗಳಾಗಿ ವಿಭಾಗಿಸಲ್ಪಟ್ಟಿದೆ ಎಂದರು.
ವ್ಯಾಹೃತಿಗಳಾದವು (ಭೂಃ ಭುವಃ ಸುವಃ) ಮೂರು ವ್ಯಾಹೃತಿಗಳು ಬೆಳೆದು ಮೂರು ಪಾದದ ಗಾಯತ್ರಿಯಾಯಿತು. ವೇದಮಾತೆ
ಗಾಯತ್ರಿ ಮಂತ್ರವನ್ನು ಜಪಿಸುತ್ತ ಸಾಯಂ-ಪ್ರಾತಃ ಸಂಧ್ಯಾವಂದನೆಯನು ಪಾಲಿಸುತ್ತಾರೋ ಅವರು ಗಾಯತ್ರಿ
ಮಾತೆಯ ಭಕ್ತಿಗೆ ಪಾತ್ರರಾಗುತ್ತಾರೆ. ತೇತ್ರಾಯುಗದಲ್ಲಿ ಶ್ರೀರಾಮಚಂದ್ರನು ನಾರದ ಮುನಿಗಳ ಮಾರ್ಗದರ್ಶನದಂತೆ ನವರಾತ್ರಿ ವ್ರತವನ್ನು ಆಚರಿಸಿ ರಾವಣನನ್ನು
ಸಂಹರಿಸಿದ ಹಾಗೂ ದ್ವಾಪರ ಯುಗದಲ್ಲಿ ಶ್ರೀದೇವತೆಯನ್ನು ಪೂಜಿಸಿ ಆರ್ಶೀವಾದ ಪಡೆದ ಪಾಂಡವರು ದುಷ್ಟರಿಂದ ಬಿಡುಗಡೆ
ಹೊಂದಿದರೆಂದು ಮಹಾಭಾರತದಲ್ಲಿ ನೋಡುತ್ತೇವೆ. ಅದರ ಸಂಕೇತವಾಗಿ ಇಂದು ನಾವು ದಸರಾ ಉತ್ಸವ ಆಚರಿಸುತ್ತಿದ್ದೇವೆ
ಎಂದು ಶ್ರೀಗಳು ತಿಳಿಸಿದರು.
Related Articles
ಬ್ರಹ್ಮಿಮೂರ್ತದಲ್ಲಿ ಅಭಿಷೇಕ, ಬಿಲ್ವಾರ್ಚನೆ, ವಿವಿಧ ಹೂವುಗಳ ಅಲಾಂಕಾರದೊಂದಿಗೆ ಗಾಯತ್ರಿ ಹೋಮ, ಹವನ ಹಾಗೂ ನವಗ್ರಹ ಪೂಜಾ ವಿಧಿ-ವಿಧಾನಗಳನ್ನು ನಡೆಸಿಕೊಟ್ಟರು.
Advertisement
ಶ್ರೀಮಠದ ಅಧ್ಯಕ್ಷ ಫಕ್ಕೀರಪ್ಪ ಗೌಡ್ರ, ನ್ಯಾಯವಾದಿ ಎಂ.ಬಿ. ಚಿನ್ನಪ್ಪನವರ, ಗ್ರಾಪಂ ಮಾಜಿ ಅಧ್ಯಕ್ಷ ಜನಾರ್ದನ ಕಡೂರು,ಅರುಣಸ್ವಾಮಿ ಹಿರೇಮಠ, ಗೋಪಾಲ ಕೊಡ್ಲೆರ, ಡಾಕೇಶ ಲಮಾಣಿ, ಶಿವಪ್ಪ ಬಣಕಾರ, ಶಿವು ಗುತ್ತೂರ, ವಿಶ್ವನಾಥ ಕುಂಬಳೂರ, ಮೈಲಾರಪ್ಪ ಸೋಮಲಾಪುರ, ಪ್ರಕಾಶ ಚನ್ನಗೌಡ್ರ, ಗುರುಶಾಂತ ಬಾಗಿಲದವರ, ಜಯಪ್ಪ ನೆಲವನ್ನಿ, ಮುರಗೇಶ ಬಣಕಾರ, ಡಾ| ಸುನಿತಾ, ಸಂದೀಪ ಮಾಕನೂರ, ಭರಮಪ್ಪ ಕೊಡ್ಲೆರ, ಗುಡ್ಡೇಶಿ ಹೆಡಿಯಾಲ, ಮಹಾಂತೇಶಗೌಡ್ರ ಸೇರಿದಂತೆ ಸಾವಿರರೂ ಭಕ್ತರು ಮತ್ತು ಮಹಿಳೆಯರು ಹೋಮದಲ್ಲಿ ಪಾಲ್ಗೊಂಡಿದ್ದರು.