Advertisement

ಪರಿಶುದ್ಧ ಮನಸ್ಸಿನಿಂದ ಸುಂದರ ಸಮಾಜ: ಬಿ. ರಮಾನಾಥ ರೈ

03:35 AM Feb 16, 2017 | Team Udayavani |

ಮಂಗಳೂರು: ದ್ವೇಷ, ಅಸೂಯೆ, ಮದ-ಮಾತ್ಸರ್ಯ ಗಳನ್ನು ದೂರ ಮಾಡಿ ನಾವೆಲ್ಲರೂ ಒಂದಾಗಬೇಕು. ನಾವು ಪರಿಶುದ್ಧ ಮನಸ್ಸು ಹೊಂದಿದಲ್ಲಿ ಮಾತ್ರ ಸುಂದರ ಸಮಾಜ ನಿರ್ಮಾಣ ಸಾಧ್ಯ ಎಂದು ಸಚಿವ ಬಿ. ರಮಾನಾಥ ರೈ ಹೇಳಿದರು.

Advertisement

ಅಡ್ಯಾರು ಬೈದ್ಯಾವಿನ ಬೈದ್ಯಾವು ಗಿರಿ ಶ್ರೀ ವೈದ್ಯನಾಥ ದೈವಸ್ಥಾನದ ಬ್ರಹ್ಮಕಲಶೋತ್ಸವದ ಅಂಗವಾಗಿ ಬುಧವಾರ ಯೋಜಿಸಲಾದ ಸಭಾಕಾರ್ಯಕ್ರಮದಲ್ಲಿ ಮುಖ್ಯ ಅತಿಥಿ ಯಾಗಿ ಭಾಗವಹಿಸಿ ಅವರು ಮಾತನಾಡಿದರು. ಪ್ರೀತಿಯಿಂದ ಮಾತ್ರ ಸಾಧ್ಯ
ನಮ್ಮಲ್ಲಿ ಋಣಾತ್ಮಕ ಗುಣಗಳನ್ನು ಹೋಗಲಾಡಿಸಿ, ಮಗುವಿನಂತಹ ಮನಸ್ಸು ಬೆಳೆಸಿಕೊಂಡಲ್ಲಿ ಅಭಿವೃದ್ಧಿ ಸಾಧ್ಯ. ಅಸೂಯೆ, ದ್ವೇಷದಿಂದ ಯಾವುದನ್ನೂ ಗೆಲ್ಲಲು ಸಾಧ್ಯವಿಲ್ಲ. ಕೇವಲ ಪ್ರೀತಿಯಿಂದ ಮಾತ್ರ ಸಾಧ್ಯ. ಊರಿನ ಜನರೇ ಆರ್ಥಿಕ ಸಹಾಯ ಒದಗಿಸಿ  ಕಾರ್ಯಕ್ರಮ ಗಳನ್ನು ನಡೆಸುತ್ತಿದ್ದಾರೆ. ಇದರಿಂದ ಸಾಕಷ್ಟು ದೇವಸ್ಥಾನ, ದೈವಸ್ಥಾನಗಳು ಜೀರ್ಣೋದ್ಧಾರವಾಗಿವೆ ಎಂದರು.

ಎಲ್ಲರಿಗೂ ಸ್ಥಾನವಿದೆ
ಉದ್ಘಾಟಿಸಿದ ಸಂಸದ ನಳಿನ್‌ ಕುಮಾರ್‌ ಕಟೀಲು ಮಾತನಾಡಿ, ಅಸ್ಪೃಶ್ಯತೆಯಿಲ್ಲದ, ಸಾಮರಸ್ಯ ಹೊಂದಿರುವ ಜಿಲ್ಲೆ ನಮ್ಮ ದ.ಕ. ಜಿಲ್ಲೆ. ಕೃಷಿ ಸಂಸ್ಕೃತಿಯ ಚಿಂತನೆ ಹಾಗೂ ತಳಹದಿಯೊಂದಿಗೆ ತುಳುನಾಡು ಬೆಳೆಯುತ್ತಿದೆ. ಯಾರೂ ಮೇಲು ಕೀಳೆನ್ನದೆ ಪ್ರತಿಯೊಂದು ಜಾತಿಯ ವ್ಯಕ್ತಿಗಳಿಗೂ ದೈವಾರಾಧನೆ ಯಲ್ಲಿ ವಿಶಿಷ್ಟ ಸ್ಥಾನವಿದೆ ಎಂದರು. 

ಶ್ರೀ ನಾರಾಯಣ ಗುರು ಕಾಲೇಜಿನ ಉಪನ್ಯಾಸಕ ಕೇಶವ ಬಂಗೇರ ಧಾರ್ಮಿಕ ಉಪನ್ಯಾಸ ನೀಡಿದರು. ಅಡ್ಯಾರು ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ಆಡಳಿತ ಮೊಕ್ತೇಸರ ಬಿ. ಉಮೇಶ ಮಲ್ಲಿ ಸಭೆ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭ ಉಡುಪಿ ಉಜ್ವಲ್‌ ಡೆವಲಪರ್ನ ಪುರುಷೋತ್ತಮ ಶೆಟ್ಟಿ ಅವರನ್ನು ಸಮ್ಮಾನಿಸಲಾಯಿತು. ಮಾಜಿ ಸಚಿವ ಕೃಷ್ಣ ಜೆ. ಪಾಲೆಮಾರ್‌, ಶಾಸಕ ಮೊದಿನ್‌ ಬಾವಾ, ಉಡುಪಿ ಉಜ್ವಲ್‌ ಡೆವಲಪರ್ನ ಪುರುಷೋತ್ತಮ ಶೆಟ್ಟಿ, ಮುಂಬೈನ ಪೊಲೀಸ್‌ ಅಧಿಕಾರಿ ಪ್ರಕಾಶ್‌ ಭಂಡಾರಿ, ಅಡ್ಯಾರುಗುತ್ತು ಮಹಾಬಲ ಶೆಟ್ಟಿ, ಅಡ್ಯಾರು ಬೈದ್ಯಾವು ಸುವರ್ಣ ಕುಟುಂಬ ಅಧ್ಯಕ್ಷ ಲಕ್ಷ್ಮಣ್‌ ಸುವರ್ಣ, ಕಟೀಲು ಕಾಲೇಜಿನ ಪ್ರಾಂಶುಪಾಲ ಬಾಲಕೃಷ್ಣ ಶೆಟ್ಟಿ, ಇಂದ್ರಾಳಿ ಜಯಕರ ಶೆಟ್ಟಿ, ಕಾರ್ತಿಕ್‌ ಮಾರ್ಲ, ಮೂಡಾಡಿ ಗುತ್ತು ಭಾಸ್ಕರ ಶೆಟ್ಟಿ,
ನಡಿಗುತ್ತು ಸದಾಶಿವ ಶೆಟ್ಟಿ, ಅಡ್ಯಾರು ಗುತ್ತು ಜಯಶೀಲ ಅಡ್ಯಂತಾಯ, ಕರುಣಾಕರ ಶೆಟ್ಟಿ ಭಂಡಾರಿಂಜ, ಪ್ರಧಾನ ಸಂಚಾಲಕ ಎ. ಜನಾರ್ದನ ಸುವರ್ಣ, ಪ್ರಧಾನ ದೈವ ಪಾತ್ರಿಗಳಾದ ಅಂತ ಪೂಜಾರಿ, ಕಾಂತು ಪೂಜಾರಿ, ತಿಮ್ಮಪ್ಪ ಪೂಜಾರಿ, ಸಮಿತಿಯ ಪ್ರಧಾನ ಕಾರ್ಯದರ್ಶಿ ಅಡ್ಯಾರು ಗುತ್ತು ಸುರೇಂದ್ರ ಕಂಬ್ಳಿ, ಕೋಶಾಧಿಕಾರಿ ಪ್ರಮೋದ್‌ ಕುಮಾರ್‌ ಶೆಟ್ಟಿ ಭಂಡಾರಿಂಜ, ಪ್ರಧಾನ ಸಂಚಾಲಕ ಬೈದ್ಯಾವು ಗುತ್ತು ಸಮೀರ್‌ ಹೆಗ್ಡೆ ಸಮಿತಿ ಪದಾಧಿಕಾರಿಗಳು ಉಪಸ್ಥಿತರಿದ್ದರು. ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ತೋಕೂರು ಗುತ್ತು ಉದಯ ಕುಮಾರ್‌ ಶೆಟ್ಟಿ ಸ್ವಾಗತಿಸಿ, ಪ್ರಧಾನ ಸಂಚಾಲಕ ಅಡ್ಯಾರು ಕೀಲೆ ಪುರುಷೋತ್ತಮ ಭಂಡಾರಿ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next