Advertisement
ನಗರದ ಎಪಿಎಂಸಿ ಪ್ರಾಂಗಣದಲ್ಲಿ ಸರ್ಕಾರದಿಂದ ಅಳವಡಿಸಲಾಗಿದ್ದ ಕೊರೊನಾ ಸೋಂಕು ನಿವಾರಕ ಸುರಂಗ ಮಾರ್ಗವನ್ನು ಉದ್ಘಾಟಿಸಿ ಮಾತನಾಡಿ, ಎಪಿಎಂಸಿಗೆ ಬರುವ ರೈತರು, ಈ ಸುರಂಗ ಮಾರ್ಗದ ಮೂಲಕ ಬರುವುದರಿಂದ ಸೋಂಕು ತಡೆಯಲು ಸಾಧ್ಯ. ಹೀಗಾಗಿ ಮಾರುಕಟ್ಟೆಗೆ ಬರುವವರು ಸೋಂಕು ನಿವಾರಕ ಮಾರ್ಗ ವನ್ನು ಬಳಸಿಕೊಳ್ಳಬೇಕೆಂದರು.
ಆಂಧ್ರದಲ್ಲಿ ಕೊರೊನಾ ಪ್ರಕರಣಗಳು ದಿನನಿತ್ಯ ಹೆಚ್ಚಾಗುತ್ತಿರುವುದರಿಂದ ಕೇವಲ ಎರಡು ಗಡಿಗಳಲ್ಲಿ ಚೆಕ್ ಪೋಸ್ಟ್‌ಗಳನ್ನು ನಿರ್ಮಿಸಿದ್ದರೆ ಸಾಲದು, ಕೂಡಲೇ ಗೋಕುಂಟೆಯಿಂದ ಕುಪ್ಪಂಪಾಳ್ಯದವರೆಗೂ 55 ಕಿ.ಮೀ. ರಸ್ತೆ ಇದ್ದು, ಮಧ್ಯದಲ್ಲಿ 48 ರಸ್ತೆಗಳು ಆಂಧ್ರ ಮತ್ತು ಕರ್ನಾಟಕ್ಕೆ ಸಂಪರ್ಕ ಕಲ್ಪಿಸುತ್ತಿರುವುದರಿಂದ ಎಲ್ಲಾ ಕಡೆಯು ದ್ವಿಚಕ್ರ ವಾಹನಗಳಲ್ಲಿ ಆ ಕಡೆಯಿಂದ ಈ ಕಡೆಗೆ ಬರುವುದು ಹೋಗುವುದು ಮಾಡುತ್ತಿರುವುದರಿಂದ ತಾಲೂಕಿನ ಜನತೆ ಆಂತಕ ಪಡುವಂತಾಗಿದೆ ಎಂದು ಸಚಿವರಿಗೆ ಹೇಳಿದರು. ಸ್ಥಳದಲ್ಲಿದ್ದ ಸಿಪಿಐ ಮಾರ್ಕಂಡಯ್ಯಗೆ ಸಚಿವರು ಎಲ್ಲಾ ರಸ್ತೆಗಳ ಸಂಪರ್ಕವನ್ನು ಕಡಿತ ಮಾಡಿ ಇಲಾಖೆಯಿಂದ ನಿಗಾ ಇಡುವಂತೆ ಸೂಚಿಸಿದರು. ಎಪಿಎಂಸಿ ಅಧ್ಯಕ್ಷ ವಿಶ್ವನಾಥ್, ಉಪಾಧ್ಯಕ್ಷ ಮರೇರು ವೆಂಕಟರಾಮಪ್ಪ, ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ರಾಜೇಂದ್ರಗೌಡ, ಎಪಿಎಂಸಿ ನಿರ್ದೇಶಕರಾದ ಆವಣಿಬಾಬು, ಗೊಲ್ಲಹಳ್ಳಿ ವೆಂಕಟೇಶ್, ಲೆಕ್ಕ ಪರಿಶೋಧಕ ಶಶಿಧರನ್ ಮತ್ತಿತರರು ಇದ್ದರು.