Advertisement
ಒಬ್ಬರಿಂದ ಕೋವಿಡ್ ಗಾಳಿಯ ಮೂಲಕ ಅಥವ ಇತರ ಮೂಲಗಳಿಂದ ತಗುಲಬಹುದು ಎಂಬ ಕಾರಣಕ್ಕೆ ನಾವು ಸಾರ್ವಜನಿಕ ಸಾರಿಗೆಯಿಂದ ದೂರ ಉಳಿಯಲು ಪ್ರಾರಂಭಿಸಿದ್ದೇವೆ.
ಕಾರನ್ನು ಖರೀದಿಸುವುದು ಸಹಜವಾಗಿಯೇ ದುಬಾರಿ ಬಜೆಟ್. ಇದರ ಹೊರತಾಗಿಯೂ ನೀವು ಮಾಡದ ತಪ್ಪಿಗೆ ಕಾನೂನಿನ ಕುಣಿಕೆಗೆ ನೀವು ಸಿಲುಕಿಕೊಳ್ಳುವ ಸಾಧ್ಯತೆ ಕೆಲವು ಸಂದರ್ಭ ಇರುತ್ತದೆ. ನೀವು ಕಾರನ್ನು ಖರೀದಿಸುವ ಮುನ್ನ ಅದರ ದಾಖಲೆ ಪತ್ರಗಳನ್ನು ಸರಿಯಾಗಿ ಗಮನಿಸುವುದು ಒಳ್ಳೆಯದು. ದಾಖಲೆ ಪತ್ರಗಳನ್ನು ಆನ್‌ಲೈನ್‌ನಲ್ಲಿ ಪರಿಶೀಲಿಸುವುದು ಇನ್ನೂ ಉತ್ತಮ. ಯಾರಾದರೂ ಅಕ್ರಮವಾಗಿ ನಿಮಗೆ ಮಾರಾಟ ಮಾಡಲು ಯತ್ನಿಸಿದ್ದಾರೆಯೇ ಎಂಬುದನ್ನು ತಿಳಿದುಕೊಳ್ಳಲು ಹೀಗೆ ಮಾಡುವುದು ಒಳ್ಳೆಯದು. ಇನ್ನು ಕಾರನ್ನು ಖರೀದಿಸಿದ ಮೊದಲ ದಿನವೇ ಕಾರಿನ ಕೈಪಿಡಿಯನ್ನು ಎಚ್ಚರಿಕೆಯಿಂದ ಓದಿ. ಈ ಪುಸ್ತಕದ ಮೂಲಕ ನೀವು ಕಾರಿನ ಸೇವೆ ಮತ್ತು ಇತರ ಪರಿಕರಗಳ ಬಗ್ಗೆ ಮಾಹಿತಿಯನ್ನು ಪಡೆಯಬಹುದು.
Related Articles
Advertisement
ಟಯರ್‌ಗಳ ಬಗೆಗೆ ನಿಗಾ ಇರಲಿಟಯರ್ಗಳು ಕಾರಿನ ಪ್ರಮುಖ ಭಾಗಗಳಲ್ಲಿ ಒಂದಾಗಿದೆ. ನೀವು ಅವುಗಳನ್ನು ಸರಿಯಾಗಿ ನೋಡದೇ ಇದ್ದರೆ ನಿಮ್ಮ ಪ್ರಯಾಣ ಅರ್ಧದಲ್ಲಿ ಮೊಟಕಾಗುವ ಅಪಾಯ ಇದೆ. ಈ ಹಿನ್ನೆಲೆಯಲ್ಲಿ ಮೊದಲೇ ಟಯರ್‌ಗಳು ಸರಿಯಾಗಿವೆ ಎಂಬುದನ್ನು ಪರಿಶೀಲಿಸಿಕೊಳ್ಳಿ. ಪ್ರತಿ ವಾರ ಟೈರ್‌ನ ಗಾಳಿಯನ್ನು ಪರಿಶೀಲಿಸಿ. ವಿಶೇಷವಾಗಿ ಚಾಲನೆ ಮಾಡುವ ಮೊದಲು. ಇನ್ನು ಕಾರಿನ ದಾಖಲೆಯಲ್ಲಿ ಇರುವ ಅನುಸಾರ ಅದೇ ನಿಯಮಗಳ ಪ್ರಕಾರ ಗಾಳಿಯನ್ನು ತುಂಬಿಸಿ. ಜತೆಗೆ ಎಂಜಿನ್ ಮೊದಲಾದ ಮಾಹಿತಿಯನ್ನು ತಜ್ಞರ ಮೂಲಕ ತಿಳಿದುಕೊಳ್ಳುವುದು ಉತ್ತಮ. ವೀಲ್ಹ್ಲ್ ಗಳು ತಪ್ಪಿದ್ದರೆ ನೀವು ಸರಿಪಡಿಸಿಕೊಳ್ಳಬಹುದು.
ನಿಮ್ಮ ಕಾರಿನಲ್ಲಿ ಆಯಿಲ್ ಮಟ್ಟ ಕಡಿಮೆಯಾಗಿದ್ದರೆ, ಅದು ನಿಮ್ಮ ಎಂಜಿನ್‌ಗೆ ಹಾನಿ ಮಾಡುತ್ತದೆ. ಅದನ್ನು ನೀವು ನಿಯಮಿತವಾಗಿ ಪರೀಕ್ಷಿಸುತ್ತಿರಬೇಕು. ಪರೀಕ್ಷಿಸಲು ಡಿಪ್‌ಸ್ಟಿಕ್ ಅನ್ನು ಮೇಲಕ್ಕೆತ್ತಿ ಅದನ್ನು ಸ್ವಚ್ಛಗೊಳಿಸಿ ಮರುಹೊಂದಿಸಿಕೊಳ್ಳಿ. ಈ ಮೂಲಕ ವಾಹನಕ್ಕೆ ಆಯಿಲ್ ಅಗತ್ಯವಿದೆಯೇ ಅಥವಾ ಇಲ್ಲವೇ ಎಂಬುದನ್ನು ನೀವು ತಿಳಿಯಲು ಸಾಧ್ಯವಾಗುತ್ತದೆ. ಆಯಿಲ್ ಬೇಗ ತನ್ನ ಶಕ್ತಿಯನ್ನು ಕಳೆದುಕೊಳ್ಳುತ್ತದೆ. ಆದ್ದರಿಂದ ಅದನ್ನು ನಿಯಮಿತವಾಗಿ ಬದಲಾಯಿಸಿ. ಹಳೆಯ ಕಾರು ಆದ ಕಾರಣ ಕೆಲವೊಮ್ಮೆ ಹೆಚ್ಚು ಆಯಿಲ್ ಅನ್ನು ತೆಗೆದುಕೊಳ್ಳುವ ಸಾಧ್ಯತೆ ಇದೆ. ಈ ನಿಟ್ಟಿನಲ್ಲಿ ಅದನ್ನು ಪರಿಶೀಲಿಸುವುದು ಎಲ್ಲ ಕಡೆಗಳಲ್ಲಿಯೂ ಉತ್ತಮ.
ಮಳೆಗಾಲದಲ್ಲಿ ವೈಪರ್‌ಗಳ ಪಾತ್ರ ಮಹತ್ವದ್ದಾಗಿದೆ. ನೀವು ವೈಪರ್ ಬಳಸಿದ ಬಳಿಕ ಕಾರಿನ ಮುಂಭಾಗದ ಗಾಜಿನ ಮೇಲೆ ಸಾಲುಗಳು ಅಥವ ಗೆರೆಗಳನ್ನು ನೋಡಿದರೆ ವೈಪರ್ ಅನ್ನು ಬದಲಿಸುವ ಸಮಯ ಬಂದಿದೆ ಎಂದರ್ಥ. ನೀವು ಅದರ ಮಾಹಿತಿಯನ್ನು ಕಾರಿನ ಕೈಪಿಡಿಯಲ್ಲಿ ಕಾಣಬಹುದು. ನಿಮ್ಮ ಗಾಜಿನಲ್ಲಿ ಹೆಚ್ಚು ಗೆರೆಗಳು ಇವೆ ಎಂದಾದರೆ ಹಗಲು ನೀವು ಅಷ್ಟೊಂದು ಕಿರಿಕಿರಿ ಅನುಭವಿಸದೇ ಇದ್ದರೂ ರಾತ್ರಿ ಪ್ರಯಾಣದಲ್ಲಿ ಲೈಟ್‌ನ ತೀವ್ರತೆಗೆ ಮಾರ್ಗ ಕಾಣದೇ ಇರಬಹುದು.
ಹಳೆಯ ಕಾರನ್ನು ಖರೀದಿಸುವಾಗ, ದೀಪಗಳು ಉರಿಯುತ್ತಿದೆಯೇ ಅಥವಾ ಇಲ್ಲವೇ ಎಂಬುದನ್ನು ಸರಿಯಾಗಿ ಪರಿಶೀಲಿಸಿ. ಇದಾಗ ಬಳಿಕ ಪ್ರತಿ ತಿಂಗಳು ಅವುಗಳನ್ನು ಪರಿಶೀಲಿಸಿ. ಕೆಲವು ಬಲ್ಭ್ ಗಳನ್ನು ಸುಲಭವಾಗಿ ಬದಲಾಯಿಸಬಹುದು, ಆದರೆ ಕೆಲವು ಎಲ್ಇಡಿಗಳನ್ನು ಬದಲಾಯಿಸಲು ತುಸು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಲೈಟ್‌ಗಳಲ್ಲಿ ಲೋಪ ಇದ್ದರೆ ಸರಿಪಡಿಸಿ ಚಲಾಯಿಸಿ.
ಕಾರನ್ನು ನಿಯತಕಾಲಿಕವಾಗಿ ಸ್ವಚ್ಛಗೊಳಿಸುವುದು ಒಳ್ಳೆಯದು. ಇಲ್ಲದಿದ್ದರೆ ಕೆಲವು ಕೀಟಗಳು ಮತ್ತು ಇತರ ಅನೇಕ ವಸ್ತುಗಳು ಕಾರಿನ ಬಣ್ಣವನ್ನು ಹಾಣಿಗೊಳಿಸಬಹುದು. ಕಾರನ್ನು ತೊಳೆಯುವ ಸಂದರ್ಭ ನೀವು ಸರ್ವೀಸ್ ಸ್ಟೇಶನ್ ಮೊರೆ ಹೋಗುವುದು ಒಳ್ಳೆಯದು. ಯಾಕೆಂದರೆ ನಾವು ಹೆಚ್ಚು ನೀರನ್ನು ವ್ಯಯ ಮಾಡುವ ಸಾಧ್ಯತೆ ಇರುತ್ತದೆ. ಅಂತಹ ಪರಿಸ್ಥಿತಿಯಲ್ಲಿ ಸರ್ವೀಸ್‌ನ ಸಹಾಯ ಪಡೆಯುವುದು ಒಳ್ಳೆಯದು. ಏಕೆಂದರೆ ನೀರನ್ನು ಮರುಬಳಕೆ ಮಾಡಲಾಗುತ್ತದೆ.