Advertisement

ಕಸ ವಿಲೇವಾರಿಗೆ 26 ಟಿಪ್ಪರ್‌ ಖರೀದಿ

05:21 PM Jan 13, 2021 | Team Udayavani |

ಚಿಕ್ಕಮಗಳೂರು: ನಗರದಲ್ಲಿ ಕಸ ವಿಲೇವಾರಿಗೆ ನೂತನ 26 ಟಿಪ್ಪರ್‌ಗಳನ್ನು 1 ಕೋಟಿ 36 ಲಕ್ಷ ರೂ. ವೆಚ್ಚದಲ್ಲಿ ಖರೀದಿಸಲಾಗಿದೆ ಎಂದು ನಗರಸಭೆ ಆಯುಕ್ತ ಬಸವರಾಜ್‌ ತಿಳಿಸಿದರು. ಈಗಾಗಲೇ 20 ಎಸ್‌ಎಂಪಿ ಕಂಪನಿಯ ಟಿಪ್ಪರ್‌ ಗಳು ಕಾರ್ಯ ನಿರ್ವಹಿಸುತ್ತಿದ್ದು, ಈ ಟಿಪ್ಪರ್‌ ಗಳನ್ನು ಖಾಸಗಿಯವರಿಗೆ ನೀಡುವುದೋ ಅಥವಾ ನಗರಸಭೆಯಿಂದಲೇ ಕಸ ವಿಲೇವಾರಿ ಕಾರ್ಯ

Advertisement

ಕೈಗೊಳ್ಳುವುದೋ ಎಂಬುದರ ಬಗ್ಗೆ ಸಭೆ ನಡೆಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಹೇಳಿದರು. ಇಂದಾವರದಲ್ಲಿ ಕಸ ಸಂಗ್ರಹಣಾ ಕೇಂದ್ರದಲ್ಲಿ ಅತ್ಯಾಧುನಿಕ ತಂತ್ರಜ್ಞಾನ ಸ್ಥಾಪನೆ ಸಿವಿಲ್‌ ಕಾಮಗಾರಿ ನಡೆಯುತ್ತಿದೆ. 1ಕೋಟಿ 36 ಲಕ್ಷ ರೂ. ವೆಚ್ಚದಲ್ಲಿ 26 ಟಿಪ್ಪರ್‌, 104 ಲಕ್ಷ ರೂ. ವೆಚ್ಚದಲ್ಲಿ ಗ್ರಾಬೇಜ್‌ ಕಂಪ್ಯಾಕ್ಟರ್‌, 36 ಲಕ್ಷ ರೂ. ವೆಚ್ಚದಲ್ಲಿ ಟ್ರಾಮೆಲ್‌, 113 ಲಕ್ಷ ಬಾಯ್ಲಿಂಗ್‌ ಮಿಷನ್‌, 47.76 ಲಕ್ಷ ರೂ.ವೆಚ್ಚದಲ್ಲಿ ವೇಬ್ರಿಡ್ಜ್ ನಿರ್ಮಿಸಲಾಗುತ್ತಿದ್ದು ಮಾರ್ಚ್‌ ತಿಂಗಳಲ್ಲಿ ಸಿವಿಲ್‌ ಕಾಮಗಾರಿ ಮುಗಿಯಲಿದೆ.

ಇದನ್ನೂ ಓದಿ:ಬೀದರ:ಭೂರಮೆಗೆ ಚರಗ ಚೆಲ್ಲಿ ರೈತರ ಪ್ರಾರ್ಥನೆ

ಏಪ್ರಿಲ್‌ ತಿಂಗಳಲ್ಲಿ ಯಂತ್ರೋಪಕರಣಗಳ ಅಳವಡಿಕೆ ಕಾರ್ಯ ನಡೆಯಲಿದೆ ಎಂದರು. 11 ಕೋಟಿ ರೂ. ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿ ನಡೆಸಲಾಗುತ್ತಿದೆ. ಯುಜಿಡಿ ಕಾಮಗಾರಿಗೆ 26 ಕೋಟಿ ರೂ. ಅನುದಾನ ನೀಡುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಪೌರ ನೌಕರರ ಮನೆ ನಿರ್ಮಾಣ ಮಾರ್ಚ್‌ ಅಂತ್ಯದೊಳಗೆ ಪೂರ್ಣಗೊಳ್ಳಲಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next