Advertisement

‘ಆರಾಧನೆಯ ಕಂಬಳ ನಿರಾತಂಕವಾಗಲಿ’

11:17 AM Dec 23, 2018 | Team Udayavani |

ಪುಂಜಾಲಕಟ್ಟೆ: ಹೊಕ್ಕಾಡಿ ಗೋಳಿ ಮಹಿಷಮರ್ದಿನಿ ಕಂಬಳ ಸಮಿತಿ ವತಿಯಿಂದ ಇತಿಹಾಸ ಪ್ರಸಿದ್ಧ ವೀರ-ವಿಕ್ರಮ ಜೋಡುಕರೆ ಬಯಲು ಕಂಬಳಕ್ಕೆ ಶನಿವಾರ ಚಾಲನೆ ನೀಡಲಾಯಿತು.

Advertisement

ಶ್ರೀಕ್ಷೇತ್ರ ಪೂಂಜದ ಆಸ್ರಣ್ಣ ಕೃಷ್ಣ ಪ್ರಸಾದ್‌ ಆಚಾರ್ಯ ಅವರು ಕಂಬಳವನ್ನು ಉದ್ಘಾಟಿಸಿ, ದೇಗುಲದ ಧಾರ್ಮಿಕ ನಂಟನ್ನು ಹೊಂದಿರುವ ಹಿನ್ನೆಲೆಯಲ್ಲಿ ನಡೆಯುತ್ತಿರುವ ಕಂಬಳ ಕೃಷಿಕರ ಆರಾಧನೆಯಾಗಿದ್ದು, ಮೂಕ ಪ್ರಾಣಿಗಳ ಸಂರಕ್ಷಣೆ ಮಾಡಿ ಕಂಬಳ ನಿರ್ವಹಿಸುವುದು ಅಪೂರ್ವ ಕಾರ್ಯವಾಗಿದೆ. ಹತ್ತು ಜನ ಸೇರಿ ನಿರ್ವಹಿಸುವ ಕರ್ತವ್ಯಕ್ಕೆ ದೇವರ ಅನುಗ್ರಹವಿದೆ. ಕಂಬಳ ನಿರಾತಂಕವಾಗಿ ಸಾಗಲಿ ಎಂದು ಶುಭ ಹಾರೈಸಿದರು.

ಶ್ರೀ ಕ್ಷೇತ್ರದ ಪ್ರಧಾನ ಅರ್ಚಕ ಪ್ರಕಾಶ್‌ ಆಚಾರ್ಯ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಕಂಬಳ ಸಮಿತಿ ಅಧ್ಯಕ್ಷ ಪಿ.ಆರ್‌. ಶೆಟ್ಟಿ, ಉದ್ಯಮಿ, ಕಂಬಳ ಪೋಷಕ ವಿನು ವಿಶ್ವನಾಥ ಶೆಟ್ಟಿ ಕರಿಂಜೆ, ಸಮಿತಿ ಗೌರವಾಧ್ಯಕ್ಷ ಸಂಜೀವ ಶೆಟ್ಟಿ ಗುಂಡ್ಯಾರು, ಪದಾಧಿಕಾರಿಗಳಾದ ಬಾಬು ರಾಜೇಂದ್ರ ಶೆಟ್ಟಿ ಅಜ್ಜಾಡಿ, ಎಚ್‌. ಹರೀಶ್‌ ಹಿಂಗಾಣಿ, ಸಂದೇಶ್‌ ಶೆಟ್ಟಿ ಪೊಡುಂಬ, ಪುಷ್ಪರಾಜ ಜೈನ್‌ ನಡ್ಯೋಡಿ, ಹರಿಪ್ರಸಾದ್‌ ಶೆಟ್ಟಿ ಕುರ್ಡಾಡಿ, ರಾಜೇಶ್‌ ಶೆಟ್ಟಿ ಕೊನೆರೊಟ್ಟು, ಪ್ರವೀಣ್‌ ಶೆಟ್ಟಿ ಮಾವಿನಕಟ್ಟೆ, ಕಿರಣ್‌ ಕುಮಾರ್‌ ಮಂಜಿಲ, ರಾಘವೇಂದ್ರ ಭಟ್‌ ಹೊಕ್ಕಾಡಿಗೋಳಿ, ಜನಾರ್ದನ ಬಂಗೇರ ತಿಮರಡ್ಡ,ಕೃಷ್ಣ ಶೆಟ್ಟಿ ಉಮನೊಟ್ಟು, ಉಮೇಶ್‌ ಶೆಟ್ಟಿ ಕೊನೆರೊಟ್ಟು, ಸುಧೀಂದ್ರ ಶೆಟ್ಟಿ ಕಲಾಯಿದಡ್ಡ, ರಾಜೇಶ್‌ ಶೆಟ್ಟಿ ಸಿದ್ದಕಟ್ಟೆ, ಸಾಧು ಶೆಟ್ಟಿ ಕಲ್ಲಾಪು, ಜನಾರ್ದನ ನಾಯ್ಕ ಸಿದ್ದಕಟ್ಟೆ, ಎಚ್‌.ಎ. ರೆಹಮಾನ್‌ ಹೊಕ್ಕಾಡಿಗೋಳಿ, ರಮೇಶ್‌ ಪೂಜಾರಿ ಕುಂಜಾಡಿ, ಸುರೇಶ್‌ ಕೆ. ಶೆಟ್ಟಿ ಹಕ್ಕೇರಿ, ಸುಧೀರ್‌ ಶೆಟ್ಟಿ ಹೊಕ್ಕಾಡಿಗೋಳಿ, ರಾಜು ಗುಮ್ಮಣ್ಣ ಶೆಟ್ಟಿ ಹೊಕ್ಕಾಡಿಗೋಳಿ, ಸುಧಾಕರ ಚೌಟ ಬಾವ ಹೊಸಬೆಟ್ಟು, ಹರೀಶ್‌ ಶೆಟ್ಟಿ ಹೊಕ್ಕಾಡಿಗೋಳಿ, ಟಿ. ನರಸಿಂಹ ಪೈ ಮಾವಿನಕಟ್ಟೆ, ಆನಂದ ಶೆಟ್ಟಿ ಹಕ್ಕೇರಿ, ಸಂತೋಷ್‌ ಮಂಜಿಲ, ಸುರೇಶ್‌ ಎಂ. ಶೆಟ್ಟಿ ಹಕ್ಕೇರಿ, ರಾಧಾಕೃಷ್ಣ ಶೆಟ್ಟಿ ಉಗ್ರೋಡಿ, ರಘುರಾಮ್‌ ಶೆಟ್ಟಿ ದೇವಸ್ಯ, ಭುಜಂಗ ಶೆಟ್ಟಿ ಹೊಕ್ಕಾಡಿಗೋಳಿ, ನವೀನ್‌ ಕುಂಜಾಡಿ, ಲೋಕನಾಥ್‌ ಶೆಟ್ಟಿ ಪಮುಂಜ, ಗಿರೀಶ್‌ ಕರ್ಪೆ, ನವೀನ ಹೆಗ್ಡೆ ಮಂಚಕಲ್ಲು ಮತ್ತಿತರರು ಉಪಸ್ಥಿತರಿದ್ದರು.

ಸಮಿತಿ ಗೌರವ ಸಲಹೆಗಾರ ಸುರೇಶ್‌ ಶೆಟ್ಟಿ ಸಿದ್ದಕಟ್ಟೆ ಸ್ವಾಗತಿಸಿ, ಕಂಬಳ ಸಮಿತಿ ಅಧ್ಯಕ್ಷ ನೋಣಾಲ್‌ಗ‌ುತ್ತು ರಶ್ಮಿತ್‌ ಶೆಟ್ಟಿ ಕೈತ್ರೋಡಿ ವಂದಿಸಿದರು. ಪ್ರಚಾರ ಸಮಿತಿ ಸಂಚಾಲಕ ಮೋಹನ್‌ ಕೆ. ಶ್ರೀಯಾನ್‌ ನಿರೂಪಿಸಿದರು.

ಕಂಬಳ ಉಳಿಸುವಲ್ಲಿ ಸಹಕರಿಸಿ
ಮುಖ್ಯ ಅತಿಥಿಯಾಗಿದ್ದ ಜಿಲ್ಲಾ ಕಂಬಳ ಸಮಿತಿ ಪ್ರಧಾನ ಕಾರ್ಯದರ್ಶಿ ರಾಜೀವ ಶೆಟ್ಟಿ ಎಡ್ತೂರು ಮಾತನಾಡಿ, ಕಂಬಳದ ಸಂಕಷ್ಟ ಕಾಲದಲ್ಲಿ ತುಳುನಾಡ ಜನತೆಯ ಒಗ್ಗಟ್ಟು ಕಂಬಳವನ್ನು ಉಳಿಸಿದೆ. ಕಾನೂನು ತಿದ್ದುಪಡಿಯೊಂದಿಗೆ ನಿರಾಂತಕವಾಗಿ ಮುಂದುವರಿಯಲು ಸಹಕಾರಿಯಾಗಿದೆ. ಮುಂದಕ್ಕೂ ಸುಧಾರಣೆಗಳೊಂದಿಗೆ ನಿಯಮಗಳಿಗೆ ಬದ್ಧರಾಗಿದ್ದು, ನಮ್ಮ ಸಂಸ್ಕೃತಿ, ಕಂಬಳವನ್ನು ಉಳಿಸುವಲ್ಲಿ ಸಹಕರಿಸಬೇಕು ಎಂದು ಅವರು ಹೇಳಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next