Advertisement

ಕಾಲುವೆ ನಿರ್ಮಿಸಿದರೆ ಪಂಜಾಬ್‌ ಹೊತ್ತಿ ಉರಿಯಲಿದೆ: ಅಮರೀಂದರ್‌

01:09 AM Aug 19, 2020 | mahesh |

ಹೊಸದಿಲ್ಲಿ: ಸಟ್ಲೆಜ್‌ ಹಾಗೂ ಯಮುನಾ ಸಂಪರ್ಕ ಕಾಲುವೆ ಯೋಜನೆಯನ್ನು ಜಾರಿಗೊಳಿಸಿದರೆ ಪಂಜಾಬ್‌ ಹೊತ್ತಿ ಉರಿಯಲಿದೆ ಎಂದು ಪಂಜಾಬ್‌ ಮುಖ್ಯಮಂತ್ರಿ ಕ್ಯಾಪ್ಟನ್‌ ಅಮರೀಂದರ್‌ ಸಿಂಗ್‌ ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ. ಈ ಯೋಜನೆ ಸಂಬಂಧ ಸುಪ್ರೀಂ ಕೋರ್ಟ್‌ ಕಳೆದ ತಿಂಗಳು ಕೇಂದ್ರ ಸರ್ಕಾರದ ಮಧ್ಯಸ್ಥಿಕೆಯಲ್ಲಿ ಪಂಜಾಬ್‌ ಹಾಗೂ ಹರ್ಯಾಣ ಮುಖ್ಯಮಂತ್ರಿಗಳು ಚರ್ಚೆ ನಡೆಸಿ ಪರಿಹಾರ ಕಂಡುಕೊಳ್ಳಬೇಕು ಎಂದು ನಿರ್ದೇಶನ ನೀಡಿತ್ತು. ಈ ಹಿನ್ನೆಲೆಯಲ್ಲಿ ಮಂಗಳವಾರ ವಿಡಿಯೋ ಕಾನ್ಫರೆನ್ಸ್‌ ಮೂಲಕ ನಡೆದ ಸಭೆಯಲ್ಲಿ ಮಾತನಾಡಿದ ಕ್ಯಾಪ್ಟನ್‌ ಅಮರೀಂದರ್‌ ಸಿಂಗ್‌, ಸಟ್ಲೆಜ್‌ ಹಾಗೂ ಯಮುನಾ ಸಂಪರ್ಕವು ಭಾವನಾತ್ಮಕ ವಿಷಯವಾಗಿದೆ. ಈ ಯೋಜನೆಯ ಮೂಲಕ ಬಲವಂತವಾಗಿ ಹರ್ಯಾಣಕ್ಕೆ ನೀರು ಹರಿಸಲು ಯತ್ನಿಸಿದರೆ ಪಂಜಾಬ್‌ ಹೊತ್ತಿ ಉರಿಯಲಿದೆ. ಅಲ್ಲದೇ ರಾಷ್ಟ್ರೀಯ ಭದ್ರತೆಗೆ ಧಕ್ಕೆ ತರಲಿದೆ. ಹರ್ಯಾಣ ಹಾಗೂ ರಾಜಸ್ಥಾನದಲ್ಲಿ ಸಾಕಷ್ಟು ಸಮಸ್ಯೆ ಎದುರಿಸಬೇಕಾ ಗುತ್ತದೆ ಎಂದು ತಿಳಿಸಿದ್ದಾರೆ.

Advertisement

ವೀಡಿಯೋ ಕಾನ್ಫರೆನ್ಸ್‌ ಸಭೆಯಲ್ಲಿ ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್‌ ಶೇಖಾವತ್‌ ಹಾಗೂ ಹರ್ಯಾಣ ಮುಖ್ಯಮಂತ್ರಿ ಮನೋಹರ್‌ ಖಟ್ಟರ್‌ ಉಪಸ್ಥಿತರಿದ್ದರು. ಸಭೆ ಬಳಿಕ ಪ್ರತಿಕ್ರಿಯಿಸಿರುವ ಹರ್ಯಾಣ ಸಿಎಂ ಮನೋಹರ್‌ ಖಟ್ಟರ್‌, ಶೀಘ್ರದಲ್ಲೇ ಮತ್ತೂಂದು ಸಭೆ ನಡೆಸಲಾಗುವುದು. ದಶಕಗಳ ಕಾಲದ ಈ ವಿವಾದ ಇತ್ಯರ್ಥಕ್ಕೆ ಸೂಕ್ತ ಪರಿಹಾರ ಕಂಡುಕೊಳ್ಳಲಾಗುವುದು ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next