ದುಬೈ : ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಕಿಂಗ್ಸ್ ಇಲೆವೆನ್ 13 ನೇ ಆವೃತ್ತಿಯ 18 ನೇ ಪಂದ್ಯದಲ್ಲಿ ಟಾಸ್ ಗೆದ್ದು ದಾಂಡಿಗತನವನ್ನು ಆಯ್ಕೆ ಮಾಡಿಕೊಂಡ ಪಂಜಾಬ್ ತಂಡ ನಿಗದಿತ 20 ಓವರ್ ನಲ್ಲಿ 4 ವಿಕೆಟ್ ನಷ್ಟಕ್ಕೆ 179 ರ ಟಾರ್ಗೆಟ್ ನ್ನು ಎದುರಾಳಿ ತಂಡಕ್ಕೆ ಬಿಟ್ಟು ಕೊಟ್ಟಿದೆ.
ಪಂಜಾಬ್ ಪರ ಪ್ರಾರಂಭಿಕ ಜೋಡಿಗಳಾಗಿ ಮೈದಾನಕ್ಕಿಳಿದ ಕೆ.ಎಲ್.ರಾಹುಲ್ ಹಾಗೂ ಮಾಯಾಂಕ್ ಅಗರ್ವಾಲ್ ಪವರ್ ಪ್ಲೇ ಓವರ್ ನಲ್ಲಿ ತಂಡಕ್ಕೆ ಚೇತರಿಕೆ ಆಟ ನೀಡಿದರು. ಕಪ್ತಾನ ರಾಹುಲ್ ಬಿರುಸಿನಿಂದ ಬ್ಯಾಟ್ ಬೀಸಿ 7 ಬೌಂಡರಿಯೊಂದಿಗೆ 1 ಸಿಕ್ಸರ್ ಸಹಿತ 63 ರನ್ ಗಳ ಅಮೋಘ ಕೊಡುಗೆ ನೀಡಿ ಶಾರ್ದೂಲ್ ಠಾಕೂರ್ ಎಸೆತಕ್ಕೆ ಕೀಪರ್ ಕೈಗೆ ಕ್ಯಾಚ್ ಕೊಟ್ಟು ಪೆವಿಲಿಯನ್ ಗೆ ಮರಳಿದರು. ಮಾಯಾಂಕ್ 26 ರನ್ ಗಳಿಸಿ ಪಿಯೂಷ್ ಚಾವ್ಲಾ ಎಸೆತಕ್ಕೆ ಸ್ಯಾಮ್ ಕರನ್ ಕೈಗೆ ಕ್ಯಾಚ್ ಕೊಟ್ಟು ನಿರ್ಗಮಿಸಿದರು.
ಬಳಿಕ ಬಂದ ಮನದೀಪ್ ಸಿಂಗ್ ಕಪ್ತಾನನ ಜೊತೆ ನಿಂತು 27 ರನ್ ಗಳಿಸಿ ಜಡೇಜಾ ಎಸೆತಕ್ಕೆ ರಾಯುಡ್ ಕೈಗೆ ಕ್ಯಾಚ್ ಕೊಟ್ಟು ಪೆವಿಲಿಯನ್ ಕಡೆ ಸಾಗಿದರು. ನಿಕೋಲಸ್ ಪೂರನ್ ಮಧ್ಯಮ ಓವರ್ ನಲ್ಲಿ ಚೇತರಿಕೆಯ ಆಟ ಆಡಿ 33 ರನ್ ಮಾಡಿ ಶಾರ್ದೂಲ್ ಠಾಕೂರು ಎಸೆತಕ್ಕೆ ಜಡೇಜಾ ಕೈಗೆ ಕ್ಯಾಚ್ ಕೊಟ್ಟು ನಿರ್ಮಿಸಿದರು. ಮ್ಯಾಕ್ಸ್ ವೆಲ್ ಹಾಗೂ ಸರ್ಫರಾಜ್ ಜತೆಗೂಡಿ ಅಂತಿಮ ಓವರ್ ಗಳಲ್ಲಿ ಸ್ಕೋರ್ ಮುಂದಯವರಿಕೆಗೆ ನೆರವಾದರು.
ಅಂತಿಮವಾಗಿ ಪಂಜಾಬ್ ತಂಡ 20 ಓವರ್ ನಲ್ಲಿ 4 ವಿಕೆಟ್ ನಷ್ಟಕ್ಕೆ 178 ರನ್ ಪೇರಿಸಿ 179 ರ ಗುರಿಯನ್ನು ಚೆನ್ನೈ ತಂಡಕ್ಕೆ ನೀಡಿದೆ.
ಚೆನ್ನೈ ಪರ ಶಾರ್ದೂಲ್ ಠಾಕೂರ್ 2 ವಿಕೆಟ್ ಪಡೆದು ಮಿಂಚಿದ್ರೆ, ಪಿಯೂಷ್ ಚಾವ್ಲಾ,ರವೀಂದ್ರ ಜಡೇಜಾ ತಲಾ 1 ವಿಕೆಟ್ ಪಡೆದರು.