ಚಂಡೀಗಡ: 2015ರಲ್ಲಿ ಫರೀದಾಕೋಟ್ ವ್ಯಾಪ್ತಿಯಲ್ಲಿ ನಡೆದಿದ್ದ ಗೋಲಿಬಾರ್ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟ ಅಕ್ಷಯ್ ಕುಮಾರ್ ಅವರು, ಬುಧವಾರ ವಿಶೇಷ ತನಿಖಾ ದಳದ (ಎಸ್‌ಐಟಿ) ಮುಂದೆ ಹಾಜರಾದರು. ನ. 21ರಂದು ಖುದ್ದಾಗಿ ವಿಚಾರಣೆಗೆ ಹಾಜರಾಗುವಂತೆ ಅಕ್ಷಯ್‌ಗೆ ಸಮನ್ಸ್ ಜಾರಿಗೊಳಿಸಲಾಗಿತ್ತು. 2015ರಲ್ಲಿ ನಡೆದಿದ್ದ ಗೋಲಿಬಾರ್ ನಂತರ ಆಗಿನ ಡೇರಾ ಸಚ್ಚಾ ಸೌಧಾ ಧಾರ್ಮಿಕ ಸಂಸ್ಥೆಯ ಮುಖ್ಯಸ್ಥ ಗುರ್ಮೀತ್ ರಾಮ್ ರಹೀಂ ಬಾಬಾ ಹಾಗೂ ಅಂದಿನ ಪಂಜಾಬ್ ಉಪಮುಖ್ಯಮಂತ್ರಿ ಸುಖ್‌ಬೀರ್ ಸಿಂಗ್ ಬಾದಲ್ ನಡುವೆ ಸಂಧಾನ ಸಭೆ ನಡೆಸಲು ಮಧ್ಯಸ್ಥಿಕೆ ವಹಿಸಿದ್ದರೆಂಬ ಆರೋಪ ಅಕ್ಷಯ್ ಮೇಲಿದೆ. ಆದರೆ, ವಿಚಾರಣೆ ವೇಳೆ ಅವರು ಈ ಆರೋಪ ತಳ್ಳಿಹಾಕಿದ್ದಾರೆ. ಗುರ್ಮೀತ್ ಬೆಂಬಲಿಗರು ಸಿಖ್ಬರ ಪವಿತ್ರ ಗ್ರಂಥವನ್ನು ವಿರೂಪಗೊಳಿಸಿದರು ಎಂದು ಆರೋಪಿಸಿ ಫರೀದಾಕೋಟ್‌ನಲ್ಲಿ ಪ್ರತಿ ಭಟನೆ ನಡೆದಿತ್ತು. ಈ ವೇಳೆ ನಡೆದ ಗೋಲಿಬಾರ್‌ನಲ್ಲಿ ಇಬ್ಬರು ಮೃತಪಟ್ಟಿದ್ದರು.