Advertisement
2021-22ರ ಆರ್ಥಿಕ ವರ್ಷದಲ್ಲಿ ಪಂಜಾಬ್ ಅಬಕಾರಿ ಇಲಾಖೆಯಿಂದ 6,158 ಕೋಟಿ ರೂ. ಆದಾಯ ಗಳಿಸಿದೆ. ಈ ಆರ್ಥಿಕ ವರ್ಷದಲ್ಲಿ ಅದನ್ನು ಶೇ.40ರಷ್ಟು ಹೆಚ್ಚಿಸಿ, 9,647.85 ಕೋಟಿ ರೂ. ಆದಾಯ ಗಳಿಸುವ ಗುರಿಯನ್ನು ಸರ್ಕಾರ ಹಾಕಿಕೊಂಡಿದೆ. ಈವರೆಗೆ ಮದ್ಯ ತಯಾರಕರು, ಸಗಟು ವ್ಯಾಪಾರಿ ಮತ್ತು ಚಿಲ್ಲರೆ ವ್ಯಾಪಾರಿ ನಡುವೆ ಸಾಮಾನ್ಯ ಮಧ್ಯವರ್ತಿಗಳಿದ್ದರು. ಆದರೆ ಹೊಸ ನೀತಿಯಿಂದಾಗಿ ಎಲ್ಲ ವಿಭಾಗಗಳು ಪ್ರತ್ಯೇಕವಾಗಿ ಕೆಲಸ ಮಾಡಲಿವೆ, ಮಧ್ಯವರ್ತಿಗಳು ಇರುವುದಿಲ್ಲ. ಹಾಗೆಯೇ ಬಿಯರ್ ಮತ್ತು ಭಾರತದಲ್ಲಿ ತಯಾರಿಸಲಾಗುವ ವಿದೇಶಿ ಮದ್ಯದ ಮಾರಾಟಕ್ಕೆ ಇದ್ದ ಮಿತಿಯನ್ನೂ ತೆಗೆದುಹಾಕಲಾಗಿದೆ.
Advertisement
ಪಂಜಾಬ್‌ನಲ್ಲಿ ಶೇ.60ರಷ್ಟು ಇಳಿಯಲಿದೆ ಮದ್ಯದ ದರ!
08:20 PM Jun 09, 2022 | Team Udayavani |
Advertisement
Udayavani is now on Telegram. Click here to join our channel and stay updated with the latest news.