ನವದೆಹಲಿ: ಪಂಜಾಬ್ ನ್ಯಾಷನಲ್ ಬ್ಯಾಂಕ್‌ಗೆ ನೀರವ್ ಮೋದಿ ಮತ್ತು ಇತರರು 13,700 ಕೋಟಿ ರೂ. ಮೌಲ್ಯದ ವಂಚನೆ ಎಸಗಿ ವರ್ಷ ಕಳೆಯುವಷ್ಟರಲ್ಲಿ ಭೂಷಣ್ ಪವರ್ ಆ್ಯಂಡ್ ಸ್ಟೀಲ್ ಕಂಪನಿಯು 3,805 ಕೋಟಿ ರೂ. ವಂಚನೆ ಎಸಗಿರುವ ವಿಚಾರವನ್ನು ಬ್ಯಾಂಕ್‌ನ ಆಡಳಿತ ಮಂಡಳಿ ಪತ್ತೆ ಮಾಡಿದೆ ಮತ್ತು ಅದರ ಬಗ್ಗೆ ಆರ್‌ಬಿಐಗೆ ಮಾಹಿತಿ ನೀಡಿರುವುದಾಗಿ ತಿಳಿಸಿದೆ.
ಚಂಡಿಗಡ ಕಚೇರಿಯಿಂದ 3,191.51 ಕೋಟಿ ರೂ., ದುಬೈ ಶಾಖೆಯಿಂದ 345.74 ಕೋಟಿ ರೂ., ಹಾಂಕಾಂಗ್ ಶಾಖೆಯಿಂದ 267.9 ಕೋಟಿ ರೂ.ಗಳನ್ನು ಕಂಪನಿ ಪಡೆದುಕೊಂಡಿದೆ ಎಂದು ಬಾಂಬೆ ಸ್ಟಾಕ್‌ಎಕ್ಸ್‌ಚೇಂಜ್‌ಗೆ ನೀಡಿದ ಲಿಖೀತ ಮಾಹಿತಿಯಲ್ಲಿ ತಿಳಿಸಲಾಗಿದೆ. ಸುಳ್ಳು ಮಾಹಿತಿ ನೀಡಿ, ಬ್ಯಾಂಕ್‌ಗಳ ಒಕ್ಕೂಟದಿಂದ ಭೂಷಣ್ ಪವರ್ ಆ್ಯಂಡ್ ಸ್ಟೀಲ್ 3,805 ಕೋಟಿ ರೂ. ಪಡೆದುಕೊಂಡಿದೆ. ವಿಧಿ ವಿಜ್ಞಾನ ಮೂಲಕ ಆಡಿಟ್ ನಡೆಸಿದ್ದು, ಸಿಬಿಐ ದಾಖಲಿಸಿದ ಎಫ್ಐಆರ್ ಹಿನ್ನೆಲೆಯಲ್ಲಿ ಕಂಪನಿ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಶಿಫಾರಸು ಮಾಡಲಾಗಿದೆ. ಕಂಪನಿ ತನ್ನ ಲೆಕ್ಕಪತ್ರಗಳಲ್ಲಿ ವಂಚನೆ ಮಾಡಿದೆ. ಸದ್ಯ ಪ್ರಕರಣ ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿ (ಎನ್‌ಸಿಎಲ್ಟಿ)ಯಲ್ಲಿದೆ ಎಂದಿದೆ.
Advertisement