Advertisement
ಆಯ್ದ ಕೆಲವು ಖಾತೆದಾರರ ಲಾಭಕ್ಕಾಗಿ ಮತ್ತು ಅವರಿಗೆ ಗೊತ್ತಿರುವ ರೀತಿಯಲ್ಲೇ ಈ ಅನಧಿಕೃತ ಮತ್ತು ವಂಚನೆಯ ವಹಿವಾಟುಗಳು ನಡೆದಿದ್ದು ಈ ವಹಿವಾಟುಗಳ ಆಧಾರದಲ್ಲಿ ಇತರ ಬ್ಯಾಂಕುಗಳು ವಿದೇಶದಲ್ಲಿನ ಆ ಗ್ರಾಹಕರಿಗೆ ಬೃಹತ್ ಮೊತ್ತದ ಸಾಲ ನೀಡಿರುವುದು ಕಂಡು ಬಂದಿದೆ; ಈ ವಿಷಯವನ್ನು ತಾನು ಹಣಕಾಸು ನಿಯಂತ್ರಣ ಸಂಸ್ಥೆಗೆ ಸಲ್ಲಿಸಿರುವ ಮಾಹಿತಿಯಲ್ಲಿ ತಿಳಿಸಿದ್ದೇನೆ ಎಂದು ಪಂಜಾಬ್ ನ್ಯಾಶನಲ್ ಬ್ಯಾಂಕ್ ಹೇಳಿದೆ.
Related Articles
Advertisement
ಈ ಬೃಹತ್ ಪ್ರಮಾಣದ ಅನಧಿಕೃತ ಮತ್ತು ವಂಚನೆಯ ವಹಿವಾಟುಗಳು ಪತ್ತೆಯಾದ ಸುದ್ದಿ ಬಹಿರಂಗವಾದೊಡನೆಯೇ ಶೇರು ಮಾರುಕಟ್ಟೆಯಲ್ಲಿ ಪಿಎನ್‌ಬಿ ಶೇರುಗಳು ಬೆಳಗ್ಗೆ 10 ಗಂಟೆಯ ಸುಮಾರಿಗೆ ಶೇ.4.1ರಷ್ಟು ಕಡಿಮೆ ಧಾರಣೆಯಲ್ಲಿ ವಹಿವಾಟಾಗುತ್ತಿದ್ದವು. ಆರಂಭಿಕ ವಹಿವಾಟಿನಲ್ಲಿಂದು ಪಿಎನ್‌ಬಿ ಶೇರುಗಳು ಶೇ.5.7ರಷ್ಟು ಪತನಗೊಂಡಿದ್ದವು.
ಪಿಎನ್‌ಬಿ ಈಗಾಗಲೇ ಇತರ ವಂಚನೆಯ ವಹಿವಾಟುಗಳ ಆಪಾದನೆಯನ್ನು ಎದುರಿಸುತ್ತಿದೆ. ಕಳೆದ ವಾರ ಭಾರತೀಯ ಫೆಡರಲ್ ಏಜಂಟರುಗಳು ತಾವು ದೇಶದ ಅತ್ಯಂತ ಸಿರಿವಂತ ವ್ಯಕ್ತಿಗಳಲ್ಲಿ ಒಬ್ಬರಾಗಿರುವ ಬಿಲಿಯಾಧಿಪತಿ ಜ್ಯುವೆಲ್ಲರ್ ನೀರವ್ ಮೋದಿ ವಿರುದ್ಧ ತನಿಖೆ ಆರಂಭಿಸಿರುವುದಾಗಿ ಹೇಳಿದ್ದರು. ನೀರವ್ ಮೋದಿ ಪಿಎನ್‌ಬಿಗೆ 44 ದಶಲಕ್ಷ ಡಾಲರ್ ವಂಚಿಸಿರುವ ಆರೋಪವಿದೆ.