ವ್ಯಕ್ತಿಯೊಬ್ಬರು ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಬಳಸಿ ಪ್ಯಾರಾಗ್ಲೈಡಿಂಗ್ ಮಾಡಿದ ಅಪರೂಪದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಪಂಜಾಬ್ ಮೂಲದ ಹರ್ಷ್ ಅವರೇ ಈ ಸಾಹಸಕ್ಕೆ ಕೈ ಹಾಕಿದ ವ್ಯಕ್ತಿಯಾಗಿದ್ದು. ಹಿಮಾಚಲ ಪ್ರದೇಶದ ಜನಪ್ರಿಯ ಪ್ರವಾಸಿ ತಾಣಗಳಲ್ಲಿ ಒಂದಾದ ಬಾಂಡ್ಲಾ ಧಾರ್‌ನಲ್ಲಿ ಪ್ರಯೋಗ ಮಾಡಲಾಗಿದ್ದು ಹರ್ಷ್ ಯಶಸ್ವಿಯಾಗಿ ಪ್ಯಾರಾಗ್ಲೈಡಿಂಗ್ ಮಾಡಿ ಲ್ಯಾಂಡ್ ಆಗಿದ್ದಾರೆ.
ಪ್ಯಾರಾಗ್ಲೈಡಿಂಗ್ ನ ದೃಶ್ಯವನ್ನು ಸ್ಥಳೀಯರು ತಮ್ಮ ಮೊಬೈಲ್ ಫೋನ್‌ಗಳಲ್ಲಿ ರೆಕಾರ್ಡ್ ಮಾಡಿ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದು ಸದ್ಯ ವೈರಲ್ ಆಗಿದೆ.
ಒಟ್ಟಾರೆ ತೂಕವನ್ನು ಕಡಿಮೆ ಮಾಡಲು ಮತ್ತು ಹಾರಾಟದ ಸಮಯದಲ್ಲಿ ಯಾವುದೇ ಸಮಸ್ಯೆಯನ್ನು ತಪ್ಪಿಸಲು ಪ್ಯಾರಾಗ್ಲೈಡರ್ ದ್ವಿಚಕ್ರ ವಾಹನದ ಬ್ಯಾಟರಿಯನ್ನು ತೆಗೆದುಹಾಕಿದೆ.
ಪಂಜಾಬ್‌ನ ಪೈಲಟ್ ಸ್ಥಳದಿಂದ ಸ್ಕೂಟಿಯೊಂದಿಗೆ ಹೊರಟ ವ್ಯಕ್ತಿ ಗೋಬಿಂದ್ ಸಾಗರ್ ಸರೋವರದ ಒಂದಿ ಬದಿಯಿಂದ ಇನ್ನೊಂದು ಬದಿಗೆ ಯಶಸ್ವಿಯಾಗಿ ತೆರಳಿ ಇಳಿದರು. ಹಾರಾಟದ ಮೊದಲು ಸ್ಕೂಟಿಯ ಭಾರ ಕಡಿಮೆ ಮಾಡುವ ಉದ್ದೇಶದಿಂದ ಅದರ ಬ್ಯಾಟರಿಯನ್ನು ತೆಗೆದುಹಾಕಲಾಯಿತು, ಈ ದೃಶ್ಯವನ್ನು ನೋಡಲು ಅಪಾರ ಸಂಖ್ಯೆಯ ಜನರು ಸ್ಥಳಕ್ಕೆ ಆಗಮಿಸಿದರು. ಪೈಲಟ್ ಹರ್ಷ್ ಅವರು ಮೊದಲ ಬಾರಿಗೆ ಅಂತಹ ಸಾಹಸಕ್ಕೆ ಕೈ ಹಾಕಿರುವುದಾಗಿ ಹೇಳಲಾಗಿದೆ.
ಇದನ್ನೂ ಓದಿ: ತೆವಳಿಕೊಂಡು ರಸ್ತೆ ದಾಟುತ್ತಿದ್ದ ವಿಕಲಚೇತನರ ಮೇಲೆ ಹರಿದ ಕಾರು; ಚಿಕಿತ್ಸೆ ಫಲಿಸದೆ ಮೃತ್ಯು