Advertisement
ಸತತ ಎರಡು ಸೋಲಿನ ಬಳಿಕ ಮುಂಬೈ ತಂಡವನ್ನು ಮಂಗಳವಾರದ ಪಂದ್ಯದಲ್ಲಿ 31 ರನ್ನುಗಳಿಂದ ಸೋಲಿಸಿ ಆತ್ಮವಿಶ್ವಾಸ ಹೆಚ್ಚಿಸಿಕೊಂಡಿರುವ ಹೈದರಾಬಾದ್ ತಂಡವು ಪಂಜಾಬ್ ವಿರುದ್ಧವೂ ಜಯಭೇರಿ ಬಾರಿಸಿ ಈ ಹಿಂದಿನ ಸೋಲಿಗೆ ಸೇಡು ತೀರಿಸಿಕೊಳ್ಳಲು ನೋಡುತ್ತಿದೆ.
ಅಂಕಪಟ್ಟಿಯಲ್ಲಿ 3ನೇ ಸ್ಥಾನದಲ್ಲಿರುವ ಹೈದರಾಬಾದ್ ತಂಡ ಸಮತೋಲನದಿಂದ ಕೂಡಿದೆ. ಬ್ಯಾಟಿಂಗ್ ಮತ್ತು ಬೌಲಿಂಗ್‌ನಲ್ಲಿ ಗಮನಾರ್ಹ ನಿರ್ವಹಣೆ ನೀಡುತ್ತಿದೆ. ನಾಯಕ ಕೇನ್ ವಿಲಿಯಮ್ಸನ್ ಒಟ್ಟಾರೆ 259 ರನ್ ಪೇರಿಸಿ ಅಗ್ರಸ್ಥಾನದಲ್ಲಿದ್ದಾರೆ. ಕೌಲ್ 9 ವಿಕೆಟ್ ಉರುಳಿಸಿದ್ದಾರೆ. ಉಭಯ ತಂಡಗಳ ನಡುವೆ ಮೊಹಾಲಿಯಲ್ಲಿ ನಡೆದ ಈ ಹಿಂದಿನ ಪಂದ್ಯದಲ್ಲಿ ಪಂಜಾಬ್ 15 ರನ್ನುಗಳಿಂದ ಜಯ ಸಾಧಿಸಿತ್ತು. ಈಗ ಸೇಡು ತೀರಿಸಿಕೊಳ್ಳುವ ಅವಕಾಶ ಹೈದರಾಬಾದ್‌ಗೆ ಲಭಿಸಿದೆ.
Related Articles
Advertisement
ಬ್ಯಾಟ್ಸ್‌ಮನ್ ಸಿಡಿಯಬೇಕಿದೆಮುಂಬೈ ವಿರುದ್ಧ ಹೈದರಾಬಾದ್ 118 ರನ್ನಿಗೆ ಆಲೌಟಾಗಿರುವುದು ನಾಯಕ ವಿಲಿಯಮ್ಸನ್‌ಗೆ ಬೇಸರ ತಂದಿದೆ. ನಮ್ಮ ಬ್ಯಾಟ್ಸ್‌ಮೆನ್ ಉತ್ತಮ ಬ್ಯಾಟಿಂಗ್ ಪ್ರದರ್ಶಿಸುವುದನ್ನು ನಿರೀಕ್ಷಿಸುತ್ತಿದ್ದೇನೆ. ನಾವು ಮುಂಬೈ ವಿರುದ್ಧ ಕಡಿಮೆ ಪಕ್ಷ 140 ರನ್ ಗಳಿಸಬೇಕಾಗಿತ್ತು. ನಾವು ಮುಂದಿನ ಪಂದ್ಯಗಳಲ್ಲಿ ಜತೆಯಾಗಿ ಸಂಘಟಿತ ನಿರ್ವಹಣೆ ನೀಡಬೇಕಾಗಿದೆ ಎಂದು ಕೇನ್‌ವಿಲಿಯಮ್ಸನ್ ಹೇಳಿದ್ದಾರೆ. ಗೇಲ್ ಪ್ರಚಂಡ ಫಾರ್ಮ್
ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿಯೇ 63 ಎಸೆತಗಳಿಂದ 104 ರನ್ ಸಿಡಿಸಿದ್ದ ಗೇಲ್ 2 ಅರ್ಧಶತಕ ಹೊಡೆದಿದ್ದು ಪ್ರಚಂಡ ಫಾರ್ಮ್ ನಲ್ಲಿದ್ದಾರೆ. ನೋವಿನ ಸಮಸ್ಯೆಯಿಂದಾಗಿ ಅವರು ಡೆಲ್ಲಿ ವಿರುದ್ಧದ ಪಂದ್ಯದಲ್ಲಿ ಆಡಿರಲಿಲ್ಲ. ಆದರೆ ಹೈದರಾಬಾದ್ ವಿರುದ್ದ ಗೇಲ್ ಆಡುವ ಸಾಧ್ಯತೆಯಿದೆ. ಅವರ ಆರಂಭಿಕ ಜತೆಗಾರ ಕರ್ನಾಟಕದ ಕೆಎಲ್ ರಾಹುಲ್ ಕೂಡ ಉತ್ತಮ ಫಾರ್ಮ್ನಲ್ಲಿದ್ದಾರೆ. 2 ಅರ್ಧಶತಕ ಸಹಿತ 236 ರನ್ ಪೇರಿಸಿದ್ದಾರೆ. ಇವರಿಬ್ಬರು ಮತ್ತೆ ಸ್ಫೋಟಕ ಆರಂಭ ನೀಡುವ ವಿಶ್ವಾಸವನ್ನು ಹೈದರಾಬಾದ್ ಇಟ್ಟುಕೊಂಡಿದೆ. ಇದೇ ವೇಳೆ ಇವರಿಬ್ಬರನ್ನು ಬೇಗನೇ ಬ್ರೇಕ್ ಮಾಡಲು ಹೈದರಾಬಾದ್ ಯೋಜನೆ ರೂಪಿಸಿದೆ.