Advertisement

ಲೂಧಿಯಾನ ಕೋರ್ಟ್ ಸ್ಪೋಟದ ಹಿಂದೆ ಖಲಿಸ್ಥಾನ್, ಡ್ರಗ್ ಪೆಡ್ಲರ್ ಗಳ ಕೈವಾಡ: ಪಂಜಾಬ್ ಡಿಜಿಪಿ

03:33 PM Dec 25, 2021 | Team Udayavani |

ಲೂಧಿಯಾನ: ಪಂಜಾಬ್ ನ ಲೂಧಿಯಾನ ಜಿಲ್ಲಾ ನ್ಯಾಯಾಲಯದಲ್ಲಿ ನಡೆದ ಬಾಂಬ್ ಸ್ಫೋಟದ ತನಿಖೆ ನಡೆಸುತ್ತಿರುವ ಪೊಲೀಸರು, ಸ್ಫೋಟದ ಹಿಂದೆ ಖಲಿಸ್ಥಾನ ಅಂಶಗಳು, ಗ್ಯಾಂಗ್ ಸ್ಟರ್ ಗಳು ಮತ್ತು ಡ್ರಗ್ ಸ್ಮಗ್ಲರ್ ಗಳ ಲಿಂಕ್ ಕಂಡು ಬಂದಿದೆ ಎಂದು ಹೇಳಿದ್ದಾರೆ.

Advertisement

“ಖಾಲಿಸ್ತಾನಿ ಅಂಶಗಳು, ಗ್ಯಾಂಗ್ ಸ್ಟರ್ ಗಳು ಮತ್ತು ಮಾದಕವಸ್ತು ಕಳ್ಳಸಾಗಣೆದಾರರಿಗೆ ಲಿಂಕ್ ಇದೆ ಎಂದು ನಾವು ಕಂಡುಕೊಂಡಿದ್ದೇವೆ” ಎಂದು ಪಂಜಾಬ್ ಪೊಲೀಸ್ ಮಹಾನಿರ್ದೇಶಕ ಸಿದ್ದಾರ್ಥ್ ಛಟ್ಟೋಪಾಧ್ಯಯ ಮಾಧ್ಯಮಗಳಿಗೆ ತಿಳಿಸಿದರು.

“ನಾವು ಭಯೋತ್ಪಾದನೆ ಮತ್ತು ಮಾದಕ ದ್ರವ್ಯ ಕಳ್ಳಸಾಗಾಣಿಕೆಯ ಸಮಸ್ಯೆಯನ್ನು ಎದುರಿಸುತ್ತಿದ್ದೇವೆ. ಮಾದಕ ದ್ರವ್ಯ ಕಳ್ಳಸಾಗಾಣಿಕೆದಾರರಿಂದ ಸಂಘಟಿತ ಕ್ರೈಮ್ ಗಳು ಮತ್ತು ಭಯೋತ್ಪಾದಕ ಚಟುವಟಿಕೆಗಳು ತುಂಬಾ ಅಪಾಯಕಾರಿ. ಲೂಧಿಯಾನ ಕೋರ್ಟ್ ಸ್ಪೋಟ ಪ್ರಕರಣವು ಅಂತಹದ್ದೇ ಒಂದು” ಎಂದಿದ್ದಾರೆ.

ಇದನ್ನೂ ಓದಿ:ಸಮಾಜ ವಿರೋಧಿ ಕೃತ್ಯಗಳನ್ನು ಸಹಿಸಲು ಸಾಧ್ಯವಿಲ್ಲ: ಪ್ರಹ್ಲಾದ ಜೋಶಿ

“ನಮಗೆ ಕೆಲವು ಸುಳಿವುಗಳು ಸಿಕ್ಕಿದೆ. ನಮಗೆ ಹರಿದ ಬಟ್ಟೆಗಳು, ಒಂದು ಸಿಮ್ ಕಾರ್ಡ್, ಒಂದು ಮೊಬೈಲ್ ಮತ್ತು ತೋಳಿನ ಮೇಲಿನ ಹಚ್ಚೆಯೊಂದನ್ನು ನಾವು ಪತ್ತೆ ಮಾಡಿದ್ದೇವೆ” ಎಂದು ಡಿಜಿಪಿ ಹೇಳಿದ್ದಾರೆ.

Advertisement

“ಮೃತ ಬಾಂಬರ್ ಸ್ಫೋಟಕಗಳನ್ನು ಹೊತ್ತೊಯ್ಯುತ್ತಿದ್ದರು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದಿದೆ. 24 ಗಂಟೆಗಳಲ್ಲಿ ಪ್ರಮುಖ ಆರೋಪಿಯನ್ನು ಪತ್ತೆ ಹಚ್ಚಿದ್ದೇವೆ. ಆತನನ್ನು 2017 ರಲ್ಲಿ ಬಂಧಿಸಲಾಗಿತ್ತು” ಎಂದು ಡಿಜಿಪಿ ಹೇಳಿದ್ದಾರೆ.

ಡಿಸೆಂಬರ್ 23ರಂದು ಲೂಧಿಯಾನದ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ಸಂಕೀರ್ಣದಲ್ಲಿ ಸ್ಫೋಟವಾಗಿತ್ತು. ಇದರಲ್ಲಿ ಓರ್ವ ಮೃತಪಟ್ಟು, ಐವರು ಗಾಯಗೊಂಡಿದ್ದರು.

ಇದನ್ನೂ ಓದಿ:ಲೂಧಿಯಾನ ಕೋರ್ಟ್ ನಲ್ಲಿ ದಾಳಿ ನಡೆಸಿದ್ದು ಮಾಜಿ ಪೊಲೀಸ್!

Advertisement

Udayavani is now on Telegram. Click here to join our channel and stay updated with the latest news.

Next