Advertisement

ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮನ್ ಗೆ Z+ ಭದ್ರತೆ: Z+ ಸೆಕ್ಯುರಿಟಿ ಎಂದರೇನು?

04:11 PM May 25, 2023 | Team Udayavani |

ಹೊಸದಿಲ್ಲಿ: ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮನ್ ಅವರಿಗೆ ಝಡ್ ಪ್ಲಸ್ ಭದ್ರತೆ ನೀಡಲು ಕೇಂದ್ರ ಸರ್ಕಾರ ಸೂಚಿಸಿದೆ. ದೇಶದಾದ್ಯಂತ ಅವರಿಗೆ ಈ ಭದ್ರತೆ ನೀಡಲಾಗುತ್ತದೆ.

Advertisement

ಪಂಜಾಬ್‌ ನ ಮುಖ್ಯಮಂತ್ರಿ ಭಗವಂತ್ ಮನ್ ಅವರಿಗೆ ಅಖಿಲ ಭಾರತ ಆಧಾರದ ಮೇಲೆ ‘Z+’ ಭದ್ರತೆಯನ್ನು ಒದಗಿಸಲು ಸಿಆರ್ ಪಿಎಫ್ ಗೆ ವಿನಂತಿಸಲಾಗಿದೆ, ತಕ್ಷಣವೇ ಜಾರಿಗೆ ಬರುವಂತೆ ಆದೇಶ ಹೊರಡಿಸಲಾಗಿದೆ.

Z+ ಕ್ಯಾಟಗರಿಯಲ್ಲಿ 10+ ಎನ್ ಎಸ್ ಜಿ ಕಮಾಂಡೋಗಳು ಮತ್ತು ಪೊಲೀಸ್ ಸಿಬ್ಬಂದಿ ಸೇರಿದಂತೆ 55 ಸಿಬ್ಬಂದಿಗಳು ಭದ್ರತೆ ನೀಡುತ್ತಾರೆ.

ಇದನ್ನೂ ಓದಿ:Mysuru ಅಭಿವೃದ್ಧಿಗಾಗಿ ನಾನು ಯಾರ ‘ಕೈ’ ಕಾಲು ಬೇಕಾದರೂ ಹಿಡಿಯುತ್ತೇನೆ: ಪ್ರತಾಪ್ ಸಿಂಹ

Z+ ಮಟ್ಟದ ಭದ್ರತೆಯನ್ನು ರಾಷ್ಟ್ರೀಯ ಭದ್ರತಾ ಸಿಬ್ಬಂದಿ ಕಮಾಂಡೋಗಳು ಒದಗಿಸುತ್ತಾರೆ. ಅವರು Heckler & Koch MP5 ಸಬ್-ಮೆಷಿನ್ ಗನ್‌ ಗಳು ಮತ್ತು ಆಧುನಿಕ ಸಂವಹನ ಸಾಧನಗಳೊಂದಿಗೆ ಶಸ್ತ್ರಸಜ್ಜಿತರಾಗಿರುತ್ತಾರೆ. ಅಲ್ಲದೆ ಈ ತಂಡದ ಪ್ರತಿಯೊಬ್ಬ ಸದಸ್ಯರು ಸಮರ ಕಲೆಗಳು ಮತ್ತು ನಿರಾಯುಧ ಯುದ್ಧ ಕೌಶಲ್ಯಗಳಲ್ಲಿ ಪ್ರವೀಣರಾಗಿರುತ್ತಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next