Advertisement

ಗಣಪನ ಜತೆ ಮನೆಗೆ ಬರಲಿದ್ದಾರೆ ಪುನೀತ್‌

04:02 PM Aug 23, 2022 | Team Udayavani |

ಉಪ್ಪಿನಬೆಟಗೇರಿ: ಗ್ರಾಮದ ಹದಿಮೂರು ಕೇರಿ ಓಣಿಯ ಕೆಂಬಾಗಿಮಠ ಕುಟುಂಬದ ಮೃತ್ಯುಂಜಯ ಕೆಂಬಾಗಿಮಠ ಕಳೆದ ಎರಡು ತಿಂಗಳಿಂದ ಗಣಪತಿ ತಯಾರಿಕೆಯಲ್ಲಿ ತೊಡಗಿದ್ದು, ವಿವಿಧ ಶೈಲಿಯ ಗಣೇಶ ಮೂರ್ತಿಗಳು ಸಿದ್ಧಗೊಳ್ಳುತ್ತಿವೆ. ಈ ಸಲ ವಿಶೇಷವಾಗಿ ಗಣಪತಿ ಜತೆ ಪುನೀತ್‌ ರಾಜಕುಮಾರ ಕುಳಿತಿರುವ ಮೂರ್ತಿ ತಯಾರಿಸಿದ್ದು, ಎಲ್ಲರ ಗಮನ ಸೆಳೆಯುತ್ತಿದೆ.

Advertisement

ಈಗಾಗಲೇ 150 ಮೂರ್ತಿಗಳನ್ನು ತಯಾರಿಸಿರುವ ಇವರು 15 ಬೃಹದಾದ ಮೂರ್ತಿ ರಚಿಸಿದ್ದಾರೆ. ಕಳೆದ ಎರಡು ವರ್ಷಗಳಿಂದ ಕೋವಿಡ್‌ ಆರ್ಥಿಕವಾಗಿ ಪೆಟ್ಟು ನೀಡಿತ್ತು. ಈ ಬಾರಿಯ ಗಣೇಶ ಹಬ್ಬಕ್ಕೆ ಎಲ್ಲಾ ನಿರ್ಬಂಧ ತೆಗೆದಿರುವುದರಿಂದ ಕಲಾವಿದರು ಬದುಕುವಂತಾಗಿದೆ. ಈ ವರ್ಷ ಅದ್ಧೂರಿಯಾಗಿ ಗಣೇಶ ಹಬ್ಬ ಆಚರಿಸುವಂತಾಗಿದೆ ಎನ್ನುತ್ತಾರೆ ಅವರು. ಉಪ್ಪಿನಬೆಟಗೇರಿಯಲ್ಲಿ ರಾಘವೇಂದ್ರ ಸಾಬಣ್ಣವರ, ಕಾಶಪ್ಪ ಬಡಿಗೇರ, ಗುರುನಾಥ ಬಡಿಗೇರ, ಮೃತ್ಯುಂಜಯ ಕೆಂಬಾಗಿಮಠ ಸೇರಿದಂತೆ ಅನೇಕ ಕಲಾವಿದರು ಗಣಪತಿ ಮೂರ್ತಿ ತಯಾರಿಕೆಯಲ್ಲಿ ತೊಡಗಿದ್ದಾರೆ.

-ಶ್ರೀಶೈಲ ಗೌರಿಮಠ

Advertisement

Udayavani is now on Telegram. Click here to join our channel and stay updated with the latest news.

Next