Advertisement

ಮಂತ್ರ ಪಠಿಸಿದರೆ ಶಿಕ್ಷೆ ಕಡಿತ : ಪಾಕ್ ಅಲ್ಪಸಂಖ್ಯಾತ ಕೈದಿಗಳಿಗೆ ನಿಯಮ !

09:24 PM Aug 06, 2022 | Team Udayavani |

ಇಸ್ಲಾಮಾಬಾದ್‌: “ನಿಮ್ಮ ಧರ್ಮದ ಪವಿತ್ರ ಗ್ರಂಥಗಳ ಸಾಲುಗಳನ್ನು ಹೇಳಿದರೆ ನಿಮ್ಮ ಶಿಕ್ಷೆಯ ಅವಧಿ ಕಡಿಮೆ ಮಾಡಲಾಗುವುದು’ -ಹೀಗೊಂದು ವಿಶೇಷ ನಿಯಮವನ್ನು ಅಲ್ಪಸಂಖ್ಯಾತ ಕೈದಿಗಳಿಗೆ ತರುವುದಕ್ಕೆಂದು ಪಾಕಿಸ್ತಾನದ ಪಂಜಾಬ್‌ ಪ್ರಾಂತ್ಯದ ಸರ್ಕಾರ ಸಿದ್ಧವಾಗಿದೆ.

Advertisement

ಹಿಂದೂ ಧರ್ಮದ ಕೈದಿಗಳಿಗೆ ಭಗವದ್ಗೀತೆಯ ಮಂತ್ರ ಪಠಿಸಿದರೆ ಹಾಗೂ ಕ್ರೈಸ್ತ ಧರ್ಮದ ಕೈದಿಗಳಿಗೆ ಬೈಬಲ್‌ನ ಸಾಲುಗಳನ್ನು ಪಠಿಸಿದರೆ ಶಿಕ್ಷೆಯ ಅವಧಿಯನ್ನು 3ರಿಂದ 6 ತಿಂಗಳ ಅವಧಿವರೆಗೆ ಕಡಿತಗೊಳಿಸಲಾಗುವುದು. ಈ ಬಗ್ಗೆ ಪಂಜಾಬ್‌ನ ಗೃಹ ಸಚಿವಾಲಯವು ಮುಖ್ಯಮಂತ್ರಿಗಳಿಗೆ ವಿಸ್ತೃತ ವರದಿ ನೀಡಿದೆ.

ಮುಖ್ಯಮಂತ್ರಿ ಅನುಮತಿ ನಂತರ ಸಂಪುಟದಿಂದ ಅನುಮೋದನೆ ಸಿಗಬೇಕಿದೆ. ಈ ರೀತಿಯ ನಿಯಮ ಈಗಾಗಲೇ ಮುಸ್ಲಿಂ ಕೈದಿಗಳಿಗೆ ಜಾರಿಯಲ್ಲಿದೆ.

Advertisement

Udayavani is now on Telegram. Click here to join our channel and stay updated with the latest news.

Next