ಬೆಳ್ತಂಗಡಿ: ಕಾರು ಹಾಗೂ ಆಟೋರಿಕ್ಷಾದ ನಡುವೆ ಅಪಘಾತ ಸಂಭವಿಸಿದ ಪ್ರಕರಣದಲ್ಲಿ ಆಟೋದಲ್ಲಿದ್ದ ಮಹಿಳೆ ಮೃತಪಟ್ಟ ಘಟನೆಗೆ ಸಂಬಂಧಿಸಿದಂತೆ ಕಾರು ಚಾಲಕನಿಗೆ ಶಿಕ್ಷೆ ಪ್ರಕಟವಾಗಿದೆ.
11.9.2016 ರಂದು ಸಂಜೆ 5.00 ಗಂಟೆಗೆ ಕಾರು ಕೆಎ.21 ಎನ್.7021 ನಂ.ನ ಕಾರನ್ನು ಉಪ್ಪಿನಂಗಡಿ ಕಡೆಯಿಂದ ಗುರುವಾಯನಕೆರೆ ಕಡೆಗೆ ಚಲಾಯಿಸಿ ಓವರ್‌ಟೇಕ್ ಮಾಡುವ ಸಮಯ ಉಪ್ಪಿನಂಗಡಿ ಕಡೆಗೆ ಹೋಗುತ್ತಿದ್ದ ಅಟೋರಿಕ್ಷಾ ಕೆಎ.21.5922 ಢಿಕ್ಕಿ ಹೊಡೆದ ಪರಿಣಾಮ ಅಟೋರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದ ಬಿ.ಕೆ.ವೀಣಾ ಅವರು ತೀವ್ರ ಗಾಯಗೊಂಡು ಮಂಗಳೂರು ಎ.ಜೆ. ಅಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದು ಅಪಾದಿತ ಕಾರು ಚಾಲಕ ಚಿದಾನಂದ ವಿರುದ್ಧ ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಅದರಂತೆ 06.08.2024ರಂದು ಆರೋಪಿತ ಚಿದಾನಂದ ಅವರಿಗೆ ಕಲಂ 279 ನಲ್ಲಿ 1 ಸಾವಿರ ದಂಡ 1ತಿಂಗಳ ಸಾದ ಕಾರಾಗƒಹ ಶಿಕ್ಷೆ, ಕಲಂ 337 ರಂತೆ 1ಸಾವಿರ ದಂಡ 1ತಿಂಗಳ ಸಾದಾ ಕಾರಾಗೃಹ ಶಿಕ್ಷೆ, ಕಲಂ 338 ರಂತೆ 1 ಸಾವಿರ ದಂಡ 1 ತಿಂಗಳ ಸಾದಾ ಕಾರಾಗೃಹ ಶಿಕ್ಷೆ, ಕಲಂ 304(ಎ) ರಂತೆ 1000 ಸಾವಿರ ದಂಡ 2 ವರ್ಷ ಕಾರಾಗೃಹ ಶಿಕ್ಷೆ ತಪ್ಪಿದರೆ 1ತಿಂಗಳ ಹೆಚ್ಚಿನ ಕಾರಾಗೃಹ ಶಿಕ್ಷೆಯನ್ನು ಪ್ರಧಾನ ವ್ಯವಹಾರಿಕ ನ್ಯಾಯಾಧೀಶರು ಹಾಗೂ ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿಗಳು ಬೆಳ್ತಂಗಡಿ ನ್ಯಾಯಾಲಯವು ಆದೇಶಿಸಿದೆ.
ತನಿಖಾಧಿಕಾರಿ ನಾಗೇಶ್ ಕದ್ರಿ, ಸರಕಾರಿ ಅಭಿಯೋಜಕರಾದ ಕಿರಣ್ ಮತ್ತು ಹಾಲಿ ಅಶಿಕಾ ಮೇಡಮ್ ವಾದ ಮಂಡಿಸಿದ್ದು, ತನಿಖಾ ಸಹಾಯಕನಾಗಿ ವೆಂಕಟೇಶ್ ಸಹಕರಿಸಿದ್ದರು.