Advertisement

ಧರ್ಮಸ್ಥಳದ ಗೋಶಾಲೆಗೆ ಪುಂಗನೂರು ಹಸು ಆಗಮನ

11:25 PM Jan 12, 2023 | Team Udayavani |

ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳದ ಗೋಶಾಲೆಗೆ ಪುಂಗನೂರು ತಳಿಯ 5 ಹಸುಗಳ ಆಗಮನವಾಗಿದೆ. ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಪುಂಗನೂರು ಗ್ರಾಮದ ಗೋದಾವರಿ ತೀರದಿಂದ ಹಸುಗಳನ್ನು ತರಲಾಗಿದೆ. ಆಕರ್ಷಕ ಹಾಗೂ ಬೆಲೆಬಾಳುವ ಈ ತಳಿಯ ಹಸುವಿನ ಹಾಲನ್ನು ಶ್ರೀ ಮಂಜುನಾಥ ಸ್ವಾಮಿಯ ಅಭಿಷೇಕಕ್ಕೆ ಬಳಕೆ ಮಾಡಲು ಕ್ಷೇತ್ರವು ಚಿಂತಿಸಿದೆ.

Advertisement

ದೇಶದಲ್ಲಿ ಸುಮಾರು 40 ವಿವಿಧ ತಳಿಯ ಹಸುಗಳಿದ್ದರೂ ಪುಂಗನೂರು ಹಸುವಿನ ಹಾಲಿಗೆ ಪ್ರಾಮುಖ್ಯತೆ ಹೆಚ್ಚು. ಈಗಾಗಲೇ ಧರ್ಮಸ್ಥಳದಲ್ಲಿ ಪಾರಂಪರಿಕವಾಗಿ ದೇಸಿ ತಳಿ ಹಸುಗಳ ಹಾಲಿನಿಂದಲೇ ದೇವರಿಗೆ ಅಭಿಷೇಕ ಮಾಡಲಾಗುತ್ತದೆ.

ದಿನಕ್ಕೆ 3 ಲೀಟರ್‌ ಬಳಕೆ
ಇದೀಗ ಶ್ರೀ ಕ್ಷೇತ್ರಕ್ಕೆ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಅವರ ಅನುಮತಿಯಂತೆ ಪುಂಗನೂರು ತಳಿಯ 2 ದನ ಅದರಲ್ಲಿ ಒಂದು ಹೆಣ್ಣು ಹಾಗೂ ಒಂದು ಗಂಡು ಕರು ಸಹಿತ ಒಂದು ಹೋರಿಯನ್ನು ತರಲಾಗಿದೆ. ಹಸುವಿಗೆ 4 ಲಕ್ಷ ರೂ. ಹಾಗೂ ಹೋರಿಗೆ 90 ಸಾವಿರ ರೂ. ನೀಡಲಾಗಿದೆ. ಅವುಗಳ ಹಾಲಿಗೆ ವಿಶೇಷ ಸ್ಥಾನವಿದ್ದು ಪೌಷ್ಟಿಕತೆ ಮತ್ತು ಪಾವಿತ್ರ್ಯ ಅಧಿಕ. ಪ್ರತಿನಿತ್ಯ 3 ಲೀ. ಹಾಲನ್ನು ಅಭಿಷೇಕಕ್ಕೆ ಬಳಸಲಾಗುತ್ತದೆಯಂತೆ. ಇದಕ್ಕೂ ಮುನ್ನ ದೇಸಿ ತಳಿಗಳಾದ ಗಿರ್‌, ಹಳ್ಳಿಕಾರ್, ಸಾಯಿವಾಲ, ಮಲಾ°ಡ್‌ ಗಿಡ್ಡ ತಳಿಯ ಹಾಲು ಬಳಸಲಾಗುತ್ತಿತ್ತು.

139 ಗೋವುಗಳು
ಕ್ಷೇತ್ರದ ಗೋಶಾಲೆಯಲ್ಲಿ ಇದೀಗ ಒಟ್ಟು 10 ಪುಂಗನೂರು ಹಸುಗಳಿದ್ದು, 7 ಗಿರ್‌ ತಳಿ ಸೇರಿ ಒಟ್ಟು 139 ಗೋವುಗಳಿವೆ ಎಂದು ಕ್ಷೇತ್ರದ ಗೋಶಾಲೆ ವ್ಯವಸ್ಥಾಪಕರಾದ ಯೋಗೀಶ್‌ ಭಟ್‌ ಉದಯವಾಣಿಗೆ ತಿಳಿಸಿದ್ದಾರೆ.

ಇದನ್ನೂ ಓದಿ:ಮಲೇಷ್ಯಾ ಓಪನ್‌ ಬ್ಯಾಡ್ಮಿಂಟನ್‌: ಪ್ರಣಯ್‌ ಕ್ವಾರ್ಟರ್‌ ಫೈನಲ್‌ ಪಯಣ

Advertisement
Advertisement

Udayavani is now on Telegram. Click here to join our channel and stay updated with the latest news.

Next