Advertisement

ನನ್ನ ಮೊಮ್ಮಕ್ಕಳು ಹಸಿವಿನಿಂದ ಅಳುವುದನ್ನು ನೋಡಲಾಗುವುದಿಲ್ಲ: 85 ವರ್ಷದ ವಾರಿಯರ್ ಅಜ್ಜಿ

01:31 PM Jul 25, 2020 | Mithun PG |

ಪುಣೆ: ಸಾಮಾಜಿಕ ಜಾಲತಾಣಗಳಲ್ಲಿ ಸದ್ಯ ವಿಡಿಯೋವೊಂದು ವೈರಲ್ ಆಗಿದ್ದು ‘ವಯಸ್ಸಾದ ವೃದ್ದೆಯೊಬ್ಬರು ಹೊಟ್ಟೆಪಾಡಿಗಾಗಿ ತಾವು ಕಲಿತ ಮಾರ್ಷಲ್ ಆರ್ಟ್ಸ್ ವಿದ್ಯೆಯನ್ನು ಪ್ರದರ್ಶಿಸುತ್ತಿದ್ದು ‘ವಾರಿಯರ್ ಅಜ್ಜಿ’ ಎಂದೇ ಖ್ಯಾತರಾಗಿದ್ದಾರೆ.

Advertisement

ಪುಣೆಯ ಶಾಂತಾ ಬಾಲು ಪವಾರ್ ಎಂಬ 85 ವರ್ಷದ ವೃದ್ಧೆ, ಲಾಕ್ ಡೌನ್ ಸಂದರ್ಭದಲ್ಲಿ ಹೊಟ್ಟೆಪಾಡಿಗಾಗಿ ಬಿದಿರಿನ ಕಡ್ಡಿ ಹಿಡಿದುಕೊಂಡು ಬೀದಿಬಿದಿಗಳಲ್ಲಿ ತಾವು ಕಲಿತ ವಿದ್ಯೆಯನ್ನು ಪ್ರದರ್ಶಿಸಿ ಹಣ ಸಂಪಾದಿಸುತ್ತಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ಅಜ್ಜಿಯ ಕೌಶಲಕ್ಕೆ ಹಲವರು ಬೆರಗಾಗಿದ್ದಾರೆ.

ಈ ಕುರಿತು ಮಾಧ್ಯಮದೊಮದಿಗೆ ಮಾತನಾಡಿದ ಡೊಂಬಾರಿ ಸಮುದಾಯಕ್ಕೆ ಸೇರಿದ ಶಾಂತಾ ಬಾಲು, ಈ ಕಲೆ ತನಗೆ ತಂದೆಯಿಂದ ಬಂದಿದ್ದು, ಹಗ್ಗದ ಮೇಲೆ ನಡೆಯುವುದು, ಬಾಟಲ್ ಸಮತೋಲನ ಮಾಡುವುದು, ಲಾಠಿ-ಕತ್ತಿ ಮುಂತಾದ ವಿದ್ಯೆಗಳು ಕರಗತವಾಗಿವೆ. ನನಗೆ 8 ವರ್ಷವಿದ್ದಾಗ ನನ್ನ ತಂದೆ ಇದನ್ನು ಕಲಿಸಿಕೊಟ್ಟರು. ಅವರ ನಿಧನದ ನಂತರ ಇದೀಗ ವಿದ್ಯೆಯನ್ನು ಮುಂದುವರೆಸಿಕೊಂಡು ಹೋಗುತ್ತಿದ್ದೇನೆ. ನಾನು ಎಂದಿಗೂ ಭಿಕ್ಷೆ ಬೇಡುವುದಿಲ್ಲ. ನಾನು ಕಲಿತ ವಿದ್ಯೆಗೆ ಜನರು ನೀಡುವ ಕಾಣಿಕೆ ಎಂದು ತಿಳಿಸಿದ್ದಾರೆ.

ಕೋವಿಡ್  ಸಂದರ್ಭದಲ್ಲಿ  ಹಲವಾರು ಬೀದಿ ಪ್ರದರ್ಶನಕಾರರು  ಮತ್ತು ಕಲಾವಿದರು  ರಸ್ತೆಯಿಂದ ದೂರವಿದ್ದಾರೆ. ಆದರೇ ಈ ಲಾಠಿ ಹಿಡಿದು ಹೊರಗೆ ಹೋಗಿ ಪ್ರದರ್ಶನ ನೀಡುವುದು ನನಗೆ ಅನಿವಾರ್ಯವಾಗಿತ್ತು. “ವಯಸ್ಸಾದ ಕಾರಣ ಕೋವಿಡ್ ಗೆ ಬೇಗನೇ ಒಳಗಾಗುವುದರಿಂದ ಹೊರಗೆ ಹೋಗಬಾರದು ಎಂದು ಹಲವರು ತಿಳಿಸಿದ್ದರು. ಆದರೆ, ನನ್ನ ಮೊಮ್ಮಕ್ಕಳು ಹಸಿವಿನಿಂದ ಅಳುವುದನ್ನು ನೋಡುವುದು ನನಗೆ ಸಹಿಸಲಾಗದ ಸಂಗತಿಯಾಗಿದೆ, ಎಂದು ಅವರು ಹೇಳಿದರು.

Advertisement

ಲಾಕ್ ಡೌನ್ ಸಮಯದಲ್ಲಿ ನಾವು ಸಹಾಯವನ್ನು ನಿರೀಕ್ಷಿಸುವುದು ತಪ್ಪು. ಇದ್ದವರು ನನ್ನ ಪ್ರದರ್ಶನಕ್ಕೆ ಸ್ವಲ್ಪ ಹಣ ನೀಡುತ್ತಾರೆ.  ದಿನವೊಂದಕ್ಕೆ ಸರಾಸರಿ 200 ರಿಂದ 300 ರೂಗಳನ್ನು ಗಳಿಸುತ್ತೇನೆ. ವೈರಸ್ ಭಯದ ಹೊರತಾಗಿಯೂ ನನ್ನ ಮೊಮ್ಮಕ್ಕಳಿಗಾಗಿ ಕೆಲವು ರೂಪಾಯಿಗಳನ್ನು ಕೂಡಿಡಬೇಕೆಂದು ಬಯಸುತ್ತೇನೆ. ಮಾತ್ರವಲ್ಲದೆ ಅವರಿಗೆ ಉತ್ತಮ ಶಿಕ್ಷಣ ಕೊಡಿಸಬೇಕು ಎಂದು ತಿಳಿಸಿದರು.

ಅಜ್ಜಿಯು ತನ್ನ ಕಲೆಯನ್ನು  ಪ್ರದರ್ಶನ ನೀಡುತ್ತಿರುವ  ವಿಡಿಯೋವನ್ನು ಮರಾಠಿ ನಟಿ ಐಶ್ವರ್ಯಾ ಕೇಲ್ ಮೊದಲು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದರು. ಇವರ ವಿದ್ಯೆಗೆ ನಟರಾದ ಸೋನು ಸೂದ್, ರಿತೀಶ್ ದೇಶ್ ಮುಖ್ , ರಂದೀಪ್ ಹೂಡಾ ಮತ್ತು ಲಕ್ಷ್ಮಿ ರತನ್ ಶುಕ್ಲಾ ಸೇರಿದಂತೆ  ಪುಣೆ ಪೊಲೀಸ್ ಆಯುಕ್ತ ಕೆ.ವೆಂಕಟೇಶಮ್ ಅವರು ಕೂಡ ಪ್ರಶಂಸಿದ್ದರು. ಮಾತ್ರವಲ್ಲದೆ ಸೋನು ಸೂದ್ ಅಜ್ಜಿಗೆ ಸಹಾಯ ಮಾಡಲು ಮುಂದಾಗಿ ತರಭೇತಿ ಕೇಂದ್ರವನ್ನು ಸ್ಥಾಪಿಸಿಕೊಡುವ ಮಾತನಾಡಿದ್ದಾರೆ.

ಪವಾರ್ ಅವರು ಹಲವಾರು ಬಾಲಿವುಡ್ ಚಿತ್ರಗಳಲ್ಲಿ ಹಿನ್ನೆಲೆ ಪ್ರದರ್ಶಕರಾಗಿ ಕೆಲಸ ಮಾಡಿದ್ದಾರೆ. ದಿವಂಗತ ನಟಿ ಶ್ರೀದೇವಿ ಅವರ ಜೊತೆಗೆ ತೆಗೆಸಿಕೊಂಡ ಫೋಟೋವೊಂದನ್ನು ಈಗಲೂ ಜೋಪಾನವಾಗಿಟ್ಟಿದ್ದಾರೆ.

ವಿಡಿಯೋ ವೈರಲ್ ಆದ ತಕ್ಷಣ ಹಲವಾರು ಜನರು ನನ್ನನ್ನು ಗುರುತಿಸಲು ಆರಂಭಿಸಿದ್ದಾರೆ. ಅನೇಕ ಜನರೊಂದಿಗೆ ಮಾತನಾಡಿದ್ದೇನೆ. ಇದು ನನ್ನ ಹೃದಯವನ್ನು ಬೆಚ್ಚಗಾಗಿಸುತ್ತದೆ. ಕಲಾವಿದೆಯಾಗಿ ನಾನು ನನ್ನ ಜೀವನವನ್ನು ಪ್ರಾಮಾಣಿಕತೆ ಮತ್ತು ಕಠಿಣ ಪರಿಶ್ರಮದಿಂದ ಮುನ್ನಡೆಸಿದ್ದೇನೆ. ದೇವರ ಅನುಗ್ರಹದಿಂದ ನಾನು ಇನ್ನೂ ಉತ್ತಮವಾಗಿ ಕಾರ್ಯನಿರ್ವಹಿಸುತ್ತೇನೆ ಎಂದು ವಾರಿಯರ್ ಅಜ್ಜಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next