Advertisement

ಪುನೀತ್‌ “ಯುವರತ್ನ’ನಿಗೆ ಸಯೇಶಾ ಜೋಡಿ?

05:33 AM Feb 05, 2019 | |

ಪುನೀತ್‌ರಾಜಕುಮಾರ್‌ ಅಭಿನಯದ “ನಟಸಾರ್ವಭೌಮ’ ಚಿತ್ರ ಈ ವಾರ ತೆರೆಕಾಣುತ್ತಿದೆ. ಅದರ ಬೆನ್ನಲ್ಲೇ ಅವರ ಮತ್ತೂಂದು ಚಿತ್ರ “ಯುವರತ್ನ’ ಸೆಟ್ಟೇರುತ್ತಿದ್ದು, ಫೆ.14 ರಿಂದ ಆರಂಭವಾಗಲಿದೆ. ಈ ಹಿಂದೆ “ರಾಜ್‌ಕುಮಾರ’ ಚಿತ್ರ ನಿರ್ದೇಶಿಸಿದ್ದ ಸಂತೋಷ್‌ ಆನಂದರಾಮ್‌ ಈ ಚಿತ್ರದ ನಿರ್ದೇಶಕರು. ಚಿತ್ರಕ್ಕೆ ಸಂಬಂಧಿಸಿದಂತೆ ಬಹುತೇಕ ಎಲ್ಲವೂ ಅಂತಿಮವಾಗಿದೆ. ಆದರೆ, ನಾಯಕಿಯ ಆಯ್ಕೆ ಮಾತ್ರ ಇನ್ನೂ ಆಗಿಲ್ಲ.

Advertisement

ಆರಂಭದಲ್ಲಿ “ಯುವರತ್ನ’ ಚಿತ್ರಕ್ಕೆ ತಮನ್ನಾ ಬರುತ್ತಾರೆಂಬ ಸುದ್ದಿ ಕೇಳಿಬಂದಿತ್ತು. ಈಗ ಮತ್ತೂಂದು ಹೊಸ ಹೆಸರು ಕೇಳಿಬರುತ್ತಿದೆ. ಅದು ಸಯೇಶಾ ಸೈಗಲ್‌. ಈಗಷ್ಟೇ ತೆಲುಗು, ಹಿಂದಿ, ತಮಿಳು ಚಿತ್ರರಂಗದಲ್ಲಿ ನೆಲೆಯೂರುತ್ತಿರುವ ಸಯೇಶಾ, “ಯುವರತ್ನ’ ಚಿತ್ರಕ್ಕೆ ನಾಯಕಿಯಾಗಲಿದ್ದಾರೆಂಬ ಹೊಸ ಸುದ್ದಿ ಗಾಂಧಿನಗರದಲ್ಲಿ ಕೇಳಿಬರುತ್ತಿದೆ. ಅಷ್ಟಕ್ಕೂ ಈ ಸಯೇಶಾ ಯಾರೆಂದರೆ ಬಾಲಿವುಡ್‌ ನಟ ಸುಮಿತ್‌ ಸೈಗಲ್‌ ಅವರ ಪುತ್ರಿ.

ಈಗಾಗಲೇ ತೆಲುಗಿನ “ಅಖೀಲ್‌’ ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿಕೊಟ್ಟಿರುವ ಸಯೇಶಾ, ಅಜಯ್‌ ದೇವಗನ್‌ ಅಭಿನಯದ “ಶಿವಾಯ್‌’ ಚಿತ್ರದಲ್ಲೂ ನಟಿಸಿದ್ದಾರೆ. ಇದಲ್ಲದೇ ತಮಿಳು ಸಿನಿಮಾವೊಂದರಲ್ಲೂ ಸಯೇಶಾ ಕಾಣಿಸಿಕೊಂಡಿದ್ದಾರೆ. ಈಗ ಪುನೀತ್‌ರಾಜಕುಮಾರ್‌ ಅವರ “ಯುವರತ್ನ’ ಮೂಲಕ ಕನ್ನಡಕ್ಕೆ ಬರುತ್ತಾರೆನ್ನಲಾಗಿದೆ. ಆದರೆ, ಆಕೆ ಬರುವುದು ಇನ್ನೂ ಅಂತಿಮವಾಗಿಲ್ಲ.

ಈಗಷ್ಟೇ ಒಂದು ಸುತ್ತಿನ ಮಾತುಕತೆಯಾಗಿದೆ. ಇವರ ಜೊತೆಗೆ ಇನ್ನಿಬ್ಬರು ನಟಿಯರನ್ನು ಕೂಡಾ ಚಿತ್ರತಂಡ ಸಂಪರ್ಕಿಸಿದೆ. ಈ ಬಗ್ಗೆ ಮಾತನಾಡುವ ನಿರ್ದೇಶಕ ಸಂತೋಷ್‌ ಆನಂದರಾಮ್‌, “ಚಿತ್ರಕ್ಕೆ ನಾಯಕಿಯ ಆಯ್ಕೆಯಾಗಿಲ್ಲ. ಒಂದಷ್ಟು ನಟಿಯರ ಜೊತೆ ಮಾತುಕತೆ ನಡೆಯುತ್ತಿದೆ. ಅದರಲ್ಲಿ ಸಯೇಶಾ ಕೂಡಾ ಒಬ್ಬರು. ಹಾಗಂತ ಅವರೇ ನಾಯಕಿಯಾಗುತ್ತಾರೆಂದಲ್ಲ. ಮಾತುಕತೆ ನಡೆಸಿರುವುದಂತೂ ನಿಜ’ ಎನ್ನುತ್ತಾರೆ. 

Advertisement

Udayavani is now on Telegram. Click here to join our channel and stay updated with the latest news.

Next