Advertisement

ಜನವರಿಯಲ್ಲಿ ಪುನೀತ್‌ ಹೊಸ ಚಿತ್ರ ಶುರು

09:56 AM Nov 08, 2019 | Lakshmi GovindaRaju |

ಪವರ್‌ ಸ್ಟಾರ್‌ ಪುನೀತ್‌ ರಾಜಕುಮಾರ್‌ ಸದ್ಯ “ಯುವರತ್ನ’ ಚಿತ್ರದಲ್ಲಿ ಬಿಝಿಯಾಗಿದ್ದಾರೆ. ಸದ್ಯ ಈ ಚಿತ್ರದ ಪೋಸ್ಟ್‌ ಪ್ರೊಡಕ್ಷನ್‌ ಕೆಲಸಗಳು ಭರದಿಂದ ನಡೆಯುತ್ತಿರುವಾಗಲೇ, ಪುನೀತ್‌ ಅಭಿನಯಿಸುತ್ತಿರುವ ಮುಂಬರುವ ಚಿತ್ರಗಳ ಕೆಲಸಗಳಿಗೂ ತೆರೆಮರೆಯಲ್ಲಿ ಚಾಲನೆ ಸಿಕ್ಕಿದೆ.

Advertisement

ಮೂಲಗಳ ಪ್ರಕಾರ, “ಯುವರತ್ನ’ ಚಿತ್ರದ ಬಳಿಕ ಪುನೀತ್‌ ರಾಜಕುಮಾರ್‌, ಬಹದ್ದೂರ್‌ ಚೇತನ್‌ ಕುಮಾರ್‌ ನಿರ್ದೇಶನದ “ಜೇಮ್ಸ್‌’ ಚಿತ್ರದಲ್ಲಿ ಅಭಿನಯಿಸುತ್ತಿದ್ದು, ಈಗಾಗಲೇ “ಜೇಮ್ಸ್‌’ ಪ್ರೀ-ಪ್ರೊಡಕ್ಷನ್‌ ಕೆಲಸಗಳಿಗೆ ಚಾಲನೆ ಸಿಕ್ಕಿದೆ. ಸದ್ಯ “ಜೇಮ್ಸ್‌’ ಚಿತ್ರದ ಸ್ಕ್ರಿಪ್ಟ್ ಕೆಲಸಗಳು ಅಂತಿಮ ಹಂತದಲ್ಲಿದ್ದು, ಇದೇ ತಿಂಗಳಾಂತ್ಯಕ್ಕೆ “ಜೇಮ್ಸ್‌’ ಸೆಟ್ಟೇರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಇನ್ನು ಇಲ್ಲಿಯವರೆಗೂ ಕಾಣಿಸಿಕೊಂಡಿರದ ವಿಭಿನ್ನ ಪಾತ್ರದಲ್ಲಿ ಪುನೀತ್‌ ರಾಜಕುಮಾರ್‌ ಅವರನ್ನು “ಜೇಮ್ಸ್‌’ ಲುಕ್‌ನಲ್ಲಿ ಪ್ರೇಕ್ಷಕರ ಮುಂದೆ ತರಲು ತಯಾರಿ ನಡೆಸುತ್ತಿರುವ ನಿರ್ದೇಶಕ ಚೇತನ್‌ ಕುಮಾರ್‌, ಅದಕ್ಕಾಗಿ ಸಾಕಷ್ಟು ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಜನವರಿ ವೇಳೆಗೆ “ಜೇಮ್ಸ್‌’ ಚಿತ್ರೀಕರಣ ಶುರುವಾಗುವ ಸಾಧ್ಯತೆಯಿದ್ದು, ಮುಂದಿನ ವರ್ಷದ ಮಧ್ಯ ಭಾಗದಲ್ಲಿ “ಜೇಮ್ಸ್‌’ ಗೆಟಪ್‌ನಲ್ಲಿ ಪುನೀತ್‌ ಅವರನ್ನು ಅಭಿಮಾನಿಗಳು ತೆರೆಮೇಲೆ ನೋಡಬಹುದು.

Advertisement

Udayavani is now on Telegram. Click here to join our channel and stay updated with the latest news.

Next