Advertisement

ಪುನೀತ್‌ಗೆ ಹುಟ್ಟುಹಬ್ಬ ಸಂಭ್ರಮ

11:31 AM Mar 18, 2017 | |

ಪುನೀತ್‌ರಾಜ್‌ಕುಮಾರ್‌ ಶುಕ್ರವಾರ ಅಭಿಮಾನಿಗಳ ಜತೆ ತಮ್ಮ 42 ನೇ ಹುಟ್ಟುಹಬ್ಬ ಆಚರಿಸಿಕೊಂಡರು. ತಮ್ಮ ಪ್ರೀತಿಯ ನಟನ ಹುಟ್ಟು ಹಬ್ಬದ ಹಿನ್ನೆಲೆಯಲ್ಲಿ ಗುರುವಾರ ರಾತ್ರಿಯಿಂದಲೇ ಅಭಿಮಾನಿಗಳು ಸದಾಶಿವನಗರದಲ್ಲಿರುವ ಪುನೀತ್‌ ಮನೆಯ ಮುಂದೆ ಸಾಲುಗಟ್ಟಿ ನಿಂತು ಹುಟ್ಟುಹಬ್ಬದ ಶುಭಾಶಯ ಹೇಳಿದರು.

Advertisement

ದೂರದ ಊರುಗಳಿಂದ ಆಗಮಿಸಿ, ಅಭಿಮಾನಿಗಳು ಪ್ರೀತಿಯಿಂದ ತಂದಿದ್ದ ಕೇಕ್‌ ಕತ್ತರಿಸಿ ಅವರೊಂದಿಗೆ  ಸಂಭ್ರಮಿಸಿದರು. ಪುನೀತ್‌ರಾಜ್‌ಕುಮಾರ್‌ ಸೇವಾ ಸಮಿತಿ, ರಾಜರತ್ನ ಪುನೀತ್‌ರಾಜ್‌ಕುಮಾರ್‌ ಸಂಘ ಸೇರಿದಂತೆ ಹಲವು ಸಂಘಟನೆಯ ಪದಾಧಿಕಾರಿಗಳು ಶಾಲು ಹೊದಿಸಿ, ಸನ್ಮಾನಿಸಿದರು. ಇದೇ ವೇಳೆ ಚಿತ್ರರಂಗದ ಅನೇಕ ಗಣ್ಯರು ಪುನೀತ್‌ ಮನೆಗೆ ತೆರಳಿ ಶುಭಾಶಯ ಕೋರಿದರು.

Advertisement

Udayavani is now on Telegram. Click here to join our channel and stay updated with the latest news.

Next