Advertisement

ಪುನೀತ್ ಹೊಸ ಚಿತ್ರದ ಟೈಟಲ್ ಲಾಂಚ್..ವಿಭಿನ್ನ ಲುಕ್ ಗೆ ಅಪ್ಪು ಫ್ಯಾನ್ಸ್ ಫಿದಾ

12:56 PM Jul 01, 2021 | Team Udayavani |

ಬೆಂಗಳೂರು : ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಹಾಗೂ ಲೂಸಿಯಾ ಪವನ್ ಜೊತೆಯಾಗಿ ಸಿನಿಮಾ ಮಾಡುತ್ತಿರುವ ವಿಚಾರ ಎಲ್ಲರಿಗೂ ಗೊತ್ತಿರುವ ವಿಚಾರ. ಇದೀಗ  ಈ ಚಿತ್ರದ ಟೈಟಲ್ ಫೈನಲ್ ಆಗಿದ್ದು, ಇಂದು ( ಜುಲೈ 1 ) ಅನಾವರಣಗೊಂಡಿದೆ.

Advertisement

ಅಂದಹಾಗೆ ಈ ಹೊಸ ಚಿತ್ರಕ್ಕೆ ದ್ವಿತ್ವ ಎಂದು ನಾಮಕರಣ ಮಾಡಲಾಗಿದೆ.  ವಿಭಿನ್ನ ಲುಕ್ ಗಳ ಮೂಲಕ ಟೈಟಲ್ ಲಾಂಚ್ ಮಾಡಲಾಗಿದ್ದು, ಕನ್ನಡ ಸಿನಿ ರಸಿಕರಲ್ಲಿ ಕುತೂಹಲ ಮೂಡಿಸಿದೆ.

‘ದ್ವಿತ್ವ’ ಅಂದ್ರೆ ಎರಡು ಎಂದರ್ಥ. ದ್ವಿ ಪಾತ್ರದಲ್ಲಿ ಅಂದ್ರೆ ಲೂಸಿಯಾ ರೀತಿಯ ಕಥೆಯನ್ನ ಹೆಣೆಯಲಾಗಿದೆ ಎಂಬ ಚರ್ಚೆಗಳು ಚಂದನವನದಲ್ಲಿ ಆರಂಭಗೊಂಡಿವೆ. ಚಿತ್ರದ ಡ್ಯೂಯಲ್ ಪರ್ಸನಾಲಿಟಿಯ ಸುಳಿವು ನೀಡುತ್ತಿರುವ ಫಸ್ಟ್ ಲುಕ್ ಈ ಚರ್ಚೆಗಳಿಗೆ ಕಾರಣ. ಸೈಕಲಾಜಿಕಲ್ ಥ್ರಿಲ್ ಕಥೆ ಹೊಂದಿದೆ.

ಹೊಂಬಾಳೆ ಫಿಲ್ಮ್ಸ್ ಬ್ಯಾನರ್ ನಡಿ ದ್ವಿತ್ವ ಚಿತ್ರ ನಿರ್ಮಾಣ ಮಾಡುತ್ತಿದೆ. ಛಾಯಾಗ್ರಹಣ ಪ್ರೀತಾ ಜಯರಾಮನ್ ಮತ್ತು ಪೂರ್ಣಚಂದ್ರ ತೇಜಸ್ವಿಯವರ ಸಂಗೀತ ಚಿತ್ರಕ್ಕಿರಲಿದೆ. ಇದೇ ಸೆಪ್ಟೆಂಬರ್ ನಲ್ಲಿ ದ್ವಿತ್ವ ಸಿನಿಮಾದ ಚಿತ್ರೀಕರಣ ಆರಂಭವಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next