Advertisement

ವೈದ್ಯರ ಹೋರಾಟಕ್ಕೆ ಪುನೀತ್‌ ಸೆಲ್ಯೂಟ್‌

11:15 AM Mar 22, 2020 | Lakshmi GovindaRaj |

ಭಾರತದಲ್ಲಿ ದಿನದಿಂದ ದಿನಕ್ಕೆ ಕೊರೊನಾ ವೈರಸ್‌ ಹಾವಳಿ ಹೆಚ್ಚಾಗುತ್ತಿದ್ದು, ಸರ್ಕಾರ ಕೂಡ ಬಿಗಿಯಾದ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುತ್ತಿದೆ. ಮತ್ತೂಂದೆಡೆ, ಕೊರೊನಾ ವಿರುದ್ದ ಹೋರಾಟಕ್ಕೆ ಜನ ಸಾಮಾನ್ಯರು, ವಿವಿಧ ಕ್ಷೇತ್ರಗಳ ಗಣ್ಯರು ಕೂಡ ಸಾಥ್‌ ನೀಡುತ್ತಿದ್ದಾರೆ. ಇನ್ನು ಚಿತ್ರರಂಗದ ಮಂದಿಕೂಡ ಇದರಲ್ಲಿ ಹಿಂದೆ ಬಿದ್ದಿಲ್ಲ. ಈಗಾಗಲೇ ಚಿತ್ರರಂಗದ ಹಲವು ತಾರೆಯರು, ಸ್ಟಾರ್-ಸೆಲೆಬ್ರಿಟಿಗಳು ಕೊರೊನಾ ವಿರುದ್ದ ಜನ ಜಾಗೃತಿ ಕೆಲಸ ಮಾಡುತ್ತಿದ್ದಾರೆ.

Advertisement

ಇದೀಗ ಪವರ್‌ಸ್ಟಾರ್‌ ಪುನೀತ್‌ ರಾಜಕುಮಾರ್‌ ಕೂಡ ಕೊರೊನಾ ಎನ್ನುವ ಮಹಾಮಾರಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರಿಗೆ ಹ್ಯಾಟ್ಸಾಫ್ ಹೇಳುತ್ತಿದ್ದಾರೆ. ಸೋಶಿಯಲ್‌ ಮೀಡಿಯಾದಲ್ಲಿ “ಬ್ರಾವೋಡಾಕ್ಟರ್‌’ ಎನ್ನುವ ಹೊಸ ಅಭಿಯಾನ ಪ್ರಾರಂಭವಾಗಿದ್ದು, ಸದ್ಯದ ಅಪಾಯಕಾರಿ ಸಂದರ್ಭದಲ್ಲಿ ಕೊರೊನಾ ವಿರುದ್ಧ ಹೋರಾಡುತ್ತಿರುವ ವೈದ್ಯಕೀಯ ಸಿಬ್ಬಂದಿಗೆ ಈ ಅಭಿಯಾನದ ಮೂಲಕ ಸೆಲ್ಯೂಟ್‌ ಹೇಳಲಾಗುತ್ತಿದೆ.

ಸಾಮಾಜಿಕ ಜಾಲತಾಣದಲ್ಲಿ “ಬ್ರಾವೋಡಾಕ್ಟರ್‌’ ಹ್ಯಾಶ್‌ಟ್ಯಾಗ್‌ ಬಳಸಿ ಶೇರ್‌ ಮಾಡುವ ಮೂಲಕ ವೈದ್ಯರಿಗೆ ಸೆಲ್ಯೂಟ್‌ ಹೇಳುವ ಇಂತಹ ಅಭಿಯಾನದಲ್ಲಿ ಇದೀಗ ಪವರ್‌ ಸ್ಟಾರ್‌ ಪುನೀತ್‌ ರಾಜಕುಮಾರ್‌ ಕೂಡ ಭಾಗಿಯಾಗಿದ್ದಾರೆ. ಈ ಬಗ್ಗೆ ಸೋಶಿಯಲ್‌ ಮೀಡಿಯಾದಲ್ಲಿ “ಬ್ರಾವೋಡಾಕ್ಟರ್‌’ ಎನ್ನುವ ಹ್ಯಾಶ್‌ ಟ್ಯಾಗ್‌ ಬಳಸಿ ಪೋಸ್ಟ್‌ ಶೇರ್‌ ಮಾಡಿರುವ ಪುನೀತ್‌ ರಾಜಕುಮಾರ್‌, ದಯವಿಟ್ಟು ಎಲ್ಲರೂ ಶೇರ್‌ ಮಾಡಿ, ಒಗ್ಗಟ್ಟನ್ನು ಪ್ರದರ್ಶಿಸಿ. ಕೊರೊನಾ ವಿರುದ್ಧ ಹೋರಾಡುತ್ತಿರುವ ನಮ್ಮ ವೈದ್ಯಕೀಯ ಸಿಬ್ಬಂದಿಗೆ ಎಲ್ಲರ ಬೆಂಬಲವಿರಲಿ.

ಅಪಾಯಕಾರಿ ವಾತಾವರಣದಲ್ಲೂ ಮುಂದೆ ನಿಂತು ಈ ಸಾಂಕ್ರಾಮಿಕ ರೋಗವನ್ನು ತಡೆಗಟ್ಟಲು ಹೋರಾಡುತ್ತಿರುವ ಎಲ್ಲ ವೈದ್ಯರಿಗೆ ನನ್ನ ಸೆಲ್ಯೂಟ್. ದಯವಿಟ್ಟು ಹ್ಯಾಶ್‌ ಟ್ಯಾಗ್‌ ಶೇರ್‌ ಮಾಡಿ ಎಂದು ಹೇಳಿದ್ದಾರೆ. ಇನ್ನು ಪುನೀತ್‌ ರಾಜಕುಮಾರ್‌ ಶೇರ್‌ ಮಾಡಿರುವ ಈ ಹ್ಯಾಶ್‌ ಟ್ಯಾಗ್‌ ಅನ್ನು ಪುನೀತ್‌ ಅಭಿಮಾನಿಗಳು ಮತ್ತು ಚಿತ್ರರಂಗದ ಸಾಕಷ್ಟು ಗಣ್ಯರು ಸೋಶಿಯಲ್‌ ಮೀಡಿಯಾಗಳಲ್ಲಿ ಶೇರ್‌ ಮಾಡುವ ಮೂಲಕ ಅಭಿಯಾನದಲ್ಲಿ ಬಾಗಿಯಾಗುತ್ತಿದ್ದಾರೆ. ನಟ ಧನಂಜಯ್‌ ಕೂಡ ಹ್ಯಾಶ್‌ ಟ್ಯಾಗ್‌ ಶೇರ್‌ ಮಾಡಿ ವೈದ್ಯಕೀಯ ಸಿಬ್ಬಂದಿಗೆ ಸೆಲ್ಯೂಟ್‌ ಹೇಳುತ್ತಿದ್ದಾರೆ.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next