Advertisement

ಮಾ.17ಕ್ಕೆ ಪವರ್‌ಸ್ಟಾರ್‌”ಜೇಮ್ಸ್‌”ರಿಲೀಸ್‌ ಪಕ್ಕಾ

11:56 AM Feb 19, 2022 | Team Udayavani |

ಪವರ್‌ಸ್ಟಾರ್‌ ಪುನೀತ್‌ ರಾಜಕುಮಾರ್‌ ಅಭಿನಯದ “ಜೇಮ್ಸ್‌” ಸಿನಿಮಾದ ಬಿಡುಗಡೆ ಯಾವಾಗ ಎಂದು ಎದುರು ನೋಡುತ್ತಿದ್ದ ಅಭಿಮಾನಿಗಳಿಗೆ ಕೊನೆಗೂ ಚಿತ್ರತಂಡದ ಕಡೆಯಿಂದ ಒಂದು ಗುಡ್‌ ನ್ಯೂಸ್‌ ಸಿಕ್ಕಿದೆ.

Advertisement

ಅದೇನೆಂದರೆ, “ಜೇಮ್ಸ್‌’ ಬಿಡುಗಡೆಯ ದಿನಾಂಕ ನಿಶ್ಚಯವಾಗಿರುವುದು. ಹೌದು, ಪುನೀತ್‌ ರಾಜಕುಮಾರ್‌ ಅವರ ಬಹುತೇಕ ಅಭಿಮಾನಿಗಳು ಮತ್ತು ಚಿತ್ರರಂಗದ ನಿರೀಕ್ಷೆಯಂತೆ, “ಜೇಮ್ಸ್‌’ ಚಿತ್ರವನ್ನು ಇದೇ ಮಾರ್ಚ್‌ 17ಕ್ಕೆ ತೆರೆಗೆ ತರಲು ಚಿತ್ರತಂಡ ನಿರ್ಧರಿಸಿದೆ.

“ಜೇಮ್ಸ್‌’ ಚಿತ್ರದ ಬಿಡುಗಡೆಯ ದಿನಾಂಕವನ್ನು ಅಧಿಕೃತವಾಗಿ ಘೋಷಿಸಿರುವ ಚಿತ್ರತಂಡ, ಪುನೀತ್‌ ರಾಜಕುಮಾರ್‌ ಜನ್ಮದಿನದ ಪ್ರಯುಕ್ತ ಮಾರ್ಚ್‌ 17ರಂದು ಚಿತ್ರವನ್ನು ತೆರೆಗೆ ತರುತ್ತಿರುವುದಾಗಿ ಹೇಳಿದೆ. “ಜೇಮ್ಸ್’ ಪ್ಯಾನ್‌ ಇಂಡಿಯಾ ಸಿನಿಮಾವಾಗಿದ್ದು, ಭಾರತದಾದ್ಯಂತ ಏಕಕಾಲಕ್ಕೆ 5 ಭಾಷೆಗಳಲ್ಲಿ ಸಿನಿಮಾ ತೆರೆಕಾಣಲಿದೆ.

ಕನ್ನಡದ ಜೊತೆಗೆ ಹಿಂದಿ, ಮಲಯಾಳಂ, ತಮಿಳು, ತೆಲುಗು ಭಾಷೆಗಳಲ್ಲೂ “ಜೇಮ್ಸ್‌’ ಬಿಡುಗಡೆಯಾಗಲಿದೆ’ ಎಂಬ ಮಾಹಿತಿ ನೀಡಿದೆ ಚಿತ್ರತಂಡ.  ಇತ್ತೀಚೆಗಷ್ಟೇ ಬಿಡುಗಡೆಯಾಗಿರುವ “ಜೇಮ್ಸ್‌’ ಪೋಸ್ಟರ್‌, ಹಾಡುಗಳಿಗೆ ಸೋಶಿಯಲ್‌ ಮೀಡಿಯಾಗಳಲ್ಲಿ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಫೇಸ್‌ಬುಕ್‌, ಟ್ವಿಟ್ಟರ್‌, ಇನ್ಸ್‌ಸ್ಟಾಗ್ರಾಮ್‌ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ “ಜೇಮ್ಸ್‌’ ಬಿಡುಗಡೆಯ ದಿನಾಂಕವನ್ನು ಆದಷ್ಟು ಬೇಗ ಘೋಷಿಸುವಂತೆ ಅಭಿಮಾನಿಗಳು ಚಿತ್ರತಂಡವನ್ನು ಒತ್ತಾಯಿಸುತ್ತಿದ್ದರು. ಕೊನೆಗೂ ಅಭಿಮಾನಿಗಳ ನಿರೀಕ್ಷೆ ಮತ್ತು ಬೇಡಿಕೆಯಂತೆ “ಜೇಮ್ಸ್‌’ ರಿಲೀಸ್‌ಗೆ ಮುಹೂರ್ತ ಫಿಕ್ಸ್‌ ಆಗಿದ್ದು, ಇನ್ನು ಸಿನಿಮಾವನ್ನು ಥಿಯೇಟರ್‌ನಲ್ಲಿ ಕಣ್ತುಂಬಿಕೊಳ್ಳುವುದಷ್ಟೇ ಬಾಕಿ.

Advertisement
Advertisement

Udayavani is now on Telegram. Click here to join our channel and stay updated with the latest news.

Next