Advertisement

ಹೊಸ ಗೆಟಪ್‌ಗೆ ಪುನೀತ್‌ ರೆಡಿ: ಜೇಮ್ಸ್‌ ಹಾಡಿನಲ್ಲಿ ನ್ಯೂಲುಕ್‌

12:37 PM Oct 19, 2021 | Team Udayavani |

ಪುನೀತ್‌ ರಾಜ್‌ಕುಮಾರ್‌ ನಟನೆಯ “ಜೇಮ್ಸ್‌’ ಚಿತ್ರದ ಬಹುತೇಕ ಚಿತ್ರೀಕರಣ ಮುಗಿದಿದೆ. ಈಗ ಚಿತ್ರತಂಡ ಬ್ರೇಕ್‌ ನೀಡಿದೆ. ಅದಕ್ಕೆ ಕಾರಣ ಹೊಸ ಗೆಟಪ್‌. ಹೌದು, “ಜೇಮ್ಸ್‌’ ಚಿತ್ರದ ಹಾಡೊಂದರಲ್ಲಿ ಪುನೀತ್‌ ರಾಜ್‌ ಕುಮಾರ್‌ ಹೊಸ ಗೆಟಪ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅದಕ್ಕಾಗಿ ಸದ್ಯ ಬ್ರೇಕ್‌ ನೀಡಲಾಗಿದೆ. ಹಾಗಾದರೆ ಯಾವ ಗೆಟಪ್‌ ಎಂದು ನೀವು ಕೇಳಬಹುದು. ಸಖತ್‌ ಸ್ಟೈಲಿಶ್‌ ಆಗಿ ಗಡ್ಡದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಹಾಗಾಗಿ ಚಿತ್ರತಂಡ ಕೂಡಾ ಚಿತ್ರೀಕರಣಕ್ಕೆ ಬ್ರೇಕ್‌ ನೀಡಿದೆ.

Advertisement

“ಜೇಮ್ಸ್‌’ನಲ್ಲಿ ಪುನೀತ್‌ ಇನ್ನೂ ಎರಡು ವಿಭಿನ್ನ ಗೆಟಪ್‌ನಲ್ಲಿ ಕಾಣಿಸಿ ಕೊಳ್ಳಲಿದ್ದಾರಂತೆ. ಬಹುತೇಕ ಮಾತಿನ ಭಾಗದ ಚಿತ್ರೀಕರಣ ಮುಗಿದಿದ್ದು, ಹಾಡುಗಳು ಬಾಕಿ ಇವೆ. ಮಂಗಳೂರು ಹಾಗೂ ವಿದೇಶಗಳಲ್ಲಿ ಹಾಡುಗಳನ್ನು ಚಿತ್ರೀಕರಿಸುವ ಪ್ಲ್ರಾನ್‌ ಚಿತ್ರತಂಡದ್ದು.

ಇದನ್ನೂ ಓದಿ:ಪ್ರೇಮಂ ಪೂಜ್ಯಂ ಲವ್ಲಿ ಟ್ರೇಲರ್‌ :  ಗಮನ ಸೆಳೆದ ಪ್ರೇಮ್‌ ಹೊಸ ಗೆಟಪ್‌

ಈ ಚಿತ್ರವನ್ನು ಚೇತನ್‌ ಕುಮಾರ್‌ ನಿರ್ದೇಶಿಸುತ್ತಿದ್ದಾರೆ. “ಇದೊಂದು ಪಕ್ಕಾ ಕಮರ್ಷಿಯಲ್‌ ಎಂಟರ್‌ಟೈನರ್‌ ಸಿನಿಮಾ. ಇಲ್ಲಿಯವರೆಗೆ ಪುನೀತ್‌ ಅವರು ಮಾಡಿದ ಚಿತ್ರಗಳಿಗಿಂತಲೂ ಭಿನ್ನವಾಗಿರುತ್ತೆ. ಪಾತ್ರ ಕೂಡ ಹೊಸ ರೀತಿಯಾಗಿದೆ. ಬಾಡಿಲಾಂಗ್ವೇಜ್‌ ಕೂಡ ಹೊಸತನದಿಂದ ಕೂಡಿದೆ. “ಜೇಮ್ಸ್‌’ ಎಂಬ ಶೀರ್ಷಿಕೆಗೆತಕ್ಕದ್ದಾದ ಪಾತ್ರವಿದೆ. ಇಲ್ಲಿನ ಮುಖ್ಯ ಆಕರ್ಷಣೆ ಅಂದರೆ, ಅದು ಹೈವೋಲ್ಟೇಜ್‌ ಆ್ಯಕ್ಷನ್‌. ಪುನೀತ್‌ ಸರ್‌ ಅವರ ವಿಶೇಷ ಸ್ಟಂಟ್ಸ್‌ ಇಲ್ಲಿರಲಿದೆ. ಅವರ ಫ್ಯಾನ್ಸ್‌ಗೆ ವಿಶೇಷತೆಗಳು ತುಂಬಿರಲಿವೆ. ಒಟ್ಟಾರೆ, “ಜೇಮ್ಸ್‌’ ಪಕ್ಕಾ ಮನರಂಜನಾತ್ಮಕವಾ ಗಿಯೇ ಮೂಡಿಬರಲಿದೆ’ ಎಂಬುದು ಚೇತನ್‌ಕುಮಾರ್‌ ಮಾತು.

ಚಿತ್ರಕ್ಕೆ ಚರಣ್‌ರಾಜ್‌ ಸಂಗೀತವಿದೆ. ಶ್ರೀಷ ಛಾಯಾಗ್ರಹಣವಿದೆ. ರವಿಸಂತೆ ಹೈಕ್ಲು ಕಲಾ ನಿರ್ದೇಶನವಿದೆ. ಕಿಶೋರ್‌ ಪತ್ತಿಕೊಂಡ ಅವರು ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಹರ್ಷ ಅವರ ನೃತ್ಯ ನಿರ್ದೇಶನವಿದೆ. ದೀಪು ಎಸ್‌.ಕುಮಾರ್‌ ಅವರ ಸಂಕಲನ ಚಿತ್ರಕ್ಕಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next