Advertisement

Puneeth Rajkumar ಹೃದಯ ಜ್ಯೋತಿ ವಿಸ್ತರಣೆ

12:07 AM Jul 09, 2024 | Team Udayavani |

ಬೆಂಗಳೂರು: ಆರೋಗ್ಯ ಇಲಾಖೆಯು ಪುನೀತ್‌ ರಾಜ್‌ಕುಮಾರ್‌ (Puneeth Rajkumar) ಹೃದಯ ಜ್ಯೋತಿ ಹೃದಯಾಘಾತ ನಿರ್ವಹಣ (ಸ್ಟೇಮಿ) ಯೋಜನೆಯನ್ನು ಮೂರನೇ ಹಂತದಲ್ಲಿ ರಾಜ್ಯದ 28 ಜಿಲ್ಲೆಗಳಲ್ಲಿನ 45 ತಾಲೂಕು ಆಸ್ಪತ್ರೆಗಳಿಗೆ ವಿಸ್ತರಿಸಲು ಮುಂದಾಗಿದೆ.

Advertisement

ಆರೋಗ್ಯ ಇಲಾಖೆಯು ಸ್ಟೇಮಿ ಯೋಜನೆಗೆ 2023ರ ಮಾರ್ಚ್‌ನಲ್ಲಿ ಚಾಲನೆ ನೀಡಿತ್ತು. ಮೊದಲ ಹಂತವಾಗಿ ರಾಜ್ಯದ 15 ಜಿಲ್ಲೆಗಳ 24 ತಾಲೂಕು, 10 ಜಿಲ್ಲಾಸ್ಪತ್ರೆ, 10 ಜನರಲ್‌ ಆಸ್ಪತ್ರೆಗಳು ಮತ್ತು 1 ಉಪಜಿಲ್ಲಾ ಆಸ್ಪತ್ರೆಗಳಲ್ಲಿ ನ್ಪೋಕ್‌ ಆಸ್ಪತ್ರೆಗಳು ಮತ್ತು ಜಯದೇವ ಹೃದಯ ರಕ್ತನಾಳ ವಿಜ್ಞಾನ ಮತ್ತು ಸಂಶೋಧನ ಆಸ್ಪತ್ರೆಗಳ ಬೆಂಗಳೂರು, ಮೈಸೂರು ಮತ್ತು ಕಲಬುರಗಿ ಶಾಖೆಯಲ್ಲಿ ಸ್ಟೇಮಿ ಕಾರ್ಯಕ್ರಮ ಈಗಾಗಲೇ ಕಾರ್ಯಾಚರಿಸುತ್ತಿದೆ.

ಎರಡನೇ ಹಂತದಲ್ಲಿ 16 ಜಿಲ್ಲೆಗಳಲ್ಲಿನ 7 ಕೇಂದ್ರಗಳಲ್ಲಿ ಎದೆ ನೋವು ಪ್ರಯೋಗಾಲಯ ಕೇಂದ್ರಗಳು ಮತ್ತು 41 ನ್ಪೋಕ್‌ ಆಸ್ಪತ್ರೆಗಳು ಕೆಲಸ ಮಾಡುತ್ತಿವೆ. ಮೂರನೇ ಹಂತದಲ್ಲಿ 2025ರ ಡಿಸೆಂಬರ್‌ ಅಂತ್ಯದೊಳಗೆ 45 ತಾಲೂಕು ಆಸ್ಪತ್ರೆಗಳಲ್ಲಿ ಹಾಗೂ 2025-26ನೇ ಸಾಲಿನಲ್ಲಿ ಉಳಿದೆಡೆ ವಿಸ್ತರಣೆಯಾಗಲಿದೆ.

ಇದುವರೆಗೆ ಗ್ರಾಮೀಣ ಆಸ್ಪತ್ರೆಗಳಲ್ಲಿ ಎದೆನೋವು ಕಾಣಿಸಿಕೊಂಡ ಒಟ್ಟು 1.94 ಲಕ್ಷ ಜನರನ್ನು ಹೃದಯ ರೋಗ ಸಂಬಂಧಿಸಿದ ಪರೀಕ್ಷೆಗೆ ಒಳಪಡಿಸಲಾಗಿದೆ. ಅವರಲ್ಲಿ 1.81 ಲಕ್ಷ ಜನರಿಗೆ ಇಸಿಜಿ ಮಾಡಿದ್ದು 11ಸಾವಿರ ಗಂಭೀರ ಪ್ರಕರಣ ಪತ್ತೆ ಮಾಡಿದೆ. ಅದರಲ್ಲಿ 3,218 ಹೃದಯಾಘಾತ ರೋಗಿಗಳಿಗೆ ಉನ್ನತ ಮಟ್ಟದ ಹಬ್‌ ಆಸ್ಪತ್ರೆಗಳಲ್ಲಿ ಚಿಕಿತ್ಸೆಗೆ ಶಿಫಾರಸು ಮಾಡಲಾಗಿದೆ. 3,218 ಹೃದಯಾಘಾತ ರೋಗಿಗಳಿಗೆ ಉನ್ನತ ಮಟ್ಟದ ಹಬ್‌ ಆಸ್ಪತ್ರೆಗಳಲ್ಲಿ ಚಿಕಿತ್ಸೆಗೆ ಶಿಫಾರಸು ಮಾಡಿದೆ.

ಎಲ್ಲೆಲ್ಲಿ ಸ್ಟೇಮಿ ಅನುಷ್ಠಾನ?
ಮೂರನೇ ಹಂತದಲ್ಲಿ ಜಮಖಂಡಿ, ಹೊಸಕೊಟೆ, ಕೆ.ಆರ್‌. ಪುರಂ, ಅನೇಕಲ್‌, ಯಲಹಂಕ, ಚಿಕ್ಕೋಡಿ, ಔರಾದ, ಕೊಳ್ಳೆಗಾಲ, ಗುಂಡ್ಲು ಪೇಟೆ, ಬಾಗೇಪಳ್ಳಿ, ಮೂಡಿಗೆರೆ, ಎನ್‌.ಆರ್‌. ಪುರ, ಮೊಳಕಾಲ್ಮೂರು, ಹೊಸದುರ್ಗ, ಸಂಡೂರು, ಪುತ್ತೂರು, ಹೊನ್ನಹಳ್ಳಿ, ಚನ್ನಗಿರಿ, ಕಲಘಟಗಿ, ಮುಂಡರಗಿ, ಅರಕಲಗೂಡು, ಅರಸೀಕೆರೆೆ, ರಾಣೆಬೆನ್ನೂರು, ಹಿರೇಕೇರೂರು, ಸೋಮವಾರಪೇಟೆ, ವೀರಾಜಪೇಟೆ, ಮುಳಬಾಗಿಲು, ಬಂಗಾರಪೇಟೆ, ಗಂಗಾವತಿ, ಕಾರಟಗಿ, ಮದ್ದೂರು, ಮಳವಳ್ಳಿ, ನಾಗಮಂಗಲ, ಸಿಂಧನೂರು, ಚನ್ನಪಟ್ಟಣ, ಭದ್ರಾವತಿ, ಶಿಕಾರಿಪುರ‌, ಚಿಕ್ಕನಾಯಕನಹಳ್ಳಿ, ಪಾವಗಡ, ಸಿದ್ದಾಪುರ, ಜೋಯಿಡಾ, ಬಸವನ ಬಾಗೇವಾಡಿ, ಮುದ್ದೇಬಿಹಾಳ, ಸುರಪುರ, ಹರಪನಹಳ್ಳಿಯ ಸರಕಾರಿ ಆಸ್ಪತ್ರೆಯಲ್ಲಿ ಈ ಯೋಜನೆ ಅನುಷ್ಠಾನವಾಗಲಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next