Advertisement

ಗಂಗಾವತಿ: ಅಪ್ಪು ಫೋಟೋ ಎದುರು ದಂಪತಿಗಳಾದ ಅಭಿಮಾನಿಗಳು

06:37 PM Feb 07, 2022 | Team Udayavani |

ಗಂಗಾವತಿ: ತಾಲ್ಲೂಕಿನ ಕಡೆಬಾಗಿಲು ಗ್ರಾಮದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿಮಾನಿ ಯುವಕ ಯುವತಿ ಅಪ್ಪು ಫೋಟೊ ಎದುರಿಗೆ ಸತಿಪತಿಗಳಾಗಿ ಇಂದು ವಿವಾಹವಾಗಿ ಅಭಿಮಾನ ಮೆರೆದಿದ್ದಾರೆ.

Advertisement

ಸೋಮವಾರ ಕಡೆಬಾಗಿಲು ಗ್ರಾಮದ ವಾಲ್ಮೀಕಿ ಬಂಧುಗಳ ಮದುವೆ ಸಮಾರಂಭದಲ್ಲಿ ಪುನೀತ್ ರಾಜ್ ಕುಮಾರ್ ಅವರ ಅಭಿಮಾನಿಗಳಾಗಿರುವ  ನಿಂಗರಾಜ್ ಮತ್ತು ಲಕ್ಷ್ಮಿ ಇವರು ಪುನೀತ್ ರಾಜ್ ಕುಮಾರ್ ರವರ ಭಾವಚಿತ್ರವನ್ನ ವೇದಿಕೆ ಮೇಲಿರಿಸಿ ಸತಿಪತಿಗಳಾದರು.

ಮದುವೆ ಮಂಟಪಕ್ಕೆ ಆಗಮಿಸುವ ಮುಖ್ಯ ದ್ವಾರದ ಬಳಿ ಆಳೆತ್ತರದ ಪುನೀತ್ ರಾಜ್ ಕುಮಾರ್ ಅವರ ಬ್ಯಾನರ್ ಹಾಕಿಸಿ ಶುಭ ಕೋರಿದ್ದು ವಿಶೇಷವಾಗಿತ್ತು.

ಪುನೀತ್ ರಾಜ್ ಕುಮಾರ್ ಗೆ ಆನೆಗೊಂದಿ ಕಿಷ್ಕಿಂದಾ ಪ್ರದೇಶ  ಅತ್ಯಂತ ಪ್ರೀತಿಯ ತಾಣವಾಗಿತ್ತು .ಉತ್ತರ ಕರ್ನಾಟಕದ ಯಾವುದೇ ಜಿಲ್ಲೆಯಲ್ಲಿ ಚಿತ್ರೀಕರಣ ಇದ್ದರೆ ಖಚಿತವಾಗಿ ಕಿಷ್ಕಿಂದಾ ಅಂಜನಾದ್ರಿ ಗೆ ಭೇಟಿ ನೀಡಿ ಶ್ರೀ ಆಂಜನೇಯನ ದರ್ಶನ ಪಡೆಯುತ್ತಿದ್ದರು .ಈ ಭಾಗದಲ್ಲಿ ಅನೇಕ ಚಾರಿಟಿಯ ಮೂಲಕ ನಿರಾಶ್ರಿತರಿಗೆ ಅಸಹಾಯಕರಿಗೆ ಪುನೀತ್ ನೆರವಾಗಿದ್ದರು.

Advertisement

ಸೇವಾಕಾರ್ಯದ ಮೂಲಕ ಅಪ್ಪು ಜನಮನದಲ್ಲಿದ್ದಾರೆ :

ನಿಸ್ಸಹಾಯಕರಿಗೆ ನೆರವು ನೀಡುವ ಮೂಲಕ ಚಿತ್ರನಟ ಚಿಕ್ಕವಯಸ್ಸಿನ ಅಪ್ಪು ಪುನೀತ್ ರಾಜ್ ಕುಮಾರ್ ಜನಮಾನಸದಲ್ಲಿ ಉಳಿದಿದ್ದಾರೆ ವೈಯಕ್ತಿಕ ಕಾರ್ಯಕ್ರಮಗಳು ಸೇರಿದಂತೆ ಸಾಮೂಹಿಕ ಕಾರ್ಯಕ್ರಮಗಳು ಧಾರ್ಮಿಕ ಕಾರ್ಯಕ್ರಮಗಳು ಕೂಡ ಪುನೀತ್ ಅವರ ಭಾವಚಿತ್ರವನ್ನು ಹಿಡಿದುಕೊಂಡು ಅವರ ಅಭಿಮಾನಿಗಳು ಅವರನ್ನು ಸ್ಮರಿಸುತ್ತಿದ್ದಾರೆ ಎಂದು ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಎಚ್ ಎಂ ಸಿದ್ದರಾಮಸ್ವಾಮಿ ಉದಯವಾಣಿ ಜತೆ ಮಾತನಾಡಿ ಅಭಿಪ್ರಾಯ ಹಂಚಿಕೊಂಡರು .

Advertisement

Udayavani is now on Telegram. Click here to join our channel and stay updated with the latest news.