Advertisement
ವಕೀಲ ವೃತ್ತಿಯಲ್ಲಿರುವ ಧರೆಯಪ್ಪ ಅರ್ದಾವೂರ ತಮ್ಮ ಸಂಸಾರ ಸಮೇತ ಕಳೆದ ಫೆ.25ರಿಂದ ವಿಜಯಪುರದಿಂದ ಬೆಂಗಳೂರಿಗೆ ಪಾದಯಾತ್ರೆ ಆರಂಭಿಸಿದ್ದಾರೆ. ಈಗಾಗಲೇ ಐದು ದಿನ ಕ್ರಮಿಸಿದ್ದು, ಬೇಸಿಗೆ ಬಿಸಿಲ ತಾಪಮಾನದ ಹಿನ್ನೆಲೆಯಲ್ಲಿ ಆದಷ್ಟು ಬೆಳಗ್ಗೆ, ಸಂಜೆ ಪಾದಯಾತ್ರೆ ನಡೆಯುತ್ತಿದ್ದಾರೆ ಪ್ರತಿ ದಿನ 25ಕಿ.ಮೀ ದಿಂದ 30 ಕಿ.ಮೀ. ನಿಗದಿಗೊಳಿಸಿದ್ದಾರೆ. ಬುಧವಾರ ಬೆಳಗ್ಗೆ ಕುಷ್ಟಗಿಯ ಚತುಷ್ಪಥ ರಾಷ್ಟ್ರೀಯ ಹೆದ್ದಾರಿ ಮಾರ್ಗವಾಗಿ ಹೋಗುವಾಗ ಅಪ್ಪು ಅಭಿಮಾನಿಗಳು ಪಾದಯಾತ್ರಿಗಳನ್ನು ಸನ್ಮಾನಿಸಿ, ಹಣ್ಣು, ಎಳೆನೀರು ನೀಡಿ ಸತ್ಕರಿಸಿದರು. ನಂತರ ಅವರೊಂದಿಗೆ ಸಂಗೊಳ್ಳಿ ರಾಯಣ್ಣ ಯುವ ಸೇನೆಯ ಮಂಜು ನಾಲಗಾರ, ದೊಡ್ಮನೆ ಅಭಿಮಾನಿ ಬಳಗದ ಅಧ್ಯಕ್ಷ ಮುತ್ತಣ್ಣ ಬಾಚಲಾಪೂರ, ಅಪ್ಪು ಅಭಿಮಾನಿ ಸಂಘದ ಶಂಕರ್ ಮಿಸ್ಕೀನ್, ಪ್ರಮೋದ್ ಬಡಿಗೇರ, ಅಮರೇಶ ತಳವಗೇರಾ ಮೊದಲಾದವರು ಹೆಜ್ಜೆ ಹಾಕಿ ಪ್ರೋತ್ಸಾಹಿಸಿದರು.
Related Articles
Advertisement
ಕಳೆದ ನವೆಂಬರ್ 11, 2011ಕ್ಕೆ ಧರೆಯಪ್ಪ ಅರ್ದಾವೂರ ಹಾಗೂ ವಿದ್ಯಾರಾಣಿ ಮದುವೆಯಾಗಿ ಬೆಂಗಳೂರಿನ ಅಪ್ಪು ನಿವಾಸಕ್ಕೆ ಹೋಗಿದ್ದರು. ಆಗ ಅಪ್ಪು ಆತ್ಮೀಯವಾಗಿ ಮಾತನಾಡಿ ಕಾಣಿಕೆಯ ಪ್ಯಾಕ್ ನೀಡಿ ಅದನ್ನು ಇಲ್ಲಿ ತೆರೆಯಬೇಡಿ ನಿಮ್ಮ ಊರಲ್ಲಿ ತೆರೆಯಿರಿ ಎಂದು ಹೇಳಿದ್ದರು. ಆಗ ಅಪ್ಪು ಹೇಳಿದಂತೆ ಮಾಡಿದ್ದ ಧರೆಯಪ್ಪ ದಂಪತಿ ಕಾಣಿಕೆ ಪ್ಯಾಕ್ ಬಿಚ್ಚಿದಾಗ ಅಪ್ಪು ಅವರ ಭಾವಚಿತ್ರ ಹಾಗೂ 11 ಸಾವಿರ ರೂ.ಗಳಿದ್ದವು. ಆಗ ನಮ್ಮಿಬ್ಬರ ಕಣ್ಣಾಲೆಗಳು ನೀರಾಗಿದ್ದವು.
ಇಂತಹ ಮಾನವೀಯ ಮೌಲ್ಯವುಳ್ಳ ನಟ ನಮ್ಮಿಂದ ಅಗಲಿರುವುದು ನಮ್ಮ ಮನೆಯ ಸದಸ್ಯರನ್ನು ಕಳೆದುಕೊಂಡಷ್ಟು ದುಃಖವಾಗಿದೆ ಧರಿಯಪ್ಪ ಅರ್ದಾವೂರ ಹೇಳಿದರು.