Advertisement

Jackie Movie: ಚಿತ್ರಮಂದಿರದಲ್ಲಿ ಮತ್ತೆ ಜಾಕಿ ಹವಾ

10:45 AM Feb 28, 2024 | Team Udayavani |

“ಜಾಕಿ’- ಕನ್ನಡ ಚಿತ್ರರಂಗದಲ್ಲಿ ದೊಡ್ಡ ಸಂಚಲನ ಸೃಷ್ಟಿಸಿದ ಸಿನಿಮಾ. ಅದರಲ್ಲೂ ಮಾಸ್‌ ಮನಸ್ಸುಗಳಿಗೆ ಸ್ವಲ್ಪ ಹೆಚ್ಚೇ ಖುಷಿಕೊಟ್ಟ ಸಿನಿಮಾ ಎಂದರೆ ತಪ್ಪಾಗಲ್ಲ. ಪವರ್‌ಸ್ಟಾರ್‌ ಪುನೀತ್‌ ರಾಜ್‌ಕುಮಾರ್‌ ನಾಯಕರಾಗಿರುವ ಈ ಚಿತ್ರವನ್ನು ಸೂರಿ ನಿರ್ದೇಶಿಸಿದ್ದಾರೆ. ಈ ಚಿತ್ರದ ಹಾಡುಗಳು, ಪುನೀತ್‌ ಡ್ಯಾನ್ಸ್‌ ಎಲ್ಲವೂ ಸೂಪರ್‌ ಹಿಟ್‌ ಆಗಿತ್ತು. ಈಗ ಯಾಕೆ ಈ ಮಾತು ಎಂದು ನೀವು ಕೇಳಬಹುದು. ಅದಕ್ಕೆ ಕಾರಣ ಮತ್ತದೇ “ಜಾಕಿ’.

Advertisement

ಹೌದು, “ಜಾಕಿ’ ಚಿತ್ರ ರೀ ರಿಲೀಸ್‌ ಆಗುತ್ತಿದೆ. ಮಾ.15ರಂದು ಚಿತ್ರವನ್ನು ಮರುಬಿಡುಗಡೆ ಮಾಡುವ ಮೂಲಕ ಅಪ್ಪು ಅಭಿಮಾನಿಗಳಿಗೆ ಖುಷಿ ನೀಡಲಿದೆ ಚಿತ್ರತಂಡ. ನಿಮಗೆ ಗೊತ್ತಿರುವಂತೆ ಮಾ.17 ಪುನೀತ್‌ ರಾಜ್‌ಕುಮಾರ್‌ ಅವರ ಹುಟ್ಟುಹಬ್ಬ. ಹುಟ್ಟುಹಬ್ಬಕ್ಕೆ ಎರಡು ದಿನ ಮೊದಲೇ ಈ ಚಿತ್ರವನ್ನು ರಿಲೀಸ್‌ ಮಾಡುವ ಮೂಲಕ ಅಪ್ಪು ಅಭಿಮಾನಿಗಳ ಸಂಭ್ರಮಕ್ಕೆ ಕಾರಣವಾಗುತ್ತಿದೆ ಚಿತ್ರತಂಡ.

ಇನ್ನು, ಈಗ ದೈಹಿಕವಾಗಿ ಪುನೀತ್‌ ನಮ್ಮ ಜೊತೆಗಿಲ್ಲ. ಹಾಗಂತ ಅಭಿಮಾನಿಗಳು ತಮ್ಮ ನೆಚ್ಚಿನ ನಟನ ಹುಟ್ಟುಹಬ್ಬವನ್ನು ಆಚರಿಸದೇ ದೂರ ಇರುವವರಲ್ಲ. ಈ ಬಾರಿಯೂ ಪುನೀತ್‌ ರಾಜ್‌ಕುಮಾರ್‌ ಅವರ ಹುಟ್ಟುಹಬ್ಬವನ್ನು ಅವರ ಅಭಿಮಾನಿಗಳು ಅದ್ಧೂರಿಯಾಗಿ ಆಚರಿಸಲು ನಿರ್ಧರಿಸಿದ್ದಾರೆ.

ಹುಟ್ಟುಹಬ್ಬ ದಿನ ಅನ್ನದಾನ, ರಕ್ತದಾನ, ನೇತ್ರದಾನ, ಅನಾಥ ಮಕ್ಕಳಿಗೆ ಸಹಾಯ ಸೇರಿದಂತೆ ಅನೇಕ ಸಾಮಾಜಿ ಕಾರ್ಯಗಳ ಮೂಲಕ ಹುಟ್ಟುಹಬ್ಬ ಆಚರಿಸಲು ಮುಂದಾಗಿದ್ದಾರೆ. ಈಗಾಗಲೇ ಪುನೀತ್‌ ಅಭಿಮಾನಿ ಸಂಘಗಳು ಈ ಕುರಿತು ಕಾರ್ಯಕ್ರಮಗಳನ್ನು ರೂಪಿಸುತ್ತಿವೆ.

 

Advertisement
Advertisement

Udayavani is now on Telegram. Click here to join our channel and stay updated with the latest news.

Next