Advertisement

ಇಂದು ಚಿತ್ರರಂಗದಿಂದ ‘ಪುನೀತ್‌ ನಮನ’: ಪಾಸ್‌ ಇದ್ದವರಿಗಷ್ಟೇ ಪ್ರವೇಶ

08:31 AM Nov 16, 2021 | Team Udayavani |

ನಟ ಪುನೀತ್‌ ರಾಜಕುಮಾರ್‌ ಸ್ಮರಣಾರ್ಥ ಇಂದು “ಪುನೀತ್‌ ನಮನ’ ಕಾರ್ಯಕ್ರಮ ನಡೆಯಲಿದೆ. ಕನ್ನಡ ಚಿತ್ರರಂಗದ ವತಿಯಿಂದಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ನೇತೃತ್ವದಲ್ಲಿ ಅರಮನೆ ಮೈದಾನದಲ್ಲಿ ನಡೆಯಲಿರುವ “ಪುನೀತ್‌ ನಮನ’ ಕಾರ್ಯಕ್ರಮದಲ್ಲಿ ಚಿತ್ರರಂಗ, ರಾಜಕೀಯ, ಕ್ರೀಡೆ, ಉದ್ಯಮ ಹೀಗೆ ವಿವಿಧಕ್ಷೇತ್ರಗಳ ಪ್ರಮುಖ ಗಣ್ಯರಿಗಷ್ಟೇ ಆಹ್ವಾನ ನೀಡಲಾಗಿದೆ.

Advertisement

ಕಾರ್ಯಕ್ರಮದಲ್ಲಿ ಕನ್ನಡ ಮಾತ್ರವಲ್ಲದೆ ತೆಲುಗು, ತಮಿಳು, ಮಲೆಯಾಳಂ ಮತ್ತು ಹಿಂದಿ ಚಿತ್ರರಂಗದ ಅನೇಕ ಗಣ್ಯರು ಹಾಜರಾಗುವ ನಿರೀಕ್ಷೆ ಇದೆ. ಮಧ್ಯಾಹ್ನ ಮೂರು ಗಂಟೆಯಿಂದ ಸಂಜೆ ಆರು ಗಂಟೆಯವರೆಗೆ ನಡೆಯಲಿದೆ. ಡಾ. ವಿ ನಾಗೇಂದ್ರ ಪ್ರಸಾದ್‌ ಹಾಗೂ ಗುರುಕಿರಣ್‌ ತಂಡದಿಂದ ಗೀತ ನಮನ ಸಲ್ಲಿಸುವುದರ ಮೂಲಕಕಾರ್ಯಕ್ರಮ ಆರಂಭ ಆಗಲಿದೆ.

ಆಹ್ವಾನಿತರಿಗಷ್ಟೇ ಕಾರ್ಯಕ್ರಮಕ್ಕೆ ಪ್ರವೇಶ: “ಪುನೀತ್‌ ನಮನ’ಕಾರ್ಯಕ್ರಮದಲ್ಲಿ ಆಹ್ವಾನಿತರಿಗಷ್ಟೇ ಪ್ರವೇಶವಿರಲಿದೆ ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ತಿಳಿಸಿದೆ. “ಪುನೀತ್‌ ನಮನ’ ಕಾರ್ಯಕ್ರಮಕ್ಕೆ ಈಗಾಗಲೇ ಆಹ್ವಾನಿತರಿಗೆ ಪಾಸ್‌ ನೀಡಲಾಗಿದ್ದು, ಪಾಸ್‌ ಇದ್ದವರಿಗೆ ಮಾತ್ರ ಅರಮನೆ ಮೈದಾನದಲ್ಲಿ ನಡೆಯಲಿರುವಕಾರ್ಯಕ್ರಮಕ್ಕೆ ಪ್ರವೇಶ ನೀಡಲಾಗುತ್ತೆ. ಸುಮಾರು 1500 ನಿಗದಿತ ಸಂಖ್ಯೆಯಲ್ಲಿ ಗಣ್ಯರಿಗೆ ಆಸನ,ಊಟ- ಉಪಚಾರ, ವೇದಿಕೆ ವ್ಯವಸ್ಥೆ ಕಲ್ಪಿಸಲಾಗಿದೆ. ಹೀಗಾಗಿ ಅಭಿಮಾನಿಗಳು ಅಥವಾ ಸಾರ್ವಜನಿಕರಿಗೆ ಕಾರ್ಯಕ್ರಮದಲ್ಲಿ ನೇರವಾಗಿ ಭಾಗವಹಿಸಲು ಅವಕಾಶವಿಲ್ಲ. ಎಂದು ವಾಣಿಜ್ಯ ಮಂಡಳಿ ಮೂಲಗಳು ಸ್ಪಷ್ಟಪಡಿಸಿವೆ.

ಕಾರ್ಯಕ್ರಮದ ಪಾಸ್‌ಗೆ ಹೆಚ್ಚಿದ ಬೇಡಿಕೆ: “ಪುನೀತ್‌ ನಮನ’ ಕಾರ್ಯಕ್ರಮದಲ್ಲಿ ಗರಿಷ್ಟ 2 ಸಾವಿರ ಮಂದಿಗಷ್ಟೇ ಭಾಗವಹಿಸಲು ಅವಕಾಶ ಕಲ್ಪಿಸಲಾಗಿದೆ. ಈಗಾಗಲೇ 1500 ಪಾಸ್‌ಗಳನ್ನು ಮಾತ್ರ ವಿತರಿಸಲಾಗಿದೆ. ಆದರೆ,ಕಾರ್ಯಕ್ರಮಕ್ಕೆ ಚಿತ್ರರಂಗದಿಂದಲೇ ಬರೋಬ್ಬರಿ 26 ಸಾವಿರಕ್ಕೂ ಅಧಿಕ ಪಾಸ್‌ಗೆ ಬೇಡಿಕೆ ಬಂದಿದೆ. ಚಿತ್ರರಂಗದಕಲಾವಿದರು, ನಿರ್ಮಾಪಕರು, ತಂತ್ರಜ್ಞರು, ಕಾರ್ಮಿಕರಿಂದ ಹಾಗೂ ವಾಣಿಜ್ಯ ಮಂಡಳಿಯ ಸದಸ್ಯರಿಂದ ಕಾರ್ಯಕ್ರಮದ ಪಾಸ್‌ಗೆ ಭಾರೀ ಬೇಡಿಕೆಯಿದ್ದು, ಈಗಿರುವ ಬೇಡಿಕೆಯಂತೆ ಪಾಸ್‌ಗಳನ್ನು ಪೂರೈಸಲು 26 ಸಾವಿರಕ್ಕೂ ಅಧಿಕ ಪಾಸ್‌ಗಳು ಬೇಕಾಗುತ್ತವೆ ಎನ್ನುವುದು ವಾಣಿಜ್ಯ ಮಂಡಳಿ ಮೂಲಗಳ ಮಾಹಿತಿ. ಸದ್ಯದ ಪರಿಸ್ಥಿತಿಯಲ್ಲಿ ಗರಿಷ್ಟ2 ಸಾವಿರ ಮಂದಿಗಷ್ಟೇ ಕಾರ್ಯಕ್ರಮದಲ್ಲಿ ಭಾಗವಹಿಸಲು ಸರ್ಕಾರದ ಕಡೆಯಿಂದಲೂ ಅನುಮತಿ ಇರುವುದರಿಂದ, ಈ ಸಂಖ್ಯೆಯನ್ನು ಮೀರುವಂತಿಲ್ಲ. ಎಂದು ವಾಣಿಜ್ಯ ಮಂಡಳಿ ಸ್ಪಷ್ಟಪಡಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next