Advertisement

ಪುನೀತ್‌ ಈಗ ಯುವರತ್ನ

11:12 AM Nov 03, 2018 | Team Udayavani |

“ರಾಜಕುಮಾರ’ ಚಿತ್ರದ ಬಳಿಕ ಪುನೀತ್‌ ರಾಜಕುಮಾರ್‌ ಮತ್ತು ನಿರ್ದೇಶಕ ಸಂತೋಷ್‌ ಆನಂದರಾಮ್‌ ಜೋಡಿ ಮತ್ತೂಂದು ಚಿತ್ರ ಮಾಡಲಿದ್ದಾರೆ ಎಂದು ಐದಾರು ತಿಂಗಳ ಹಿಂದೆಯೇ ಘೋಷಣೆಯಾಗಿತ್ತು. ಅದಾಗಲೇ, ಒಂದು  ಹಿಟ್‌ ಚಿತ್ರ ಕೊಟ್ಟ ಈ ಜೋಡಿಯ ಎರಡನೇ ಚಿತ್ರ ಏನಿರಬಹುದು, ಅದರ ಶೀರ್ಷಿಕೆ ಏನು ಎಂಬ ಪ್ರಶ್ನೆಗಳು ಕಳೆದ ಕೆಲ ತಿಂಗಳಿನಿಂದ ಗಾಂಧಿನಗರದಲ್ಲಿ ಹರಿದಾಡುತ್ತಿದ್ದು, ಅದೆಲ್ಲದಕ್ಕೂ ಈಗ ಉತ್ತರ ಸಿಕ್ಕಿದೆ.

Advertisement

ಅಂದಹಾಗೆ, ಪುನೀತ್‌-ಸಂತೋಷ್‌ ಆನಂದರಾಮ್‌ ಜೋಡಿಯ ಹೊಸ ಚಿತ್ರಕ್ಕೆ “ಯುವರತ್ನ’ ಎಂಬ ಶೀರ್ಷಿಕೆ ಇಡಲಾಗಿದೆ. ಈ ಚಿತ್ರಕ್ಕೆ “ಪರಶುರಾಮ’, “ಜ್ವಾಲಾಮುಖೀ’ ಸೇರಿದಂತೆ ಇನ್ನು ಎರಡು-ಮೂರು ಹೆಸರುಗಳು ಇಡಲಿದ್ದಾರೆ ಎಂಬ ಸುದ್ದಿಗಳು ಹರಿದಾಡುತ್ತಿದ್ದರೂ, ಅದೆಲ್ಲವನ್ನು ಬದಿಗಿಟ್ಟು ಚಿತ್ರತಂಡ “ಯುವರತ್ನ’ ಎಂಬ ಶೀರ್ಷಿಕೆಯನ್ನೆ ಅಂತಿಮಗೊಳಿಸಿದೆ. “ರಾಜ ಕುಮಾರ’ ಚಿತ್ರವನ್ನು ನಿರ್ಮಿಸಿದ್ದ “ಹೊಂಬಾಳೆ ಫಿಲಂಸ್‌’ ಬ್ಯಾನರ್‌ನಲ್ಲಿ ಈ ಚಿತ್ರ ನಿರ್ಮಾಣವಾಗಲಿದ್ದು, ಚಿತ್ರದ ಉಳಿದ ಕಲಾವಿದರು, ತಂತ್ರಜ್ಞರ ಬಗ್ಗೆ ಇನ್ನಷ್ಟೇ ಮಾಹಿತಿಗಳು ಹೊರಬರಬೇಕಿದೆ. 

Advertisement

Udayavani is now on Telegram. Click here to join our channel and stay updated with the latest news.

Next