Advertisement

ಅಪ್ಪು ಅಭಿಮಾನಿಯ ಸಮಾಜ ಸೇವೆ : ಬಡವರಿಗೆ ಅನ್ನದಾನೇಶ್ವರನಾದ ಸತೀಶ್ ಉರಾಳ್

04:08 PM May 03, 2021 | Team Udayavani |

ಕೋವಿಡ್ ಸೋಂಕು ಜನರಲ್ಲಿ ಭೀತಿಯನ್ನು ಮಾಡಿತು. ಸೋಂಕು ಹರಡುದನ್ನು ತಪ್ಪಿಸಲು ಸರ್ಕಾರ ಲಾಕ್‌ಡೌನ್ ಘೋಷಣೆ ಮಾಡಿದ್ದರಿಂದ ಬಡವರು ಸಂಕಷ್ಟಕ್ಕೆ ಸಿಲುಕಿ ಅಗತ್ಯ ವಸ್ತುಗಳ ಖರೀದಿಗೆ ಪರದಾಡುವಂತಾಯಿತು. ಇಂತಹ ಸಂದರ್ಭದಲ್ಲಿ ಸಮಾಜ ಸೇವೆಯ ಗುರಿಯನ್ನು ಇಟ್ಟುಕೊಂಡಿರುವವರು ಸಹಾಯಕ್ಕೆ ಮುಂದೆ ಬಂದವರು ಸತೀಶ್ ಉರಾಳ್‌ರವರು. ಈ ನಿಟ್ಟಿನಲ್ಲಿ ಮಾದರಿಯಾಗಿ ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಂಡು ಬಸವನಗುಡಿ ಅಪ್ಪು ಬಳಗದ ಕೆ. ಸತೀಶ ಉರಾಳ್‌ರವರು ಬಸವನಗುಡಿ ವ್ಯಾಪ್ತಿಯಲ್ಲಿನ ಬಡವರಿಗೆ ಆಶ್ರಯಧಾತರಾಗಿ ಕಂಡು ಬಂದಿದ್ದಾರೆ.

Advertisement

ಈ ಬಾರಿ ಸಾವಿರ ಮನೆಗಳಿಗೆ ಸಹಾಯ ಹಸ್ತ ನಿಡುವ ಗುರಿಯನ್ನು ಇಟ್ಟುಕೊಂಡು ಆ ನಿಟ್ಟಿನಲ್ಲಿ ಕಾರ್ಯಪ್ರವರ್ತರಾಗಿದ್ದಾರೆ. ಬಸವನಗುಡಿ ವಾರ್ಡ ವ್ಯಾಪ್ತಿಯ ಒಂದು ಸಾವಿರ ಮನೆಗಳಿಗೆ ಔಷದಿ ಕಿಟ್‌ಗಳನ್ನು ಈಬಾರಿ ನೀಡಲಿದ್ದಾರೆ. ಅತ್ಯಂತ ಉಪಯುಕ್ತವಾದ ಸ್ಟೀಮ್ ಮತ್ತು ಅಗತ್ಯವಿರುವ ಔಷದಿಗಳನ್ನೊಳಗೊಂಡ ಕಿಟ್ ಅನ್ನು ಸಿದ್ದ ಪಡಿಸಿದ್ದಾರೆ. ಅದನ್ನು ವಿತರಿಸುವ ಕಾರ್ಯದಲ್ಲಿ ಮಗ್ನರಾಗಿದ್ದಾರೆ. ಅಲ್ಲದೆ ಅಗತ್ಯವಿರುವವರಿಗೆ ಊಟದ ವ್ಯವಸ್ಥೆಯನ್ನು ಮಾಡುತ್ತಿದ್ದಾರೆ. ಚಲನಚಿತ್ರನಟ ಪುನೀತ್‌ರಾಜ್ ಕುಮಾರ್ ಅಭಿಮಾನಿಯಾಗಿರುವ ಇವರು ಬಸವನಗುಡಿ ಅಪ್ಪು ಬಳಗದ ಮುಖ್ಯಸ್ಥರಾಗಿದ್ದಾರೆ.]

ಕಳೆದ ವರ್ಷ ಲಾಕ್‌ಡೌನ್ ಸಂದರ್ಭದಲ್ಲಿ ಸತೀಶ ಉರಾಳ್ ಅವರು ಬಸವನಗುಡಿ ವಾರ್ಡನ ನೆಟ್‌ಕಲ್ಲಪ್ಪ ವೃತ್ತ, ನಾಗಸಂದ್ರ, ತ್ಯಾಗರಾಜನಗರ, ಭೋವಿ ಕಾಲೋನಿ, ಮುನೇಶ್ವರ ದೇವಸ್ಥಾನ, ಅಶೋಕನಗರ, ಎನ್ ಆರ್ ಕಾಲೋನಿ ಸೇರಿದಂತೆ ಇನ್ನಿತರ ಪ್ರದೇಶಗಳಲ್ಲಿ ಬಡವರಿಗೆ ಆಹಾರ ಹಾಗೂ ದಿನಸಿ ಕಿಟ್‌ಗಳನ್ನು ಒದಗಿಸಿಕೊಟ್ಟು ಅವರ ಸಂಕಷ್ಟಕ್ಕೆ ಸ್ಪಂದಿಸುವ ಕಾರ್ಯ ಮಾಡಿದ್ದಾರೆ. ಕೊರೋನಾ ಸೋಂಕು ಹರಡದಂತೆ ಲಾಕ್‌ಡೌನ್ ಮಾಡಿದ ಕೂಡಲೇ ಬಡವರ ಸಂಕಷ್ಟಕ್ಕೆ ಅವರು ತಮ್ಮದೇ ಆದ ತಂಡವನ್ನು ರಚಿಸಿಕೊಂಡು ಅದರ ಮೂಲಕ ಬಡವರ ನೆರವಿಗೆ ನಿಂತರು.

Advertisement

1ನೇ ಲಾಕ್‌ಡೌನ್‌ನ ಸಂದರ್ಭದಲ್ಲಿ ಪ್ರತಿದಿನ ಬೆಳ್ಳಿಗ್ಗೆ 5 ವರ್ಷದ ಮಕ್ಕಳಿಗಾಗಿ ಹಾಲು ನೀಡುವ ಯೋಜನೆ ಕೈಗೊಂಡರು. ಪ್ರತಿನಿತ್ಯ ೩೦೦-೩೫೦ ಮಕ್ಕಳಿಗೆ ಹಾಲು, ಹಣ್ಣು ಬಿಸ್ಕತ್ ವಿತರಣೆ ಮಾಡಿದರು. ನಂತರ ಸರ್ಕಾರವೇ ಉಚಿತ ಹಾಲು ಮುಂದಾಗಿದ್ದರಿಂದ ಹಾಲು ವಿತರಣೆಯನ್ನು ಸ್ಥಗಿತ ಮಾಡಿ ಬಡವರಿಗೆ ಊಟ ಹಾಗೂ ದಿನಸಿ ಕಿಟ್‌ಗಳನ್ನು ವಿತರಿಸುವ ಕಾರ್ಯ ಮಾಡಿದರು.

ಕಳೆದ ವರ್ಷ ಮೂರನೇ ಹಂತದ ಲಾಕ್‌ಡೌನ್‌ವರೆಗೂ ಪ್ರತಿದಿನ ರಾತ್ರಿ ಎನ್ ಆರ್ ಕಾಲೋನಿ ಬಸ್ ನಿಲ್ದಾಣದ ಬಳಿ ಬಡವರು ಸೇರಿದಂತೆ ಎಲ್ಲ ವರ್ಗದವರಿಗೆ ಉಚಿತವಾಗಿ ಊಟ, ಮಿನರಲ್ ವಾಟರ್, ಹಣ್ಣು ವಿತರಣೆ ಮಾಡಿದ್ದಾರೆ. ಪ್ರತಿದಿನ 650 ರಿಂದ 700 ಮಂದಿಯ ಹಸಿವನ್ನು ಕಾರ್ಯ ಮಾಡಲಾಗಿದ್ದು ಇದಕ್ಕೆ ಬಸವನಗುಡಿ ವಾರ್ಡನ ಜನತೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಆರಂಭದಿಂದಲೂ ಅರ್ಹ ಬಡವರಿಗೆ ದಿನಸಿ ಕಿಟ್ಗಳನ್ನು ವಿತರಣೆ ಮಾಡಿದ್ದಾರೆ. ಯಾರಿಗೆ ಕಷ್ಟ ಇದೆಯೋ ಅಂತಹವರನ್ನು ಹುಡುಕಿ ಅವರಿಗೆ ದಿನಸಿ ಕಿಟ್ ಅನ್ನು ತಲುಪಿಸಿದ್ದಾರೆ. ಇದುವರೆಗೆ 2 ಸಾವಿರಕ್ಕೂ ಹೆಚ್ಚು ದಿನಸಿ ಕಿಟ್‌ಗಳನ್ನು ವಿತರಣೆ ಮಾಡಿದ್ದು ಒಟ್ಟು ಒಂದು ಲಕ್ಷಕ್ಕೂ ಮಿಕ್ಕಿ ಜನರಿಗೆ ಆಹಾರ ಸೌಲಬ್ಯವನ್ನು ಒದಗಿಸಿದ್ದಾರೆ.

ಇಂತಹ ಕಾರ್ಯ ಮಾಡುತ್ತಿರುವುದರ ಹಿಂದೆ ಯಾವುದೇ ಉದ್ದೇಶವಿಲ್ಲ. ಸಂಕಷ್ಟದಲ್ಲಿರುವವರಿಗೆ ನೆರವಾಗಬೇಕು ಎಂಬುದೇ ನಮ್ಮ ಉದ್ದೇಶವಾಗಿದೆ. ಕೋವಿಡ್ ಸಂಕಷ್ಟ ಕಾಲದಲ್ಲಿ ತಾವು ಬಡವರಿಗೆ ನೆರವು ನೀಡಲು ಮುಂದಾಗಿಲ್ಲ. ಕಳೆದ 21 ವರ್ಷಗಳಿಂದಲೂ ಇಂತಹ ಕಾಯಕ ಮಾಡುತ್ತಿದ್ದೇನೆ. ಸಂಕಷ್ಟದಲ್ಲಿರುವವರಿಗೆ ನೆರವು ನೀಡುವ ಮೂಲಕ ಬಡವರ ಜೊತೆ ಸಮಾಜ ಇದೆ. ಎಂಬುದನ್ನು ತಿಳಿಸುವ ಕಾರ್ಯ ಮಾಡಿದ್ದೇನೆ. ಅಷ್ಟೇ ಎನ್ನುತ್ತಾರೆ ಸತೀಶ ಉರಾಳ.

ಮೂಲತ: ಕುಂದಾಪುರದವರಾದ ಉರಾಳ್ ಅವರ ಪೋಷಕರು ಬೆಂಗಳೂರಿಗೆ ಬಂದು ೫೦ವರ್ಷಗಳ ಮೇಲಾಗಿವೆ. ಇಲ್ಲಿ ಹೋಟೆಲ್ ಉದ್ಯಮ ನಡೆಸಿಕೊಂಡು ಅದರಲ್ಲಿ ಬರುವ ಲಾಭಾಂಶದಲ್ಲಿ ಬಡವರಿಗೆ ಸಹಾಯ ಮಾಡುತ್ತಲೇ ಬಂದಿದ್ದೇವೆ ಎಂದು ಉರಾಳ ತಿಳಿಸುತ್ತಾರೆ. ಒಟ್ಟಿನಲ್ಲಿ ಸತೀಶ ಉರಾಳ್ ಅವರು, ಸಮಾಜಸೇವೆ ಮಾಡಬೇಕೆಂಬ ಉದ್ದೇಶದಿಂದಲೇ ಎರಡು ದಶಕದಿಂದ ಒಂದಲ್ಲ ಒಂದು ರೀತಿಯಲ್ಲಿ ಬಡವರಿಗೆ, ಅಸಾಯಕರಿಗೆ ನೆರವಾಗಿ ನಿಮ್ಮ ಸಂಕಷ್ಟದಲ್ಲಿ ಭಾಗಿಯಾಗುವೆ ಎಂದು ಹೇಳುತ್ತಿದ್ದಾರೆ. ಬಸವನಗುಡಿ ವಾರ್ಡಿನ ಯಾರಿಗಾದರೂ ಸಹಾಯ ಬೇಕಾದಲ್ಲಿ 9008394666 ದೂರವಾಣಿಗೆ ಕರೆ ಮಾಡಿದಲ್ಲಿ ಅವರ ಮನೆಗೆ ಔಷದಿಕಿಟ್‌ನ್ನು ತಲುಪಿಸಲಾಗುವುದು ಎನ್ನುತ್ತಾರೆ ಉರಾಳ್.

ಇದುವರೆಗೆ ಈ ತಂಡ ಹೋಟೆಲ್ ಕಾರ್ಮಿಕರು, ಆಟೋಚಾಲಕರು, ಟ್ಯಾಕ್ಸಿ, ಕ್ಯಾಬ್ ಚಾಲಕರು, ಇಸ್ತ್ರಿ ಮಾಡುವವರು, ಮಡಿವಾಳ ಸಮಾಜ, ಸವಿತಾ ಸಮಾಜ, ದಿನಪತ್ರಿಕೆ ವಿತರಕರು, ಕೊಳಗೇರಿ ನಿವಾಸಿಗಳಿಗೆ ಪ್ರತಿದಿನ ಊಟ ಹಾಗೂ ದಿನಸಿ ಕಿಟ್‌ಗಳನ್ನು ವಿತರಣೆ ಮಾಡಿದೆ.

Advertisement

Udayavani is now on Telegram. Click here to join our channel and stay updated with the latest news.

Next