Advertisement

ಪುನೀತ್‌ ಬರ್ತ್‌ಡೇಗೆ “ಯುವರತ್ನ, ಜೇಮ್ಸ್‌’ಪೋಸ್ಟರ್‌

05:41 AM Mar 17, 2019 | Team Udayavani |

ಇಂದು ಪುನೀತ್‌ ರಾಜಕುಮಾರ್‌ ಅಭಿಮಾನಿಗಳಿಗೆ ಹಬ್ಬ. ಅದ್ಯಾವ ಹಬ್ಬ ಎಂದು ಪ್ರತ್ಯೇಕವಾಗಿ ಹೇಳುವ ಅಗತ್ಯವಿಲ್ಲ. ಹೌದು, ಇಂದು ಪುನೀತ್‌ರಾಜಕುಮಾರ್‌ ಅವರ ಹುಟ್ಟುಹಬ್ಬ. ದೂರದ ಊರುಗಳಿಂದ ಅಭಿಮಾನಿಗಳು ಬಂದು ತಮ್ಮ ನೆಚ್ಚಿನ ನಟನ ಹುಟ್ಟುಹಬ್ಬಕ್ಕೆ ಶುಭಕೋರುತ್ತಾರೆ. ಇನ್ನು, ಹುಟ್ಟುಹಬ್ಬಕ್ಕೆ ಪುನೀತ್‌ ಅವರ ಚಿತ್ರತಂಡಗಳು ಕೂಡಾ ತಮ್ಮದೇ ಆದ ಕೊಡುಗೆ ನೀಡುತ್ತಿವೆ.

Advertisement

ಈಗಾಗಲೇ ಬಿಡುಗಡೆಯಾಗಿರುವ “ನಟಸಾರ್ವಭೌಮ’ ತಂಡದಿಂದ ನಿರ್ದೇಶಕ ಪವನ್‌ ಒಡೆಯರ್‌ ಸ್ಪೆಷಲ್‌ ಸಾಂಗ್‌ವೊಂದನ್ನು ಬಿಡುಗಡೆ ಮಾಡುತ್ತಿರುವ ವಿಚಾರ ನಿಮಗೆ ಗೊತ್ತೇ ಇದೆ. ಈಗ ಮತ್ತೆರಡು ಚಿತ್ರತಂಡಗಳು ಕೂಡಾ ಚಿತ್ರದ ಪೋಸ್ಟರ್‌ ಬಿಡುಗಡೆ ಮಾಡಲು ಮುಂದಾಗಿವೆ. ಅದು “ಯುವರತ್ನ’ ಹಾಗೂ “ಜೇಮ್ಸ್‌’. ಈಗಾಗಲೇ ಪುನೀತ್‌ರಾಜಕುಮಾರ್‌ “ಯುವರತ್ನ’ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ. ಸಂತೋಷ್‌ ಆನಂದರಾಮ್‌ ಈ ಚಿತ್ರದ ನಿರ್ದೇಶಕರು.
 

ಪುನೀತ್‌ ಹುಟ್ಟುಹಬ್ಬಕ್ಕೆ ಚಿತ್ರತಂಡ ಫ‌ಸ್ಟ್‌ಲುಕ್‌ ಪೋಸ್ಟರ್‌ ಬಿಡುಗಡೆ ಮಾಡುತ್ತಿದೆ. ಈ ಬಗ್ಗೆ ಮಾತನಾಡುವ ಸಂತೋಷ್‌ ಆನಂದರಾಮ್‌, “ನಾವು ಟೀಸರ್‌ ಬಿಡಬೇಕೆಂದುಕೊಂಡಿದ್ದೆವು. ಆದರೆ, ಅದು ಸಾಧ್ಯವಾಗಲಿಲ್ಲ. ಪೋಸ್ಟರ್‌ ಬಿಡುತ್ತಿದ್ದೇವೆ’ ಎನ್ನುತ್ತಾರೆ. ಇನ್ನು ಪುನೀತ್‌ ಅವರಿಗೆ ಚೇತನ್‌ ಕುಮಾರ್‌ ನಿರ್ದೇಶಿಸಲಿರುವ “ಜೇಮ್ಸ್‌’ ಚಿತ್ರದ ಮೋಶನ್‌ ಪೋಸ್ಟರ್‌ ಕೂಡಾ ಇಂದು ಬಿಡುಗಡೆಯಾಗುತ್ತಿದೆ. ಹೀಗೆ ಚಿತ್ರತಂಡಗಳು ಕೂಡಾ ಪುನೀತ್‌ ಹಾಗೂ ಅವರ ಅಭಿಮಾನಿಗಳಿಗೆ ಖುಷಿ ನೀಡುತ್ತಿದೆ. 

Advertisement

Udayavani is now on Telegram. Click here to join our channel and stay updated with the latest news.

Next