Advertisement

ಗೋಕಾಕ್‌ ಚಳವಳಿ ವೇಳೆ ಚಿಕಬಳ್ಳಾಪುರಕ್ಕೆ ಬಂದಿದ್ದ ಪುನೀತ್‌

12:37 PM Oct 30, 2021 | Team Udayavani |

ಚಿಕ್ಕಬಳ್ಳಾಪುರ: ತಮ್ಮ ವಿಭಿನ್ನ ನಟನೆ ಮೂಲಕ ನಾಡಿನ ಕೋಟ್ಯಂತರ ಅಭಿಮಾನಿಗಳ ಮನ ಗೆದ್ದಿದ್ದ ಪವರ್‌ಸ್ಟಾರ್‌ ಪುನೀತ್‌ ರಾಜ್‌ಕುಮಾರ್‌ ನಿಧನದ ಸುದ್ದಿ ಕೇಳುತ್ತಿದ್ದಂತೆಯೇ ಚಿಕ್ಕಬಳ್ಳಾಪುರ ನಗರ ಸೇರಿ ಜಿಲ್ಲಾದ್ಯಂತ ಅಭಿಮಾನಿಗಳು ದಿಗ್ಭ್ರಮೆ ವ್ಯಕ್ತಪಡಿಸಿ ದ್ದಲ್ಲ ದೆ, ಶೋಕಾಚರಣೆ ನಡೆಸಿ ಶ್ರದ್ಧಾಂಜಲಿ ಅರ್ಪಿಸಿದರು.

Advertisement

ಕೊರೊನಾ ಸಂಕಷ್ಟದಲ್ಲಿ ಸಿಲುಕಿದ ಜನರಿಗೆ ಕೈಲಾದಷ್ಟು ಸಹಾಯ ಮಾಡುವ ಮೂಲಕ ನಾಡಿನಾದ್ಯಂತ ಮತ್ತಷ್ಟು ಅಭಿಮಾನಿಗಳ ಮನವನ್ನು ಗೆದ್ದಿದ್ದ ಪವರ್‌ಸ್ಟಾರ್‌ ಪುನೀತ್‌ ರಾಜ್‌ಕುಮಾರ್‌ ಅವರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂಬ ಸುದ್ದಿ ಕೇಳುತ್ತಿದ್ದಂತೆಯೇ ಅವರ ಅಭಿಮಾನಿಗಳು ಕನ್ನಡಪರ ಸಂಘಟನೆಗಳ ಪದಾಧಿಕಾರಿಗಳು, ಕನ್ನಡ ಪ್ರೇಮಿಗಳು ದಿಗ್ಭ್ರಮೆ ವ್ಯಕ್ತಪಡಿಸಿ ಅಗಲಿದ ನೆಚ್ಚಿನ ನಟನಿಗೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದರು.

ಅಭಿಮಾನಿಗಳಿಗೆ ಶ್ರದ್ಧಾಂಜಲಿ: ಶಿಡ್ಲಘಟ್ಟ ತಾಲೂಕಿನ ಚೀಮನಹಳ್ಳಿ, ಚೀಮಂಗಲ, ಮೇಲೂರು, ಅಬ್ಲೂಡು, ದಿಬ್ಬೂರಹಳ್ಳಿಗಳಲ್ಲಿ ಪುನೀತ್‌ ರಾಜುಕುಮಾರ್‌ ಅವರ ಭಾವಚಿತ್ರಗಳನ್ನಿಟ್ಟು ಅಭಿಮಾನಿಗಳು ಶ್ರದ್ಧಾಂಜಲಿ ಅರ್ಪಿಸಿದರು. ಅದೇ ರೀತಿಯಲ್ಲಿ ನಗರದ ಮಯೂರ ವೃತ್ತ, ಮಾರಿಯಮ್ಮ ವೃತ್ತ, ಡಾ. ಶಿವಕುಮಾರ್‌ಸ್ವಾಮಿ ವೃತ್ತಗಳಲ್ಲಿ ಹಾಗೂ ವೆಂಕಟೇಶ್ವರ ಚಿತ್ರಮಂದಿರ, ಮಯೂರ ಚಿತ್ರ ಮಂದಿರಗಳ ಮುಂಭಾಗದಲ್ಲಿ ಪುನೀತ್‌ ಅಭಿಮಾನಿಗಳು ಶ್ರದ್ಧಾಂಜಲಿ ಸಲ್ಲಿಸಿ ಶೋಕಾಚರಣೆ ಮಾಡಿದರು.

ಛಾಯಗ್ರಾಹಕ ಭಾವುಕ: ಗೋಕಾಕ್‌ ಚಳವಳಿ ಸಂದರ್ಭದಲ್ಲಿ ವರನಟ ಡಾ.ರಾಜ್‌ಕುಮಾರ್‌ ಅವರೊಂದಿಗೆ ಪವರ್‌ಸ್ಟಾರ್‌ ಪುನೀತ್‌ ರಾಜ್‌ ಕುಮಾರ್‌ ಚಿಕ್ಕಬಳ್ಳಾಪುರಕ್ಕೆ ಭೇಟಿ ನೀಡಿದ್ದರು ಎಂಬ ವಿಚಾರವನ್ನು ಚಿಕ್ಕಬಳ್ಳಾಪುರ ಜಿಲ್ಲೆಯ ಪ್ರಖ್ಯಾತ ಛಾಯಗ್ರಾಹಕ ಭವಾನಿ ಲಕ್ಷ್ಮೀನಾರಾಯಣ ಮಾಹಿತಿ ನೀಡಿ ಭಾವುಕರಾದರು.

ಇದನ್ನೂ ಓದಿ:- ಇಂದು ಚಾ.ನಗರ ಸ್ವಯಂಪ್ರೇರಿತ ಬಂದ್‌ಗೆ ಮನವಿ

Advertisement

 ತಂದೆ ಫೋಟೋ ನೋಡಿ ಖುಷಿ ಪಟ್ಟಿದ್ದರು: ವರನಟ ಡಾ.ರಾಜ್‌ಕುಮಾರ್‌ ಅವರ ಅಪಾರ ಚಿತ್ರಗಳನ್ನು ತೆಗೆದಿದ್ದ ಭವಾನಿ ಲಕ್ಷ್ಮೀನಾರಾಯಣ ಅವರು ಬೆಂಗಳೂರಿನ ಚಿತ್ರಕಲಾ ಪರಿಷತ್ತಿನಲ್ಲಿ ಆಯೋಜಿಸಿದ್ದ ವಸ್ತು ಪ್ರದರ್ಶನದಲ್ಲಿ ಪವರ್‌ಸ್ಟಾರ್‌ ಭಾಗವಹಿಸಿದ್ದರು. ತಮ್ಮ ತಂದೆಯವರ ಅಪರೂಪದ ಚಿತ್ರಗಳನ್ನು ನೋಡಿ ಬಹಳ ಖುಷಿಪಟ್ಟಿದ್ದರು. ಇದೇ ಸಂದರ್ಭದಲ್ಲಿ ತಿರುಪತಿ ಪ್ರವಾಸದಲ್ಲಿದ್ದ ಡಾ.ರಾಜ್‌ಕುಮಾರ್‌ ಅವರು ಭವಾನಿ ಲಕ್ಷ್ಮೀನಾರಾಯಣ ಅವರ ಕುಟುಂಬ ಸದಸ್ಯರೊಂದಿಗೆ ಚಿತ್ರ ತೆಗೆದಿರುವುದನ್ನು ಬೆಳಕು ಚೆಲ್ಲಿದ್ದರು.

ಚಿಕ್ಕಬಳ್ಳಾಪುರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ, ಕನ್ನಡ ಸಾಹಿತ್ಯ ಪರಿಷತ್‌, ವಚನಸಾಹಿತ್ಯ ಪರಿಷತ್‌, ಕರ್ನಾಟಕ ರಕ್ಷಣಾ ವೇದಿಕೆ, ಸುವರ್ಣ ಕರ್ನಾಟಕ ಸಾಂಸ್ಕೃತಿಕ ವೇದಿಕೆ ಕಾರ್ಯಕರ್ತರು ಜಿಲ್ಲಾದ್ಯಂತ ಸಂತಾಪ ಸೂಚಕ ಸಭೆ ಆಯೋಜಿಸಿ ಭಾವ ಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದರು. ಕೆಲ ಖಾಸಗಿ ಶಾಲೆಗಳ ಲ್ಲಿ ಮೌನಾಚರಣೆ ಮಾಡುವ ಮೂಲಕ ಶ್ರದ್ಧಾಂ ಜಲಿ ಸಲ್ಲಿಸಲಾಯಿತು. ಜಿಲ್ಲೆಯ ಪ್ರಮುಖ ವೃತ್ತಗ ಳಲ್ಲಿ ಸೂಕ್ತ ಪೊಲೀಸ್‌ ಬಂದೋಬಸ್ತ್ ಏರ್ಪಡಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next