Advertisement

ಪಡ್ಡೆಹುಲಿಯಲ್ಲಿ ಪುನೀತ್‌ ನಟನೆ

09:21 AM Apr 10, 2019 | Team Udayavani |

“ಪಡ್ಡೆಹುಲಿ’ ತಂಡದಿಂದ ದಿನಕ್ಕೊಂದು ಹೊಸ ಸುದ್ದಿಗಳು ಬರುತ್ತಿವೆ. ಈ ಮೂಲಕ ಚಿತ್ರದಲ್ಲೇನಿದೆ ಎಂಬ ಕುತೂಹಲ ಆರಂಭವಾಗಿದೆ. ಕೆಲವು ದಿನಗಳ ಹಿಂದಷ್ಟೇ ನಟ ರಕ್ಷಿತ್‌ ಶೆಟ್ಟಿ “ಪಡ್ಡೆಹುಲಿ’ ಚಿತ್ರದಲ್ಲಿ ಗೆಸ್ಟ್‌ ಅಪಿಯರೆನ್ಸ್‌ ಮಾಡಿರುವ ಸುದ್ದಿಯನ್ನು ನೀವು ಓದಿರಬಹುದು.

Advertisement

ಈಗ ಕನ್ನಡ ಚಿತ್ರರಂಗದ ಸ್ಟಾರ್‌ನಟರೊಬ್ಬರು ಕೂಡಾ ಚಿತ್ರದಲ್ಲಿ ಅತಿಥಿ ಪಾತ್ರ ಮಾಡಿದ್ದಾರೆ. ಈ ಮೂಲಕ ಹೊಸ ಹುಡುಗ ಶ್ರೇಯಸ್‌ ಚಿತ್ರಕ್ಕೆ ಸ್ಟಾರ್‌ ಟಚ್‌ ಸಿಕ್ಕಿದೆ. ಹಾಗಾದರೆ ಯಾರು ಆ ಸ್ಟಾರ್‌ ನಟ ಎಂದು ನೀವು ಕೇಳಬಹುದು. ಅದಕ್ಕೆ ಉತ್ತರ ಪುನೀತ್‌ ರಾಜಕುಮಾರ್‌.

ಹೌದು, ಪುನೀತ್‌ ರಾಜಕುಮಾರ್‌ “ಪಡ್ಡೆಹುಲಿ’ ಚಿತ್ರದಲ್ಲಿ ಗೆಸ್ಟ್‌ ಅಪಿಯರೆನ್ಸ್‌ ಮಾಡಿದ್ದಾರೆ. ನಟ ರಕ್ಷಿತ್‌ ಶೆಟ್ಟಿ “ಪಡ್ಡೆಹುಲಿ’ಯಲ್ಲಿ ಸಖತ್‌ ರಗಡ್‌ ಲುಕ್‌ನಲ್ಲಿ ಕಾಣಿಸಿಕೊಂಡಿರುವುದು ಟೀಸರ್‌ನಲ್ಲಿ ಸ್ಪಷ್ಟವಾಗಿದೆ. ಹಾಗಾದರೆ, ಪುನೀತ್‌ ರಾಜಕುಮಾರ್‌ ಅವರು ಯಾವ ಪಾತ್ರ ಮಾಡಿದ್ದಾರೆಂದು ನೀವು ಕೇಳಬಹುದು.

ಅದಕ್ಕೆ ಸದ್ಯಕ್ಕೆ ಉತ್ತರವಿಲ್ಲ. ಏಕೆಂದರೆ ಚಿತ್ರತಂಡ ಆ ಕುತೂಹಲವನ್ನು ಕಾಯ್ದಿರಿಸಿದೆ. ಸಿನಿಮಾ ಬಿಡುಗಡೆಯಾದಾಗಲೇ ಪುನೀತ್‌ ಅವರು ಯಾವ ಸನ್ನಿವೇಶದಲ್ಲಿ ಎಂಟ್ರಿಕೊಡುತ್ತಾರೆಂಬುದು ಗೊತ್ತಾಗಲಿದೆ. “ಪಡ್ಡೆಹುಲಿ’ ಚಿತ್ರದ ಮೂಲಕ ನಿರ್ಮಾಪಕ ಕೆ.ಮಂಜು ಪುತ್ರ ಶ್ರೇಯಸ್‌ ಹೀರೋ ಆಗಿ ಎಂಟ್ರಿಕೊಡುತ್ತಿದ್ದಾರೆ.

Advertisement

ನಿಶ್ವಿ‌ಕಾ ನಾಯ್ಡು ನಾಯಕಿ. ಚಿತ್ರದಲ್ಲಿ ರವಿಚಂದ್ರನ್‌ ಕೂಡಾ ನಟಿಸಿದ್ದು, ನಾಯಕನ ತಂದೆಯ ಪಾತ್ರ ಮಾಡಿದ್ದಾರೆ. ರಮೇಶ್‌ ರೆಡ್ಡಿ ಈ ಚಿತ್ರವನ್ನು ನಿರ್ಮಿಸಿದ್ದು, ಗುರುದೇಶಪಾಂಡೆ ಚಿತ್ರದ ನಿರ್ದೇಶಕರು. ಈ ಚಿತ್ರದ ಮತ್ತೂಂದು ವಿಶೇಷವೆಂದರೆ ಹಾಡುಗಳು.

ಚಿತ್ರದಲ್ಲಿ ಬರೋಬ್ಬರಿ 10 ಹಾಡುಗಳಿದ್ದು, ಅಜನೀಶ್‌ ಲೋಕನಾಥ್‌ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ವಚನ ಸೇರಿದಂತೆ ಕವಿಗಳ ಹಾಡುಗಳನ್ನು ಇಲ್ಲಿ ಬಳಸಿಕೊಳ್ಳಲಾಗಿದೆ. ಜೊತೆಗೆ 10 ಹಾಡುಗಳನ್ನು ಸನ್ನಿವೇಶಕ್ಕೆ ತಕ್ಕಂತೆ ಚಿತ್ರೀಕರಿಸಲಾಗಿದೆ.

ಈ ಬಗ್ಗೆ ಮಾತನಾಡುವ ನಿರ್ದೇಶಕ ಗುರುದೇಶಪಾಂಡೆ, ಇವತ್ತಿನ ಯುವಕರು ರ್ಯಾಪ್‌ ಸೇರಿದಂತೆ ಮಾಡರ್ನ್ ಹಾಡುಗಳ ಮೊರೆ ಹೋಗುತ್ತಿರುವ ಸಂದರ್ಭದಲ್ಲಿ ಅವರಿಗೆ ನಮ್ಮ ನೆಲದ, ಸಂಸ್ಕೃತಿಯ ಹಾಡುಗಳನ್ನು ಕೇಳಿಸಬೇಕೆಂಬ ಕಾರಣಕ್ಕೆ ವಚನ ಹಾಗೂ ನಮ್ಮ ಕವಿಗಳ ಹಾಡುಗಳನ್ನು ಬಳಸಿಕೊಂಡಿದ್ದಾಗಿ ಹೇಳಿದರು. ಅಂದಹಾಗೆ, ಚಿತ್ರ ಏಪ್ರಿಲ್‌ 19 ರಂದು ತೆರೆಕಾಣುತ್ತಿದೆ.

ಪಡ್ಡೆಹುಲಿ ಹಿಂದಿ ಡಬ್ಬಿಂಗ್‌ ರೈಟ್ಸ್‌ ಮಾರಾಟ: ಸಿನಿಮಾ ಬಿಡುಗಡೆಯಾಗುವ ಮೊದಲೇ ಚಿತ್ರತಂಡ ಖುಷಿಯಾಗಿದೆ. ಅದಕ್ಕೆ ಕಾರಣ ಹಿಂದಿ ಡಬ್ಬಿಂಗ್‌ ರೈಟ್ಸ್‌. ಹೌದು, “ಪಡ್ಡೆಹುಲಿ’ ಚಿತ್ರದ ಹಿಂದಿ ಡಬ್ಬಿಂಗ್‌ ರೈಟ್ಸ್‌ ಬರೋಬ್ಬರಿ 2.36 ಕೋಟಿಗೆ ಮಾರಾಟವಾಗಿದೆ.

ಒಬ್ಬ ಹೊಸ ಹೀರೋನಾ ಸಿನಿಮಾಕ್ಕೆ ಈ ಮಟ್ಟದ ಬೆಲೆ ಸಿಕ್ಕಿರೋದು ದಾಖಲೆ ಎಂಬುದು ಚಿತ್ರತಂಡದ ಮಾತು. “ಹೊಸ ಹುಡುಗನ ಚಿತ್ರವೊಂದು ದಾಖಲೆ ಮೊತ್ತಕ್ಕೆ ಮಾರಾಟವಾಗಿರುವುದು ಇದೇ ಮೊದಲು. ಚಿತ್ರದ ಮೇಕಿಂಗ್‌ ಹಾಗೂ ಹಾಡುಗಳನ್ನು ನೋಡಿಯೇ ಈ ಮೊತ್ತ ನೀಡಲಾಗಿದೆ’ ಎಂಬುದು ನಿರ್ದೇಶಕ ಗುರುದೇಶಪಾಂಡೆ ಮಾತು.

Advertisement

Udayavani is now on Telegram. Click here to join our channel and stay updated with the latest news.

Next