Advertisement

ಮಾಸ್ಟರ್​​ ಆನಂದ್‍ಗೆ ಪವರ್ ಸ್ಟಾರ್ ಸಾಥ್

11:36 AM Jan 29, 2019 | |

ದೊಡ್ಮನೆ ಹುಡುಗ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಹಾಗೂ ಮಾಸ್ಟರ್ ಆನಂದ್ ಬಾಲ್ಯದಿಂದಲೂ ಸ್ನೇಹಿತರಾಗಿದ್ದು, ಒಂದು ಕಾಲಕ್ಕೆ ಬಹು ಬೇಡಿಕೆಯ ಬಾಲನಟರಾಗಿದ್ದರು. ಅಲ್ಲದೇ ಆ ಕಾಲಕ್ಕೆ ತುಂಬಾ ಜನಪ್ರಿಯತೆ ಪಡೆದಿದ್ದರು. ಹೀಗಿರುವಾಗ, ಈ ಇಬ್ಬರು ನಟರು ಈಗ ಮತ್ತೆ ಒಂದಾಗಿದ್ದಾರೆ.

Advertisement

ಹೌದು, ಬಹಳ ದಿನಗಳ ನಂತರ ಮಾಸ್ಟರ್​​ ಆನಂದ್​ ಫೂರ್ಣ ಪ್ರಮಾಣದ ನಾಯಕನಾಗಿ ತೆರೆ ಮೇಲೆ ಬರಲು ಸಜ್ಜಾಗಿದ್ದು, ಸದ್ಯ ರಿಯಾಲಿಟಿ ಶೋ ಆ್ಯಂಕರಿಂಗ್​ನಲ್ಲಿ ಬ್ಯುಸಿಯಾಗಿರೋ ಮಾಸ್ಟರ್​ ಆನಂದ್​ ಹೊಸ ಸಿನಿಮಾದಲ್ಲಿ ನಾಯಕ ನಟನಾಗಿ ಅಭಿನಯಿಸುತ್ತಿದ್ದಾರೆ. ಈ ಸಿನಿಮಾದ ಹಾಡಿಗೆ ಪವರ್​ ಸ್ಟಾರ್ ದನಿಯಾಗಿದ್ದಾರೆ.

ಈ ಕುರಿತು ಪುನೀತ್ ರಾಜಕುಮಾರ್ ತಮ್ಮ ಸೋಷಿಯಲ್ ಮೀಡಿಯಾ ಅಕೌಂಟ್‍ಗಳಲ್ಲಿ ಮಾಸ್ಟರ್ ಆನಂದ್ ಜೊತೆಗಿರುವ ಫೋಟೋವನ್ನು ಹಂಚಿಕೊಂಡಿದ್ದು, “ಇವತ್ತು ಮಾಸ್ಟರ್ ಆನಂದ್ಗೆ ಒಂದ್ ಹಾಡ್ ಹಾಡಿದೆ ತುಂಬಾ ಖುಷಿ ಆಯ್ತು ಮಾಸ್ಟರ್ ಆನಂದ್ ನೋಡಿದಾಗ್ಲೆಲ್ಲ ಒಂದೇ ನೆನಪಾಗೋದು ಗಣೇಶನ ಮದುವೆ.. ಅವತ್ತಿನಿಂದ ಇವತ್ತಿನವರೆಗೂ ಒಳ್ಳೆ ಕೆಲಸ ಮಾಡಿದ್ದಾರೆ…… All the best Anand…..’ ಎಂದು ಟ್ವೀಟರ್ ಹಾಗೂ ಫೇಸ್‍ಬುಕ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next