Advertisement

ಪುನೀತ್‌ ಸರಳತೆಗೆ ಅಭಿಮಾನಿಗಳು ಫಿದಾ

08:39 AM Sep 07, 2021 | Team Udayavani |

ಪುನೀತ್‌ ರಾಜ್‌ಕುಮಾರ್‌ ಅವರ ಫೋಟೋವೊಂದು ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ಅದು ಕುರಿಗಾಹಿಗಳ ಕುಟುಂಬದ ಜೊತೆ ನೆಲದ ಮೇಲೆ ಕುಳಿತು ಊಟ ಮಾಡುತ್ತಿರುವ ಫೋಟೋ.

Advertisement

ಈ ಮೂಲಕ ಅಭಿಮಾನಿ ಗಳು ಪುನೀತ್‌ ಅವರ ಸರಳತೆಗೆ ಮಾರು ಹೋಗಿದ್ದಾರೆ. ಅಪ್ಪನಂತೆ ಮಗ ಎಂಬ ಟ್ಯಾಗ್‌ಲೈನ್‌ನೊಂದಿಗೆ ಫೋಟೋಗೆ ಬಹುಪರಾಕ್‌ ಸಿಗುತ್ತಿದೆ.

ಪುನೀತ್‌ ನಟನೆಯ”ಜೇಮ್ಸ್‌’ ಚಿತ್ರದ ಚಿತ್ರೀಕರಣಗಂಗಾವತಿ ಸಮೀಪ ನಡೆಯುತ್ತಿದೆ. ಈ ವೇಳೆಕುರಿಗಾಹಿಗಳ ಮನೆಗಳಿದ್ದ ಸ್ಥಳಕ್ಕೆ ಭೇಟಿ ನೀಡಿದ ಪುನೀತ್‌, ನೆಲದ ಮೇಲೆ ಹಾಸಿದಕಂಬಳಿ ಮೇಲೆ ಕೂತು, ಕುರಿಗಾಹಿಗಳು ನೀಡಿದಊಟ ಮಾಡಿದ್ದಾರೆ. ಜೊತೆಗೆ ಅಲ್ಲಿನ ಮಕ್ಕನ್ನು ಎತ್ತಿಕೊಂಡು ಮುದ್ದಾಡಿದ್ದಾರೆ. ಈಗ ಈ ಫೋಟೋ ವೈರಲ್‌ ಆಗಿದೆ.

Advertisement

Udayavani is now on Telegram. Click here to join our channel and stay updated with the latest news.

Next