Advertisement

ರಾಜ್‌ ಪಾತ್ರಕ್ಕೆ ಜೀವ ತುಂಬಲಿದ್ದಾರಾ ಪುನೀತ್‌?

09:45 AM Jan 08, 2019 | |

ಪುನೀತ್‌ರಾಜಕುಮಾರ್‌ ಅಭಿನಯದ “ನಟಸಾರ್ವಭೌಮ’ ಇನ್ನೇನು ಬಿಡುಗಡೆಗೆ ತಯಾರಿ ನಡೆಸುತ್ತಿದೆ. ಅತ್ತ, ಪುನೀತ್‌ರಾಜಕುಮಾರ್‌ ಅವರು “ನಟಸಾರ್ವಭೌಮ’ ಡಾ.ರಾಜಕುಮಾರ್‌ ಅವರ ಜೀವನ ಚರಿತ್ರೆ ಕುರಿತ ಚಿತ್ರದಲ್ಲಿ ನಟಿಸುವ ಆಸೆಯನ್ನು ವ್ಯಕ್ತಪಡಿಸಿದ್ದಾರೆ. ಹೌದು, ಡಾ.ರಾಜಕುಮಾರ್‌ ಅವರ ಬಯೋಪಿಕ್‌ ಏನಾದರೂ ಮಾಡಿದರೆ, ಅದರಲ್ಲಿ ಡಾ.ರಾಜಕುಮಾರ್‌ ಅವರ ಪಾತ್ರವನ್ನು ನಿರ್ವಹಿಸು ವುದಾಗಿ ಪುನೀತ್‌ ರಾಜಕುಮಾರ್‌ ಹೇಳಿದ್ದಾರೆ.

Advertisement

ಸಂದರ್ಭ: “ಎನ್‌ಟಿಆರ್‌ ಕಥಾನಾಯಕಡು’ ಚಿತ್ರದ ಪತ್ರಿಕಾಗೋಷ್ಠಿಗೆ ಆಗಮಿಸಿದ್ದ ಪುನೀತ್‌ ರಾಜಕುಮಾರ್‌ ಅವರನ್ನು ವೇದಿಕೆಯಲ್ಲಿದ್ದ ತೆಲುಗಿನ ಖ್ಯಾತ ನಟ ಬಾಲಕೃಷ್ಣ ಅವರು, “ನನ್ನ ತಂದೆ ಎನ್‌ ಟಿಆರ್‌ ಅವರ ಬಯೋಪಿಕ್‌ನಲ್ಲಿ ಅವರ ಪಾತ್ರವನ್ನು ನಾನೇ ಮಾಡುವ ಅವಕಾಶ ಸಿಕ್ಕಿದ್ದು ನನ್ನ ಅದೃಷ್ಟ. ಪುನೀತ್‌ರಾಜಕುಮಾರ್‌ ಅವರು ಸಹ ಅವರ ತಂದೆ ಡಾ.ರಾಜಕುಮಾರ್‌ ಅವರ ಜೀವನ ಚರಿತ್ರೆ ಕುರಿತ ಚಿತ್ರದಲ್ಲಿ ಅಭಿನಯಿಸಬೇಕು’ ಎಂದು ವೇದಿಕೆಯಲ್ಲೇ ಹೇಳಿದರು. ಅದಕ್ಕೆ ತಲೆಯಾಡಿಸಿದ ಪುನೀತ್‌ ರಾಜಕುಮಾರ್‌ ಅವರು ದೊಡ್ಡ ನಗೆ ಬೀರಿದರು.

ಅತ್ತ ಪತ್ರಿಕಾಗೋಷ್ಠಿ ಮುಗಿದ ಬಳಿಕ ಪತ್ರಕರ್ತರ ಜೊತೆ ಅನೌಪಚಾರಿಕವಾಗಿ ಮಾತಿಗೆ ನಿಂತ ಪುನೀತ್‌ ರಾಜಕುಮಾರ್‌ ಅವರನ್ನು ಪತ್ರಕರ್ತರು, ನೀವೇಕೆ ಡಾ.ರಾಜಕುಮಾರ್‌ ಅವರ ಬಯೋಪಿಕ್‌ ಚಿತ್ರ ಮಾಡಬಾರದು ಎಂಬ ಪ್ರಶ್ನೆ ಮುಂದಿಟ್ಟಾಗ, ಪುನೀತ್‌ ರಾಜಕುಮಾರ್‌, ಹೇಳಿದ್ದಿಷ್ಟು.

“ಅಪ್ಪಾಜಿ ಅವರ ಜೀವನ ಚರಿತ್ರೆ ಚಿತ್ರದಲ್ಲಿ ನನಗೂ ನಟಿಸುವ ಆಸೆ ಇದೆ. ಆದರೆ, ಒಳ್ಳೆಯ ಮೇಕರ್‌ ಸಿಗಬೇಕು. ಹಾಗೇನಾದರೂ, ಒಳ್ಳೆಯ ಮೇಕರ್‌ ಸಿಕ್ಕರೆ ಖಂಡಿತವಾಗಿಯೂ ನಾನು ಅಪ್ಪಾಜಿ ಬಯೋಪಿಕ್‌ನಲ್ಲಿ ನಟಿಸಲು ರೆಡಿ. ನನಗೆ ಅಪ್ಪಾಜಿಯವರ ಬಯೋಪಿಕ್‌ನಲ್ಲಿ ನಟಿಸಲು ಯಾವುದೇ ಅಭ್ಯಂತರವಿಲ್ಲ. ಆದರೆ, ಬಯೋಪಿಕ್‌ನಲ್ಲಿ ಸಾಕಷ್ಟು ಒಳ್ಳೆಯ ಅಂಶಗಳಿರಬೇಕು. ಯಾವ ಅಂಶ ಇಟ್ಟುಕೊಂಡು ಚಿತ್ರ ಮಾಡುತ್ತಾರೆ ಅನ್ನುವುದು ಸಹ ಅಷ್ಟೇ ಮುಖ್ಯ. ದಿಗ್ಗಜರ ಕುರಿತ ಚಿತ್ರಗಳನ್ನು ಮಾಡುವಾಗ, ಅವರ ಕುರಿತು ಸಾಕಷ್ಟು ವಿಚಾರಗಳಿರುತ್ತವೆ. ಯಾವುದಾದರೊಂದು ಒಳ್ಳೆಯ ವಿಷಯವನ್ನು ಇಟ್ಟುಕೊಂಡು ಅದನ್ನು ತುಂಬಾ ಹೈಲೆಟ್‌ ಮಾಡುವಂತಹ ಒಳ್ಳೆಯ ಮೇಕರ್‌ ಸಿಕ್ಕರೆ ನಾನು ಅಪ್ಪಾಜಿಯವರ ಬಯೋಪಿಕ್‌ನಲ್ಲಿ ನಟಿಸಲು ಸಿದ್ಧ’ ಎಂದು ಹೇಳಿಕೊಂಡರು.

ಬಯೋಪಿಕ್‌ ಮಾಡಿದ್ದು ನನ್ನ ಪುಣ್ಯ ತೆಲುಗಿನ ಖ್ಯಾತ ನಟ ಎನ್‌ಟಿಆರ್‌ ಅವರ ಬಯೋಪಿಕ್‌ನಲ್ಲಿ ಅವರ ಪುತ್ರ ಬಾಲಕೃಷ್ಣ ನಟಿಸಿದ್ದು, ಜನವರಿ 9 ಕ್ಕೆ “ಎನ್‌ಟಿಆರ್‌ ಕಥಾನಾಯಕಡು’ ಬಿಡುಗಡೆಯಾದರೆ, ಫೆಬ್ರವರಿ 9ಕ್ಕೆ “ಎನ್‌ಟಿಆರ್‌ ಮಹಾನಾಯಕಡು’ ಚಿತ್ರ ಬಿಡುಗಡೆಯಾಗಲಿದೆ.

Advertisement

ಇನ್ನು, ಎನ್‌ಟಿಆರ್‌ ಪುತ್ರ ಬಾಲಕೃಷ್ಣ ಅವರು ಹೇಳಿದ್ದಿಷ್ಟು. “ಅಪ್ಪನ ಬಯೋಪಿಕ್‌ ಮಾಡಿದ್ದು ನನ್ನ ಪುಣ್ಯ. ಮೊದಲು ಎನ್‌ಟಿಆರ್‌ ಬಯೋಪಿಕ್‌ನಲ್ಲಿ ಯಾರು ಕಾಣಿಸಿಕೊಳ್ಳುತ್ತಾರೆ ಎಂಬ ಮಾತುಗಳು ಕೇಳಿಬಂದಾಗ, ನನಗೇ ಆ ಅವಕಾಶ ಸಿಕ್ಕಿತು. ಇನ್ನು, ಎನ್‌ಟಿಆರ್‌ ಅವರ ಪತ್ನಿ ಪಾತ್ರವನ್ನು ಬಾಲಿವುಡ್‌ ನಟಿ ವಿದ್ಯಾಬಾಲನ್‌ ಮಾಡಿದ್ದಾರೆ. ಅವರಿಗೆ ಸೌತ್‌μಲ್ಮ್ ಇಂಡಸ್ಟ್ರಿಯಲ್ಲಿ ಇದು ಮೊದಲ ಚಿತ್ರ’ ಎಂಬುದು ಬಾಲಕೃಷ್ಣ ಅವರ ಮಾತು.

Advertisement

Udayavani is now on Telegram. Click here to join our channel and stay updated with the latest news.

Next