ಪುಣೆ: ಪುಣೆ ತುಳು ಕೂಟದ ಯುವ ವಿಭಾಗದ ವತಿ ಯಿಂದ ಜೂ. 17ರಂದು ಅಪರಾಹ್ನ ಪರಿಸರ ದಿನಾಚರಣೆಯ ಅಂಗವಾಗಿ ಸಸ್ಯ ಬೆಳೆಸಿ ಪರಿಸರ ಉಳಿಸಿ ಎನ್ನುವ ಜನಜಾಗೃತಿ ಮೂಡಿಸುವ ಉದ್ದೇಶದಿಂದ ಸೈಕಲ್ ರ್ಯಾಲಿಯನ್ನು ಆಯೋಜಿಸಲಾಯಿತು.
ನಗರದ ಜೆ. ಎಂ. ರೋಡ್‌ನಲ್ಲಿರುವ ಛತ್ರಪತಿ ಸಂಭಾಜಿ ಗಾರ್ಡನ್‌ನಿಂದ ಪುಣೆ ತುಳುಕೂಟದ ಅಧ್ಯಕ್ಷ ತಾರಾನಾಥ ಕೆ. ರೈ ಮೇಗಿನಗುತ್ತು ಅವರು ರ್ಯಾಲಿಗೆ ಚಾಲನೆ ನೀಡಿದರು. ಪರಿಸರ ಸಂರಕ್ಷಣೆ, ಪರಿಸರ ಮಾಲಿನ್ಯ, ಪ್ಲಾಸ್ಟಿಕ್ ಮುಕ್ತ ಪುಣೆ ಇವುಗಳ ಬಗ್ಗೆ ಜನಜಾಗೃತಿ ಮೂಡಿಸುವ ಉದ್ದೇಶದಿಂದ ಈ ರ್ಯಾಲಿಯನ್ನು ಆಯೋಜಿಸಲಾಗಿತ್ತು. ಟ್ರಾಫಿಕ್ ಪೊಲೀಸರು ಸೇರಿದಂತೆ ನೂರಾರು ಸಂಖ್ಯೆಯಲ್ಲಿ ಜನರು ಸಾಥ್ ನೀಡಿದರು.
ಛತ್ರಪತಿ ಸಂಭಾಜಿ ಗಾರ್ಡನ್‌ನಿಂದ ಆರಂಭಗೊಂಡ ರ್ಯಾಲಿಯು ಫರ್ಗುಸನ್ ಕಾಲೇಜ್ ರೋಡ್‌ನಿಂದ ಯುನಿವರ್ಸಿಟಿ ಮಾರ್ಗವಾಗಿ ಜಂಗ್ಲಿ ಮಹಾರಾಜ್ ರೋಡ್ ಮೂಲಕ ಸಾಗಿತು. ಯುವ ವಿಭಾಗದ ಕಾರ್ಯಾಧ್ಯಕ್ಷ ನ್ಯಾಯವಾದಿ ರೋಹನ್ ಪಿ. ಶೆಟ್ಟಿ ಅವರ ನೇತೃತ್ವದಲ್ಲಿ ರ್ಯಾಲಿಯನ್ನು ಯಶಸ್ವಿಯಾಗಿ ಆಯೋಜಿಸಲಾಯಿತು.
ಶ್ಯಾಮ್ ಸುವರ್ಣ, ಸಂತೋಷ್ ಶೆಟ್ಟಿ ಎಣ್ಣೆಹೊಳೆ, ಪುರುಷೋತ್ತಮ್ ಶೆಟ್ಟಿ, ಸದಾಶಿವ್ ಶೆಟ್ಟಿ, ರತ್ನಾಕರ ಶೆಟ್ಟಿ, ಪ್ರೇಮಾ ಶೆಟ್ಟಿ, ದೇವಕಿ ಶೆಟ್ಟಿ, ಸವಿತಾ ಶೆಟ್ಟಿ, ನೂತನ್ ಸುವರ್ಣ, ವಿನಯಾ ಪೂಜಾರಿ, ಪ್ರಕಾಶ್ ಪೂಜಾರಿ, ಯುವ ವಿಭಾಗದ ಅಭಿಜಿತ್ ಶೆಟ್ಟಿ, ಸುಮಿತ್ ಶೆಟ್ಟಿ, ಭಾಗೆÂಷ್ ಶೆಟ್ಟಿ, ಆಕಾಶ್ ಶೆಟ್ಟಿ, ಪ್ರತೀಕ್ ಶೆಟ್ಟಿ, ಸುಜಯ್ ಶೆಟ್ಟಿ, ವಿನೀತ್ ಪೂಜಾರಿ, ರತನ್ ಸಾಲ್ಯಾನ್, ರಾಜೇಂದ್ರ ಕೋಟ್ಯಾನ್, ರವಿರಾಜ್ ಶೆಟ್ಟಿ, ಮಹೇಶ್ ನಾಯ್ಕ, ನಿತಿನ್ ಶೆಟ್ಟಿ, ಶ್ರುತಿ ಶೆಟ್ಟಿ, ಪೂಜಾ ಶೆಟ್ಟಿ, ದಿಶಾ ಶೆಟ್ಟಿ, ದೀûಾ ಶೆಟ್ಟಿ, ಮಲ್ಲಿಕಾ ಕುಲಾಲ್, ಸರಿತಾ ಶೆಟ್ಟಿ, ಅಪೂರ್ವಾ ಶೆಟ್ಟಿ, ಸುಶೀಲ್ ಶೆಟ್ಟಿ, ಸುಚೇತ್ ಶೆಟ್ಟಿ, ಪ್ರಾಣೇಶ್ ಶೆಟ್ಟಿ ಮತ್ತು ಆಕಾಶ್ ಶೆಟ್ಟಿ ಹಾಗೂ ಸದಸ್ಯರು ಉಪಸ್ಥಿತರಿದ್ದರು.
ಚಿತ್ರ-ವರದಿ : ಕಿರಣ್ ಬಿ. ರೈ ಕರ್ನೂರು