ಪುಣೆ: ಇಂದಿನ ಜಂಜಾಟದ ಬದುಕಿನಲ್ಲಿ ಬಿಡುವಿಲ್ಲದ ನಮ್ಮ ದಿನ ನಿತ್ಯದ ಜೀವನ ಶೈಲಿಯೇ ನಮಗೊಂದು ಸವಾಲಾಗಿದೆ. ಯಾವುದೇ ಕಾರ್ಯ ಕ್ಷೇತ್ರವಿರಲಿ ಅಲ್ಲಿ ನಮಗೆ ಸುರಕ್ಷತೆ ಬಹು ಮುಖ್ಯವಾಗಿರಬೇಕು. ಅಂತಹ ಸುರಕ್ಷತೆಯನ್ನು ಇಂದು ಎಲ್ಲರೂ ಬಯಸುತ್ತಾರೆ. ಅದರಲ್ಲಿ ಕರಾಟೆ ಮುಖ್ಯ ಪಾತ್ರವನ್ನು ವಹಿಸುತ್ತದೆ. ಕರಾಟೆಯಿಂದ ನಮ್ಮ ಸ್ವ ರಕ್ಷಣೆಯ ಜೊತೆಗೆ ಇತರರನ್ನು ರಕ್ಷಿಸುವಲ್ಲಿ ಸಹಾಯ ಮಾಡಬಲ್ಲದು. ಯುವ ಜನತೆ, ಮಕ್ಕಳು, ಹೆಣ್ಣು ಗಂಡು ಭೇದವಿಲ್ಲದೆ ಅತಿ ಬೇಗನೆ ಕಲಿಯಬಹುದಾದ ಕರಾಟೆಯನ್ನು ಇಂದಿನ ಮಕ್ಕಳು ಕಲಿಯಬೇಕಾದ ಅನಿವಾರ್ಯತೆ ಇದೆ. ಎಂದು ಪುಣೆ ಬಿಲ್ಲವ ಸಂಘದ ಉಪಾಧ್ಯಕ್ಷ ಸಮಾಜ ಸೇವಕ ವಿಶ್ವನಾಥ್ ಪೂಜಾರಿ ಕಡ್ತಲ ಅವರು ಹೇಳಿದರು.
ಫೆ. 4ರಂದು ಪುಣೆಯ ಕೇತ್ಕರ್‌ರೋಡ್‌ನಲ್ಲಿಯ ಕನ್ನಡ ಸಂಘದ ಶಾಮರಾವ್ ಕಲ್ಮಾಡಿ ಹೈಸ್ಕೂಲ್‌ನ ಸಭಾ ಭವನದಲ್ಲಿ ನಡೆದ ಪುಣೆ ಟೆಕೊÌಂಡೋ ಅರ್ಗಾನೈಜೇಶನ್ ಟೆಕ್ವೊಂಡೋ ಅಸೋಸಿಯೇಶನ್ ಮಹಾರಾಷ್ಟ್ರ, ಟೆಕ್ವೊಂಡೋ ಫೆಡರೇಷನ್ ಆಫ್ ಇಂಡಿಯ, ಟೆಕ್ವೊಂಡೋ ಯೂನಿಯನ್ ಇಂಡಿಯನ್ ಒಲಿಂಪಿಕ್ ಅಸೋಸಿಯೇಶನ್ ಭಾರತ ಸರಕಾರದಿಂದ ಮಾನ್ಯತೆ ಪಡೆದ ಪುಣೆಯ ಯುಕೆಸ್ ಟೆಕ್ವೊಂಡೋ ಅಕಾಡೆಮಿಯ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ಅಕಾಡೆಮಿಯ ಸಂಚಾ ಲಕರಾದ ಕನ್ನಡಿಗ ರಾಜೇಶ್ ಪೂಜಾರಿ ಮತ್ತು ಉಮೇಶ್ ಕುಲಕರ್ಣಿ ಅವರ ಕಾರ್ಯ ಶ್ಲಾಘ ನೀಯ ಎಂದರು.
ಅಕಾಡೆಮಿಯ ಪ್ರಶಸ್ತಿ ಸಮಾರಂಭದಲ್ಲಿ ಸುಮಾರು 70 ಕರಾಟೆ ಸ್ಪರ್ಧಿಗಳಿಗೆ ಆಯಾಯ ವಿಭಾಗಗಳಲ್ಲಿ ಬೆಲ್ಟ…ಗಳನ್ನೂ ವಿಶ್ವನಾಥ್ ಪೂಜಾರಿ, ಪುಣೆ ಬಿಲ್ಲವ ಸಂಘದ ಕಾರ್ಯದರ್ಶಿ ನ್ಯಾಯವಾದಿ ಲೋಹಿತ್ ಕೆ. ಪೂಜಾರಿ, ಯುವ ವಿಭಾಗದ ಸದಸ್ಯ ಕಿಶೋರ್ ಪೂಜಾರಿ, ಉಮೇಶ್ ಕುಲಕರ್ಣಿ ಮತ್ತು ರಾಜೇಶ್ ಪೂಜಾರಿ ಅವರು ವಿತರಿಸಿ, ಪ್ರಶಸ್ತಿ ಪತ್ರ ನೀಡಿ ಅಭಿನಂದಿಸಿದರು. ಈ ಸಮಾರಂಭದಲ್ಲಿ ಅಕಾಡೆಮಿಯ ಹೆಚ್ಚಿನ ವಿದ್ಯಾರ್ಥಿಗಳು ಭಾಗವಹಿಸಿದ್ದರು.
1998ರಿಂದ ಪುಣೆಯಲ್ಲಿ ಕರಾಟೆ ಶಿಕ್ಷಣ° ನೀಡುತ್ತಿರುವ ರಾಜೇಶ್ ಪೂಜಾರಿ ಅವರು ಪುಣೆಯ ಕೊಥ್ರೊಡ್, ಪಟವರ್ಧನ್‌ಭಾಗ್, ಸಿಂಹಗಡ್ ರೋಡ್, ಔದ್ ಹಾಗೂ ಕನ್ನಡ ಶಾಲೆಯ ಮೂರು ಕಡೆಗಳಲ್ಲಿ ಕರಾಟೆ ತರಬೇತಿಯನ್ನು ನೀಡುತಿದ್ದು ಸುಮಾರು 900 ವಿದ್ಯಾರ್ಥಿಗಳು ಕರಾಟೆ ಕಲಿಯುತ್ತಿದ್ದಾರೆ. 2013ರಲ್ಲಿ ಪುಣೆಯಲ್ಲಿ ಜರಗಿದ ಟೆಕೊÌಂಡೋ ರಾಷ್ಟ್ರೀಯ ಸ್ಪರ್ಧೆಯಲ್ಲಿ ಚಿನ್ನದ ಪದಕ ವಿಜೇತರಾದ ಇವರು 2013ರಿಂದ ಭಾರತದ ಫೈಟ್ ಅÂಂಟ್ ಕಟಾ ಸ್ಪರ್ಧೆಗಳ ರೆಫ್ರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ತಮ್ಮ ಸಂಸ್ಥೆಯಲ್ಲಿ ಪುಣೆಯ ಬಡ ತುಳು ಕನ್ನಡ ಮಕ್ಕಳಿಗೆ ಉಚಿತ ಕರಾಟೆ ತರಬೇತಿಯನ್ನು ನೀಡುವ ಇಂಗಿತ ಹೊಂದಿದ್ದು, ಉತ್ಸಾಹಿ ಮಕ್ಕಳು ಕೊಥ್ರೊಡ್ ಕರಿಷ್ಮಾ ಬಿಲ್ಡಿಂಗ್‌ನಲ್ಲಿರುವ ಕಚೇರಿಯನ್ನು ಸಂಪರ್ಕಿಸಬಹುದು.