ಪುಣೆ: ಐಷಾರಾಮಿ ಕಾರನ್ನು ಮನಬಂದಂತೆ ಚಲಾಯಿಸಿ ಇಬ್ಬರು ಟೆಕ್ಕಿಗಳ ಸಾವಿಗೆ ಕಾರಣವಾದ ಪುಣೆ ಪೋರ್ಷೆ ಅಪಘಾತದಲ್ಲಿ ಬಂಧಿತನಾಗಿ ಜಾಮೀನಿನ ಮೇಲೆ ಹೊರಬಂದ ಯುವಕನಿಗೆ ಇನ್ನೊಂದು ಆಘಾತ ಎದುರಾಗಿದೆ.
ಅಪಘಾತ ನಡೆಸಿದ ಅಪ್ರಾಪ್ತ ಬಾಲಕನ ವಿರುದ್ಧ ನಡೆಯುತ್ತಿರುವ ಕ್ರಿಮಿನಲ್ ಮೊಕದ್ದಮೆಯಿಂದಾಗಿ ಆತನಿಗೆ ಯಾವುದೇ ಕಾಲೇಜಿನಲ್ಲಿ ಸೀಟು ಸಿಗುತ್ತಿಲ್ಲ ಕಾಲೇಜಿನಲ್ಲಿ ಸೀಟು ಪಡೆಯಲು ಬಾಲಕ ಹೆಣಗಾಡುತ್ತಿದ್ದಾನೆ ಎಂದು ಆತನ ಪರ ವಕೀಲರು ಬಾಲ ನ್ಯಾಯ ಮಂಡಳಿಗೆ (ಜೆಜೆಬಿ) ಮಾಹಿತಿ ನೀಡಿದ್ದಾರೆ.
ಇತ್ತೀಚೆಗೆ ಪಿಯುಸಿ ಉತ್ತೀರ್ಣನಾದ ಅಪ್ರಾಪ್ತ ಆರೋಪಿಯು ದೆಹಲಿಯ ಪ್ರತಿಷ್ಠಿತ ಕಾಲೇಜಿನಲ್ಲಿ ಬಿಬಿಎ ಕೋರ್ಸ್‌ಗೆ ಅರ್ಜಿ ಸಲ್ಲಿಸಿದ್ದ ಎನ್ನಲಾಗಿದೆ ಆದರೆ ಇದರ ನಂತರ ನಡೆದ ಘಟನೆಯಿಂದ ಆತನ ಪ್ರವೇಶವನ್ನು ಕಾಲೇಜು ಆಡಳಿತ ಮಂಡಳಿ ನಿರಾಕರಿಸಿದೆ ಎಂದು ವಕೀಲರು ಹೇಳಿದ್ದಾರೆ.
ಮೇ 19 ರ ಮುಂಜಾನೆ 17 ವರ್ಷದ ಬಾಲಕ ತನ್ನ ಪೋರ್ಷೆ ಕಾರನ್ನು ಮನಬಂದಂತೆ ಚಲಾಯಿಸಿ ಕಲ್ಯಾಣಿ ನಗರ ಪ್ರದೇಶದಲ್ಲಿ ಬೈಕ್‌ನಲ್ಲಿದ್ದ ಐಟಿ ಉದ್ಯೋಗಿಗಳಿಗೆ ಡಿಕ್ಕಿ ಹೊಡೆದು ಅವರ ಬೈಕ್ ನಲ್ಲಿದ್ದ ಇಬ್ಬರೂ ಮೃತಪಟ್ಟಿದ್ದರು.
ಇದನ್ನೂ ಓದಿ: Coconut: ಅಧಿಕ ಮಳೆ, ರೋಗಬಾಧೆ: ಕೆ.ಜಿ.ಗೆ 50 ರೂ. ಗಡಿ ದಾಟಿದ ತೆಂಗಿನಕಾಯಿ