Advertisement

Pune: ದಕ್ಷಿಣ – ಉತ್ತರ ಪ್ರಾದೇಶಿಕ ಸಮಿತಿಗಳು ಬಂಟರ ಸಂಘದ ಎರಡು ಕೈಗಳಿದ್ದಂತೆ

05:30 PM Sep 22, 2023 | Nagendra Trasi |

ಪುಣೆ: ದಕ್ಷಿಣ ಪ್ರಾದೇಶಿಕ ಸಮಿತಿಯವರು ಉತ್ತಮ ವ್ಯಕ್ತಿತ್ವದ ಸರಳ ಸಜ್ಜನ ವ್ಯಕ್ತಿಯನ್ನು ಗುರುತಿಸಿ ಸಮ್ಮಾನಿಸಿದ್ದಾರೆ. ನನ್ನ ಜತೆ ಸುಮಾರು ವರ್ಷಗಳಿಂದ ಅಜಿತ್‌ ಹೆಗ್ಡೆ ಪ್ರಧಾನ ಕಾರ್ಯದರ್ಶಿಯಾಗಿ ಕೆಲಸ ಮಾಡುತ್ತಿದ್ದಾರೆ. ಅವರ ಕಾರ್ಯವೈಖರಿಯಲ್ಲಿ ನನಗೆ ಬೆಂಬಲ ಮತ್ತು ಸಂಪೂರ್ಣ ಸಹಕಾರ ಸಿಕ್ಕಿದೆ.

Advertisement

ಅಚ್ಚುಕಟ್ಟಾಗಿ ಕಾರ್ಯ ಯೋಜನೆಗಳನ್ನು ಮಾಡುವ ಮೂಲಕ ಸಮಾಜದ ಪ್ರೀತಿಗೆ ಪಾತ್ರರಾಗಿದ್ದಾರೆ. ಅಜಿತ್‌ ಹೆಗ್ಡೆ ಈ ಸಮ್ಮಾನಕ್ಕೆ ಅರ್ಹರು. ನಮ್ಮಲ್ಲಿ ಎರಡು ಪ್ರಾದೇಶಿಕ ಸಮಿತಿಗಳಿದ್ದು, ನಿಸ್ವಾರ್ಥ ಸೇವೆಗಳ ಮೂಲಕ ಪ್ರೀತಿಗೆ ಪಾತ್ರವಾಗಿವೆ. ಈ ಸಮಿತಿಗಳು ಸಂಘದ ಎರಡು ಕೈಗಳಿದ್ದಂತೆ ಮತ್ತು ಆನೆ ಬಲವನ್ನು ತಂದುಕೊಟ್ಟಿವೆ. ಅವರ ಕೆಲಸ ಕಾರ್ಯಗಳನ್ನು ಅಭಿನಂದಿಸುತ್ತೇನೆ.

ಅವರಿಗೆ ಇನ್ನಷ್ಟು ಒಳ್ಳೆಯ ಕೆಲಸ ಕಾರ್ಯ ಗಳನ್ನು ಮಾಡುವ ಅನುಗ್ರಹ ಸಿಗಲಿ ಎಂದು ದೇವರಲ್ಲಿ ಬೇಡಿಕೊಳುತ್ತೇನೆ ಎಂದು ಪುಣೆ ಬಂಟರ ಸಂಘದ ಅಧ್ಯಕ್ಷ ಸಂತೋಷ್‌ ಶೆಟ್ಟಿ ಇನ್ನಾ ಕುರ್ಕಿಲ್‌ ಬೆಟ್ಟು ತಿಳಿಸಿದರು. ಪುಣೆ ಬಂಟರ ಸಂಘದ ದಕ್ಷಿಣ ಪೂರ್ವ
ವಲಯ ಪ್ರಾದೇಶಿಕ ಸಮಿತಿ ವತಿಯಿಂದ ಆ. 27ರಂದು ಪುಣೆ ಬಂಟರ ಭವನದ ಓಣಿ ಮಜಲು ಜಗನ್ನಾಥ್‌ ಶೆಟ್ಟಿ ಸಾಂಸ್ಕೃತಿಕ
ಭವನದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಅವರು ಪುಣೆ ಬಂಟರ ಸಂಘದ ಪ್ರಧಾನ ಕಾರ್ಯದರ್ಶಿ ಅಜಿತ್‌ ಹೆಗ್ಡೆ ದಂಪತಿಯನ್ನು ಸಮ್ಮಾನಿಸಿ ಮಾತನಾಡಿದರು.

ಅಜಿತ್‌ ಹೆಗ್ಡೆ ಅವರನ್ನು ಅವರ ಸಾಮಾಜಿಕ, ಶೈಕ್ಷಣಿಕ, ಧಾರ್ಮಿಕ ಸೇವೆ ಮತ್ತು ಬಂಟರ ಭವನದ ನಿರ್ಮಾಣ ಕಾರ್ಯದಲ್ಲಿ ಅವರ ಅವಿರತ ಶ್ರಮವನ್ನು ಗುರುತಿಸಿ ಸಮ್ಮಾನಿಸಲಾಯಿತು. ಈ ಸಂದರ್ಭ ಸಮಾಜ ಸೇವಕ ಕಾಪು ಲೀಲಾಧರ ಶೆಟ್ಟಿ ಮತ್ತು ಜಿಲ್ಲಾ – ರಾಜ್ಯಮಟ್ಟದಲ್ಲಿ ವೇಟ್‌ ಲಿಫ್ಟಿಂಗ್‌ನಲ್ಲಿ ಚಿನ್ನದ ಪದಕ ಪಡೆದ ವೈಷ್ಣವಿ ವಸಂತ್‌ ಶೆಟ್ಟಿಯವರನ್ನು ಬಂಟರ ಸಂಘದ
ದಕ್ಷಿಣ ಪೂರ್ವ ಪ್ರಾದೇಶಿಕ ಸಮಿತಿಯಿಂದ ಸಮ್ಮಾನಿಸಲಾಯಿತು. ಸಮ್ಮಾನಪತ್ರವನ್ನು ಕ್ರಮವಾಗಿ ಸುಧಾಕರ್‌ ಸಿ. ಶೆಟ್ಟಿ , ಸಂಪತ್‌ ವಿ. ಶೆಟ್ಟಿ, ಅಧ್ಯಾ ಎಸ್‌. ಶೆಟ್ಟಿ ವಾಚಿಸಿದರು.

ದಕ್ಷಿಣ ಪೂರ್ವ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ ಶೇಖರ್‌ ಶೆಟ್ಟಿ, ಮಹಿಳಾ ವಿಭಾಗದ ಅಧ್ಯಕ್ಷೆ ಸುಲತಾ ಎಸ್‌. ಶೆಟ್ಟಿ, ದಕ್ಷಿಣ
ಪೂರ್ವ ಪ್ರಾದೇಶಿಕ ಸಮಿತಿಯ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಯಶೋದಾ ಶೆಟ್ಟಿ ಉಪಸ್ಥಿತರಿದ್ದರು.

Advertisement

ಗಣ್ಯರನ್ನು ದಕ್ಷಿಣ ಪ್ರಾದೇಶಿಕ ಸಮಿತಿ ವತಿಯಿಂದ ಗೌರವಿಸಲಾಯಿತು. ದಕ್ಷಿಣ ಪೂರ್ವ ಪ್ರಾದೇಶಿಕ ಸಮಿತಿಯ ಮಾಜಿ
ಅಧ್ಯಕ್ಷರಾದ ರಘುರಾಮ್‌ ರೈ, ಭಾಸ್ಕರ್‌ ವಿ. ಶೆಟ್ಟಿ, ವಸಂತ್‌ ಎ. ಶೆಟ್ಟಿ , ರವಿ ಶೆಟ್ಟಿ ಕಾಪು, ಸಮಿತಿಯ ಪದಾಧಿಕಾರಿಗಳಾದ ಸುಭಾಸ್‌ ಎ. ಶೆಟ್ಟಿ, ಸುಧಾಕರ್‌ ಶೆಟ್ಟಿ, ದಾಮೋದರ ಜಿ. ಶೆಟ್ಟಿ, ಪುಷ್ಪರಾಜ್‌ ಶೆಟ್ಟಿ, ವಸಂತ್‌ ಎಸ್‌. ಶೆಟ್ಟಿ, ಜಗದೀಶ್‌ ಬಿ. ಶೆಟ್ಟಿ, ಸುಧಾಕರ್‌ ಬಿ. ಶೆಟ್ಟಿ, ರತ್ನಾಕರ್‌ ಆರ್‌. ಶೆಟ್ಟಿ, ಅರುಣ್‌ ಎಂ. ಶೆಟ್ಟಿ, ಸಂಜೀವ ಕೆ. ಶೆಟ್ಟಿ, ದಿವಾಕರ್‌ ಶೆಟ್ಟಿ, ಸಂಪತ್‌ ಶೆಟ್ಟಿ, ಜಯ ಎಸ್‌. ಶೆಟ್ಟಿ, ರಮೇಶ್‌ ಶೆಟ್ಟಿ, ದಿನೇಶ್‌ ಶೆಟ್ಟಿ, ರಾಜೇಶ್‌ ಶೆಟ್ಟಿ, ಮಹಿಳಾ ವಿಭಾಗದ ವಿನೋದಾ ಎಸ್‌. ಶೆಟ್ಟಿ, ಲಲಿತಾ ಟಿ. ಶೆಟ್ಟಿ, ರೋಹಿಣಿ ಟಿ. ಶೆಟ್ಟಿ, ವಾರಿಜಾ ಎಸ್‌. ಶೆಟ್ಟಿ, ಶೋಭಾ ಎಸ್‌. ಶೆಟ್ಟಿ, ಸುಮಂಗಲಾ ಎಸ್‌. ಶೆಟ್ಟಿ, ಲತಾ ಶೆಟ್ಟಿ, ರೂಪಾ ಎಂ. ಶೆಟ್ಟಿ, ಭಾರತಿ ಡಿ. ಶೆಟ್ಟಿ, ಪ್ರೇಮಾ ಎಸ್‌. ಶೆಟ್ಟಿ, ಸುನಿತಾ ಆರ್‌. ಶೆಟ್ಟಿ, ಅಂಬಿಕಾ ಬಿ. ಶೆಟ್ಟಿ, ಲೀಲಾ ವಿ. ಶೆಟ್ಟಿ, ವಿನೋದಾ ವಿ. ಶೆಟ್ಟಿ ಮತ್ತು ಪದಾಧಿಕಾರಿಗಳು, ಪುಣೆಯ ವಿವಿಧ ಸಂಘ ಸಂಸ್ಥೆಗಳ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಭಾಗವಹಿಸಿದ್ದರು. ಮೋಹನ್‌ ರೈ ಕರ್ನೂರು ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

ಪುಣೆ ಬಂಟರ ಸಂಘದ ಶಕ್ತಿಗಳಾಗಿ ಕೆಲಸ ಮಾಡುವ ಪ್ರಾದೇಶಿಕ ಸಮಿತಿಗಳಲ್ಲಿ ಒಂದಾದ ದಕ್ಷಿಣ ಪೂರ್ವ ಪ್ರಾದೇಶಿಕ ಸಮಿತಿ ನನ್ನನ್ನು ಗುರುತಿಸಿ ಸಮ್ಮಾನಿಸಿದೆ. ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಪ್ರಾದೇಶಿಕ ಸಮಿತಿಯು ಉತ್ತಮ ಕಾರ್ಯ ಯೋಜನೆಗಳ ಮೂಲಕ ದೇವರು ಮೆಚ್ಚುವಂತಹ ಕಾರ್ಯ ಮಾಡುತ್ತಿದೆ. ಬಂಟರ ಸಂಘಕ್ಕೆ ಕೀರ್ತಿ ತರುವಂತಹ ಕಾರ್ಯಗಳನ್ನು ಮಾಡುತ್ತಿವೆ.
ಅಜಿತ್‌ ಹೆಗ್ಡೆ, ಪ್ರಧಾನ ಕಾರ್ಯದರ್ಶಿ, ಪುಣೆ ಬಂಟರ ಸಂಘ

ಅಜಿತ್‌ ಹೆಗ್ಡೆ ದಂಪತಿಗೆ ಸಮ್ಮಾನ ಮಾಡಬೇಕೆಂಬ ನಮ್ಮ ಕನಸು ಇಂದು ನನಸಾಯಿತು. ಶಿಸ್ತಿನ ಸಿಪಾಯಿಯಂತಿರುವ
ಅಜಿತ್‌ ಹೆಗ್ಡೆ ಪ್ರಾದೇಶಿಕ ಸಮಿತಿಗಳ ಬಗ್ಗೆ ತುಂಬಾ ಪ್ರೀತಿ – ಕಾಳಜಿ ವಹಿಸಿ ಅದರ ಕಾರ್ಯ ಯೋಜನೆಗಳಿಗೆ ನಿರಂತರ ಪ್ರೋತ್ಸಾಹ
ನೀಡುತ್ತಿದ್ದಾರೆ. ಅವರನ್ನು ಅಪಾರ ಸಮಾಜ ಬಾಂಧವರ ಮುಂದೆ ಸಮ್ಮಾನಿಸುವುದು ನಮ್ಮ ಕರ್ತವ್ಯವಾಗಿತ್ತು.ನಮ್ಮ ಬಂಟರ ಸಂಘದ ಅಧ್ಯಕ್ಷರು ಮತ್ತು ಕಾರ್ಯಕಾರಿ ಸಮಿತಿ ಸದಸ್ಯರ ಸಹಕಾರ ಸದಾ ನಮಗೆ ಸಿಗಲಿ ಎಂದು ಆಶಿಸುತ್ತೇನೆ.
ಶೇಖರ್‌ ಶೆಟ್ಟಿ, ಕಾರ್ಯಾಧ್ಯಕ್ಷರು, ದಕ್ಷಿಣ ಪೂರ್ವ ಪ್ರಾದೇಶಿಕ ಸಮಿತಿ, ಬಂಟರ ಸಂಘ ಪುಣೆ

Advertisement

Udayavani is now on Telegram. Click here to join our channel and stay updated with the latest news.

Next