ಪುಣೆ: ಪುಣೆಯ ರಾಜಾಪುರ ಸಾರಸ್ವತ ಬ್ರಾಹ್ಮಣ ಸಂಘ ಇದರ ವತಿಯಿಂದ ಸಮಾಜ ಭಾಂದವರಿಗಾಗಿ ವಿಹಾರಕೂಟವು ಎ. 15 ರಂದು ಪುಣೆಯ ಯಾವತ್ ಮೆಹೆರ್ ರಿಟ್ರಿಟ್ ರೆಸಾರ್ಟ್ ನಲ್ಲಿ ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಜರಗಿತು.
ಸಂಘದ ಅಧ್ಯಕ್ಷ ಮಾಳ ಸದಾನಂದ ನಾಯಕ್ ಅವರ ಮುಂದಾಳತ್ವದಲ್ಲಿ ಜರಗಿದ ಈ ವಿಹಾರ ಕೂಟದಲ್ಲಿ ಸುಮಾರು 50 ಕ್ಕಿಂತಲೂ ಹೆಚ್ಚಿನ ಸಮಾಜ ಬಾಂಧವರು ಪಾಲ್ಗೊಂಡಿದ್ದರು. ಮಕ್ಕಳು, ಮಹಿಳೆಯರು, ಹಿರಿಯರು ಸೇರಿದಂತೆ ಸಮಾಜದ ಪ್ರಮುಖರು ಭಾಗವಹಿಸಿ ವಿವಿಧ ಮನೋರಂಜನಾ ಕಾರ್ಯಕ್ರಮಗಳು, ಆಟೋಟ ಸ್ಪರ್ಧೆಗಳಲ್ಲಿ ಪಾಲ್ಗೊಂಡಿದ್ದರು. ವಿಹಾರಕೂಟದಲ್ಲಿ ಸಂಘದ ಪ್ರಮುಖರ ಪ್ರಾಯೋಜಕತ್ವದಲ್ಲಿ ಊಟ, ತಿಂಡಿಯ ವ್ಯವಸ್ಥೆಯನ್ನು ಆಯೋಜಿಸಲಾಗಿತ್ತು.
ಸಂಘದ ಅಧ್ಯಕ್ಷರಾದ ಸದಾನಂದ ನಾಯಕ್ ಅವರು ಮಾತನಾಡಿ, ರಾಜಪುರ ಸಾರಸ್ವತ ಬ್ರಾಹ್ಮಣ ಸಂಘವು ಪುಣೆಯಲ್ಲಿರುವ ಸಮಾಜ ಭಾಂದವರಿಗಾಗಿ ವರ್ಷಂಪ್ರತಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ. ಅಂತಹ ಕಾರ್ಯಕ್ರಮಗಳಲ್ಲಿ ಈ ವಿಹಾರ ಕೂಟವು ಒಂದು. ಪ್ರತಿ ವರ್ಷವೂ ಪುಣೆಯ ಆಸುಪಾಸಿನಲ್ಲಿರುವ ಪ್ರೇಕ್ಷಣಿಯ ಸ್ಥಳಗಳಿಗೆ, ರೆಸಾರ್ಟ್ ಇನ್ನಿತರ ಸ್ಥಳಗಳಲ್ಲಿ ಸಂಘದ ಎÇÉಾ ಸದಸ್ಯರ ಸಹಕಾರದೊಂದಿಗೆ ಮನೋರಂಜನೆಯ ಜೊತೆಯಲ್ಲಿ ಆಟೋಟ ಸ್ಪರ್ಧೆಗಳು ಪ್ರತಿಭಾ ಸ್ಪರ್ಧೆಗಳೊಂದಿಗೆ ವಿಹಾರಕೂಟವನ್ನು ಏರ್ಪಡಿಸುತ್ತಿದ್ದೇವೆ. ಹೆಚ್ಚಿನ ಸಮಾಜ ಭಾಂದವರು ಇದರಲ್ಲಿ ಪಾಲ್ಗೊಂಡು ಯಶಸ್ವಿಗೆ ಸಹಕರಿಸುತ್ತಾರೆ. ಇನ್ನು ಮುಂದೆಯೂ ಸಂಘದ ಮುಖಾಂತರ ನಡೆಯುವ ಕಾರ್ಯಕ್ರಮಗಳಿಗೆ ಇದಕ್ಕಿಂತಲೂ ಹೆಚ್ಚಿನ ಸಹಕಾರವನ್ನು ನೀಡಬೇಕು. ಅಲ್ಲದೆ ಈ ವಿಹಾರ ಕೂಟಕ್ಕೆ ಸಹಕರಿಸಿದ ಎÇÉಾ ಮಹನೀಯರಿಗೆ ಕೃತಜ್ಞತೆ ಸಲ್ಲಿಸಿದರು.
ಸಂಘದ ಪ್ರಮುಖರಾದ ನಟರಾಜ್ ಕಾಮತ್, ಸುದರ್ಶನ್ ನಾಯಕ್, ಮೋಹನ್ ನಾಯಕ್, ಪ್ರತಿಮಾ ನಾಯಕ್, ಬಾಲಕೃಷ್ಣ ಕೇಳ್ಕರ್, ಗಣೇಶ್ ಪ್ರಭು ಮತ್ತು ಸಂಸ್ಥೆಯ ಪದಾಧಿಕಾರಿಗಳು, ಸಮಾಜ ಬಾಂಧವರು ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಿದರು.
ವರದಿ : ಹರೀಶ್ ಮೂಡಬಿದ್ರಿ