ಪುಣೆ: ಪುಣೆಯ ಶ್ರೀ ಗುರುದೇವ ಸೇವಾಬಳಗ ಹಾಗೂ ಶ್ರೀ ವಜ್ರಮಾತ ಮಹಿಳಾ ವಿಕಾಸ ಕೇಂದ್ರ ಇದರ ವತಿಯಿಂದ ಶ್ರಾವಣ ಮಾಸದಲ್ಲಿ ಪ್ರತಿ ವರ್ಷದಂತೆ ನಡೆಯುವ ಪುಣ್ಯ ಜ್ಯೋತಿರ್ಲಿಂಗ ದರ್ಶನದ ತೀರ್ಥ ಯಾತ್ರೆ ಭಾಗವಾಗಿ ಈ ಬಾರಿ ರಾಜ್ಯದ ಮೂರು ಜ್ಯೋತಿರ್ಲಿಂಗಗಳ ದರ್ಶನ ಮಾಡಲಾಯಿತು.
ಪುಣೆ ಶ್ರೀ ಗುರುದೇವ ಸೇವಾ ಬಳಗದ ಅಧ್ಯಕ್ಷ ಸದಾನಂದ ಕೆ. ಶೆಟ್ಟಿ ಅವರ ಮುಂದಾಳತ್ವದಲ್ಲಿ ಸುಮಾರು 40 ಮಂದಿ ಯಾತ್ರಾರ್ಥಿಗಳು ಭಾರತದ ಪವಿತ್ರವಾದ 12 ಜ್ಯೋತಿರ್ಲಿಂಗಗಳ ಪೈಕಿ ಮಧ್ಯ ಮಹಾರಾಷ್ಟ್ರದಲ್ಲಿರುವ ಪವಿತ್ರ ಜ್ಯೋತಿರ್ಲಿಂಗಳಾದ ಪಾರ್ಲಿ ವೈದ್ಯನಾಥ ಶಿವಮಂದಿರ, ಔಂದ್‌ನ ದಾರುಕಾವನ ನಾಗನಾಥ ಶಿವಾಲಯ ಮತ್ತು ಎಲ್ಲೋರಾದ ವಿಘ್ನೇಶ್ವರ ದೇವಾಲಯಗಳಲ್ಲಿ ಪೂಜೆ ಸಲ್ಲಿಸಿ ಪುನೀತರಾದರು.
ಈ ಮಧ್ಯೆ ಅಷ್ಟ ವಿನಾಯಕ ಗಣಪತಿಗಳಲ್ಲಿ ಒಂದಾದ ರಂಜನ್‌ಗಾಂವ್‌ನ ಮೋರೇಶ್ವರ ದೇವಾಲಯ ,ದೇವಗಡ್‌ನ ಶ್ರೀ ದತ್ತಮಂದಿರ ,ಶನಿ ಶಿಂಗಾ¡ಪುರ ಶನಿ ದೇವಾಲಯಗಳಿಗೂ ತೆರಳಿ ಪೂಜೆ ಸಲ್ಲಿಸಲಾಯಿತು. ಯಾತ್ರೆಯನ್ನು ಬಳಗದ ಪ್ರಮುಖರಾದ ಉಷಾ ಕುಮಾರ್ ಶೆಟ್ಟಿ ಅವರು ಆಯೋಜಿಸುವಲ್ಲಿ ಸಹಕರಿಸಿದರು.
ಅಧ್ಯಕ್ಷ ಸದಾನಂದ ಕೆ. ಶೆಟ್ಟಿ ಮತ್ತು ಕಾರ್ಯದರ್ಶಿ ಎನ್ ರೋಹಿತ್ ಡಿ. ಶೆಟ್ಟಿ ,ಕೊಶಾಧಿಕಾರಿ ರಂಜಿತ್ ಶೆಟ್ಟಿ, ಮಾಜಿ ಅಧ್ಯಕ್ಷ ನಾರಾಯಣ ಶೆಟ್ಟಿ ಮತ್ತು ಬಳಗದ ಪ್ರಮುಖರೆಲ್ಲರು ತನುಮನ ಧನದಿಂದ ಸಹಾಯ ನೀಡಿ ಸಹಕರಿಸಿದರು.
ಚಿತ್ರ-ವರದಿ: ಹರೀಶ್ ಮೂಡಬಿದ್ರೆ