ಮಹಾರಾಷ್ಟ್ರ: ಮಹಿಳೆಯ ಮುಟ್ಟಿನ ರಕ್ತವನ್ನು ಸಂಗ್ರಹಿಸಿ ಅದನ್ನು ಮಂತ್ರವಾದಿಯೊಬ್ಬರಿಗೆ ಅಘೋರಿ ಪೂಜೆ ಮಾಡಲು ನೀಡಿದ ಆಘಾತಕಾರಿ ಘಟನೆ ಮಹಾರಾಷ್ಟ್ರದ ಬೀಡ್ ಜಿಲ್ಲೆಯಲ್ಲಿ ನಡೆದಿರುವುದು ಬೆಳಕಿಗೆ ಬಂದಿದೆ.
ಪುಣೆ ಮೂಲದ 27 ವರ್ಷದ ಮಹಿಳೆ ತನ್ನ ಗಂಡ ಹಾಗೂ ಮಾವ ಮುಟ್ಟಿನ ರಕ್ತವನ್ನು ಸಂಗ್ರಹಿಸಿ ಅದನ್ನು ಮಂತ್ರವಾದಿಯೊಬ್ಬರಿಗೆ ʼಅಘೋರಿ ಪೂಜೆʼಗಾಗಿ ನೀಡಿದ್ದಾರೆಂದು ಆರೋಪಿಸಿ ದೂರು ದಾಖಲಿಸಿದ್ದಾರೆ.
2019 ರಿಂದ ತನಗೆ ಗಂಡ ಹಾಗೂ ಮಾವ ದೈಹಿಕ ಮತ್ತು ಮಾನಸಿಕ ಕಿರುಕುಳ ನೀಡುತ್ತಿದ್ದಾರೆ. 2022 ರಲ್ಲಿ ಆರೋಪಿಗಳು ತನ್ನ ಮುಟ್ಟಿನ ರಕ್ತವನ್ನು ಬಲವಂತವಾಗಿ ಸಂಗ್ರಹಿಸಿ, ಅದನ್ನು 50 ಸಾವಿರ ರೂ.ಗೆ ʼಅಘೋರಿ ಪೂಜೆʼಗಾಗಿ ಕೊಟ್ಟಿದ್ದಾರೆ ಎಂದು ಆರೋಪಿಸಿ ಮಹಿಳೆ ತಾಯಿ ಮನೆಗೆ ಬಂದ ಬಳಿಕ ವಿಶ್ರಾಂತವಾಡಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಪೊಲೀಸರು ಐಪಿಸಿ ಸೆಕ್ಷನ್ 354 (a), 377, 504, 498(a), 323 ಮತ್ತು 34 ರ ಅಡಿಯಲ್ಲಿ ಕೇಸ್ ದಾಖಲಿಸಿದ್ದಾರೆ.
ಪುಣೆಯಲ್ಲಿ ಇಂಥ ಘಟನೆ ನಡೆದಿರುವುದು ಇದೇ ಮೊದಲಲ್ಲ ಕಳೆದ ವರ್ಷ ʼಅಘೋರಿ ಪೂಜೆʼ ವೇಳೆ ಮಹಿಳೆಯೊಬ್ಬಳನ್ನು ಮನುಷ್ಯ ಹಾಗೂ ಪ್ರಾಣಿಯ ಮೂಳೆಯ ಪುಡಿಗಳನ್ನು ತಿನ್ನುವಂತೆ ಆಕೆಯ ಗಂಡ ಹಾಗೂ ಮಾವ ಬಲವಂತ ಮಾಡಿದ್ದರು. ಹೀಗೆ ಮಾಡಿದರೆ ಮಗುವಾಗುತ್ತದೆ ಎಂದು ಅವರು ನಂಬಿದ್ದರು.